ನವದೆಹಲಿ: ಒಡಿಶಾದಲ್ಲಿ ವಾರ್ಷಿಕವಾಗಿ ನಡೆಯುವ ಚತಾರ್ ಯಾತ್ರದಲ್ಲಿ ಪ್ರಾಣಿಬಲಿಯನ್ನು ನಿರ್ಬಂಧಿಸಿ ಒಡಿಶಾ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಕಾಳಹಂಡಿ ಜಿಲ್ಲೆಯಲ್ಲಿ ಚತಾರ್ ಯಾತ್ರಾ ಹಬ್ಬದ ಭಾಗವಾಗಿ ಪ್ರಾಣಿ ಬಲಿ ಪದ್ಧತಿ ಇದೆ. ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಮೂರ್ತಿ ಎಸ್ ಎ ಬೋಬ್ಡೆ ಹಾಗೂ ನ್ಯಾ. ಎಎಸ್ ಬೋಪಣ್ಣ ಹಾಗು ರಾಮಸುಬ್ರಹ್ಮಣಿಯನ್ ಅವರಿದ್ದ ಪೀಠ ಒಡಿಶಾ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಮಧ್ಯಂತರ ತಡೆ ನೀಡಿದೆ. ಹೈಕೋರ್ಟ್ ಆದೇಶವನ್ನು ಭವಾನಿ ಶಂಕರ್ ನೈಲ್ ಅವರು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಪ್ರಾಣಿಬಲಿಯನ್ನು ಖಂಡಿಸಿದ್ದ ಹೈಕೋರ್ಟ್, ಮೌಢ್ಯದ ಆಚರಣೆಯಾಗಿರುವ ಪ್ರಾಣಿಬಲಿ ನಡೆಯದಂತೆ ಜಿಲ್ಲಾಡಳಿತ ಜನಜಾಗೃತಿ ಮೂಡಿಸಬೇಕೆಂದು ಹೇಳಿತ್ತು. ಮಣಿಕೇಶ್ವರಿ ದೇವರನ್ನು ಸಂಪ್ರೀತಗೊಳಿಸಲು ಪ್ರಾಣಿ ಬಲಿ ನಡೆಯುತ್ತಿದ್ದು, ಮಕ್ಕಳ ರಕ್ತವನ್ನು ನೋಡಲು ಹೇಗೆ ಪೆÇೀಷಕರು ಬಯಸುವುದಿಲ್ಲವೋ ಅದೇ ರೀತಿಯಲ್ಲಿ ದೇವರೂ ಸಹ ತನ್ನ ಮಕ್ಕಳಂತೆ ಇರುವ ಪ್ರಾಣಿಗಳ ಬಲಿಯನ್ನು ಬಯಸುವುದಿಲ್ಲ ಎಂದು ಹೇಳಿತ್ತು.