ಉಪ್ಪಳ: ಬಾಯಾರು ಸಮೀಪದ ಹಿರಣ್ಯ ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಇಂದು ನವರಾತ್ರಿಯ ಪ್ರಯಕ್ತ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಮುಂಜಾನೆ ಪೂಜಾವಿಧಿಗಳು ಆರಂಭವಾಗಲಿವೆ. ವಿಶೇಷವಾಗಿ ಹಿಂದೆ ಬಾಕಿಯಾದ ಚಂಡಿಕಾಹೋಮ ನೆರವೇರಲಿದೆ. ಭಕ್ತ ಮಹನೀಯರು ಪೂಜಾವಿಧಿಗಳಲ್ಲಿ ಪಾಲ್ಗೊಂಡು ಶ್ರೀ ದೇವರ ಪ್ರೀತ್ಯರ್ಥ ತುಳಸಿ, ಕೇಪುಳ, ಸಿಂಗಾರ , ಬಿಲ್ವಪತ್ರೆ, ತೆಂಗಿನಕಾಯಿ, ಸೀಯಾಳ ಇತ್ಯಾದಿಗಳನ್ನು ಸಮರ್ಪಿಸಬಹುದಾಗಿದೆ. ಅಲ್ಲದೆ ಅನ್ನ ಸಂತರ್ಪಣೆಗಾಗಿ ಮಜ್ಜಿಗೆ, ತರಕಾರಿಗಳನ್ನೂ ತರಲು ಅವಕಾಶವಿದೆ. ಗಣಪತಿ ಹವನ, ದುರ್ಗಾ ಹೋಮ ಜರಗಲಿದೆ. ದುರ್ಗಾ ಸಪ್ತಶತೀ ಪಾರಾಯಣವೂ ಇರುವುದು. ಸಂಜೆ ಭಜನೆ, ಪೂಜೆ, ಅನ್ನಪ್ರಸಾದ ವಿತರಣೆ ನಡೆಯಲಿದೆ ಎಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.