ಕುಂಬಳೆ: ಕೇರಳದ ತ್ರಿಸ್ತರ ಚುನಾವಣೆಯಲ್ಲಿ ಎಡರಂಗ ಹಾಗೂ ಐಕ್ಯರಂಗ ಪರಸ್ಪರ ಹೊಂದಾಣಿಕೆ ರಾಜಕೀಯಕ್ಕೆ ಆಂತರಿಕ ಒಪ್ಪಂದ ಮಾಡಿ ಕೊಂಡಿದೆ. ಇವರಿಗೆ ಸಿದ್ದಾಂತ ಎನುನ್ನುವುದಿಲ್ಲ ಎಂದು ಗುರುವಾರ ಕುಂಬಳೆಯಲ್ಲಿ ನಡೆದ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಸಭೆಯಲ್ಲಿ ಅಭಿಪ್ರಾಯಪಡಲಾಗಿದೆ.
ಎಸ್ ಡಿ ಪಿ ಐ ಒಂದು ರಾಜಕೀಯ ಪಕ್ಷವಲ್ಲ. ಅದೊಂದು ಸಂಘಟನೆ ಮಾತ್ರ. ಚುನಾವಣಾ ಕಾಲದಲ್ಲಿ ತಮ್ಮ ಸಂಘಟನೆಯ ಕೆಲವು ತೀವ್ರವಾದಿ ಯುವಕರನ್ನು ಸೇರಿಸಿ ಮುಸ್ಲಿಂ ಲೀಗ್ ಹಾಗೂ ಎಡರಂಗ ದಿಂದ ಹಣ ಪಡೆದು ಕಿಸೆ ತುಂಬಿಸಲು ಇರುವ ಒಂದು ತಂತ್ರ. ಆದ್ದರಿಂದ ಎಸ್ ಡಿ ಪಿ ಐ ಚುನಾವಣೆ ಗಳಲ್ಲಿ ಸ್ಪರ್ಧಿಸುವುದಿಲ್ಲ, ಬೆಂಬಲ ನೀಡುವುದಾಗಿ ಮುಸ್ಲಿಂ ಲೀಗ್ ಅಥವಾ ಎಡರಂಗವನ್ನು ವಂಚಿಸುವ ಸಂಸ್ಥೆ ಎಂದು ಬಿಜೆಪಿ ಲೇವಡಿ ಮಾಡಿದೆ.
ಈ ಬಾರಿಯೂ ತ್ರಿಸ್ತರ ಚುನಾವಣೆಗಯಲ್ಲಿ ಜಿಲ್ಲೆಯಲ್ಲಿ ಎಸ್ ಡಿ ಪಿ ಐ ಸ್ಪರ್ಧಿಸುವುದಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸದೆ ಇರುವ ಸಂಘಟನೆ ರಾಜಕೀಯ ಪಕ್ಷವಾಗಲು ಹೇಗೆ ಸಾಧ್ಯ ಎಂದು ಬಿಜೆಪಿ ಪ್ರಶ್ನಿಸಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಸಭೆ ಉದ್ಘಾಟಿಸಿದರು. ಎಣ್ಮಕಜೆ,ಪೈವಳಿಕೆಗಳಲ್ಲಿ ಎಡರಂಗ,ಐಕ್ಯರಂಗ ಪರಸ್ಪರ ಹೊಂದಾಣಿಕೆ ರಾಜಕೀಯ ಕಾಂಗ್ರೆಸ್ ಹಾಗೂ ಸಿಪಿಐ ಪಕ್ಷದ ನಾಶಕ್ಕೆ ಕಾರಣ ವಾಗಿದೆ. ಮುಸ್ಲಿಂ ಲೀಗ್ ತನ್ನ ರಾಜಕೀಯ ಅಧಿಕಾರ ದಾಹಕ್ಕೆ ಜಿಲ್ಲಾ ಪಂಚಾಯತಿ ಅಧಿಕಾರವನ್ನು ಹೊಂದಣಿಕೆಯಂತೆ ಕಾಂಗ್ರೆಸ್ ಗೆ ನೀಡದೆ ವಂಚಿಸಿರುವುದೇ ಇದಕ್ಕೆ ಉದಾಹರಣೆ ಎಂದು ಅವರು ಹೇಳಿದರು. ರಾಜ್ಯ ಸರ್ಕಾರದ ವಂಚನೆ, ಚಿನ್ನ ಸಾಗಾಟ ಪ್ರಕರಣಗಳನ್ನು ಮುಚ್ಚಿಹಾಕಲು ಮಂಜೇಶ್ವರ ಶಾಸಕರ ಸಂಚು ಇದೆಯೇ ಎಂದು ಬಿಜೆಪಿ ಪ್ರಶ್ನಿಸಿದೆ.
ಮಂಡಲಾಧ್ಯಕ್ಷ ಮಣಿಕಂಠ ರೈ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಸುರೇಶ್ ಕುಮಾರ್ ಶೆಟ್ಟಿ, ಎ.ಕೆ. ಕಯ್ಯಾರ್, ರೂಪವಾಣಿ ಆರ್.ಭಟ್, ಸತೀಶ್ಚಂದ್ರ ಭಂಡಾರಿ ಕೋಳಾರು, ವಿಜಯ್ ರೈ, ಸುಧಾಮ ಗೋಸಾಡ, ಸತ್ಯಶಂಕರ್ ಭಟ್, ಉಪಸ್ಥಿತರಿದ್ದರು. ಮುರಳೀಧರ್ ಯಾದವ್ ಸ್ವಾಗತಿಸಿ, ಆದರ್ಶ್ ಬಿ.ಎಂ ವಂದಿಸಿದರು.