ಕೊಚ್ಚಿ: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಮುಖ್ಯಮಂತ್ರಿಯ ಮಾಜಿ ಪ್ರಧಾನ ಕಾರ್ಯದರ್ಶಿ ಎಂ. ಶಿವಶಂಕರ್ ಅವರನ್ನು ಇಡಿ ಇಂದು ವಶಕ್ಕೆ ತೆಗೆದುಕೊಂಡಿದೆ. ನಿರೀಕ್ಷಿತ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ ಕೆಲವೇ ದಿನಗಳಲ್ಲಿ ಇಡಿ ಇಂತಹ ಕ್ರಮ ಕ್ಯೆಗೊಂಡಿದೆ. ಈ ಹಿಂದೆ ಕಸ್ಟಮ್ಸ್ ಮತ್ತು ಇಡಿ ಪ್ರಕರಣಗಳಲ್ಲಿನ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು.
ನ್ಯಾಯಾಲಯದ ಆದೇಶದ ಬಳಿಕ, ಇಡಿ ಅಧಿಕಾರಿಗಳು ಶಿವಶಂಕರ್ ಅವರನ್ನು ವಂಚಿಯೂರ್‌ನ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿ ಬಳಿಕ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗುವುದು. ಶಿವಶಂಕರ್ ಅವರನ್ನು ಇಡಿಯ ವಾಹನದಲ್ಲಿ ಕರೆದೊಯ್ಯಲಾಗುತ್ತಿದೆ.
ಕೇಂದ್ರ ಏಜೆನ್ಸಿಗಳ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತು. ಪ್ರಭಾವಿ ಶಿವಶಂಕರ್‌ಗೆ ನಿರೀಕ್ಷಿತ ಜಾಮೀನು ನೀಡಿದರೆ, ಸಾಕ್ಷ್ಯಗಳನ್ನು ನಾಶಪಡಿಸಬಹುದು ಎಂದು ವಾದಿಸಲಾಗಿತ್ತು. ಶಿವಶಂಕರ್ ಅವರ ಚಾರ್ಟರ್ಡ್ ಅಕೌಂಟ್ ರೊಂದಿಗಿನ ವಾಟ್ಸಾಪ್ ಚಾಟ್‌ಗಳು ಮಹತ್ವದ್ದಾಗಿದೆ.