ತಿರುವಾನಂತಪುರ: ಕೋವಿಡ್ ಹಿನ್ನೆಲೆಯಲ್ಲಿ ಡಿಸೆಂಬರ್ ನಲ್ಲಿ ನಡೆಯಲಿರುವ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಈ ಬಾರಿ ಭಾರೀ ನಿಯಂತ್ರಣಗಳೊಂದಿಗೆ ಅತ್ಯಪೂರ್ವವಾಗಿ ನಡೆಯಲಿದೆ ಎಂದು ಆಯೋಗ ಸೂಚನೆ ನೀಡಿದೆ. ಸಾರ್ವಜನಿಕ ಸಭೆ,ಮೆರವಣಿಗೆಗಳು ಈ ಬಾರಿ ಇರುವುದಿಲ್ಲ ಎಂದು ಆಯೋಗ ಸೂಚನೆ ನೀಡಿ ಜನಸಾಮಾನ್ಯರಿಗೆ ಖುಷಿ ನೀಡಿದೆ!
ಚುನಾವಣಾ ಆಯೋಗವು ಉದ್ದೇಶಿತ ಚುನಾವಣಾ ಪ್ರಚಾರಕ್ಕಾಗಿ ಮಾನದಂಡಗಳನ್ನು ಬಿಡುಗಡೆ ಮಾಡಿದೆ. ನಾಮಪತ್ರ ಸಲ್ಲಿಕೆಗೆ ಅಭ್ಯರ್ಥಿಗಳು ಸೇರಿದಂತೆ ಮೂವರು ಅಭ್ಯರ್ಥಿಗಳು ಮಾತ್ರ ಹಾಜರಿರಬೇಕು ಎಂದು ಆಯೋಗ ಹೇಳಿದೆ. ಅಭ್ಯರ್ಥಿಗಳಿಗೆ ಹೂಮಾಲೆ, ಹೂಗುಚ್ಚ,ಗಳು, ನೋಟ್, ಹಾರ ಮತ್ತು ಶಾಲುಗಳನ್ನು ಹಾಕುವುದನ್ನು ನಿರ್ಬಂಧಿಸಲಾಗಿದೆ. ಮತದಾನ ಕೇಂದ್ರಗಳಲ್ಲಿ ಸಾಬೂನು, ನೀರು ಮತ್ತು ಸ್ಯಾನಿಟೈಜರ್ ಕಡ್ಡಾಯವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಚುನಾವಣಾ ಅಧಿಕಾರಿಗಳಿಗೆ ತರಬೇತಿಯಿಂದ ಹಿಡಿದು ಮತ ಎಣಿಕೆಯವರೆಗೆ ಸಂಹಿತೆ ಮಾನದಂಡಗಳಿಗೆ ಅನುಗುಣವಾಗಿರಬೇಕು ಎಂದು ರಾಜ್ಯ ಚುನಾವಣಾ ಆಯೋಗ ಹೇಳಿದೆ.