HEALTH TIPS

ಕೊರೋನಾದಿಂದ ಚೇತರಿಸಿಕೂಂಡರೂ ಪ್ರತಿಕಾಯಗಳು ಕ್ಷೀಣಿಸುತ್ತಿದ್ದಂತೆಯೇ ಸೋಂಕು ಮರುಕಳಿಸಬಹುದು!-ಐಸಿಎಂಆರ್ ಎಚ್ಚರಿಕೆ

   

         ನವದೆಹಲಿ: ಕೊರೋನಾದಿಂದ ಚೇತರಿಸಿಕೊಂಡ ವ್ಯಕ್ತಿಗಳಲ್ಲಿ ಪ್ರತಿಕಾಯಗಳು ಕ್ಷೀಣಿಸಿದರೆ ಸೋಂಕು ಮರುಕಳಿಸಬಹುದು ಎಂದು ಐಸಿಎಂಆರ್ ಎಚ್ಚರಿಕೆ ನೀಡಿದೆ. 

         ರೋಗ ನಿಯಂತ್ರಣ ಕೇಂದ್ರ (ಅಮೆರಿಕ) ದ ಪ್ರಕಾರ ಒಮ್ಮೆ ಕೊರೋನಾ ಸೋಂಕು ತಗುಲಿ ಆತ ಚೇತರಿಸಿಕೊಂಡ 90 ದಿನಗಳಲ್ಲಿ ಸೋಂಕು ಮರುಕಳಿಸುವ ಸಾಧ್ಯತೆ ಇದೆ, ಆದರೆ ಇದಕ್ಕೆ ಹಲವು ಅಧ್ಯಯನಗಳಲ್ಲಿ ಪ್ರತಿಕಾಯಗಳು 5 ತಿಂಗಳವರೆಗೆ ಇರಲಿದೆ ಎನ್ನುತ್ತಿವೆ. 

         ಆದರೆ ಇದು ಹೊಸ ರೋಗವಾಗಿರುವುದರಿಂದ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ, ಒಮ್ಮೆ ಪ್ರತಿಕಾಯಗಳು ಕ್ಷೀಣಿಸುತ್ತಿದ್ದಂತೆಯೇ ಸೋಂಕು ಮರುಕಳಿಸಬಹುದು, ಆದ್ದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಐಸಿಎಂಆರ್ ನಿರ್ದೇಶಕ ಬಲರಾಮ್ ಭಾರ್ಗವ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries