ಕಾಸರಗೋಡು: ಮುಂದಿನ ಜನಾಂಗದ ಭವಿಷ್ಯ ಗುರಿಯಾಗಿಸಿ ರಾಜ್ಯದ ಶಿಕ್ಷಣ ವಲಯದಲ್ಲಿ ಸಮಗ್ರ ಅಭಿವೃದ್ಧಿ ಜಾರಿಗೊಳಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.
ಕಾಸರಗೋಡು ಜಿಲ್ಲೆಯ 5 ಶಿಕ್ಷಣಾಲಯಗಳಲ್ಲಿನ ಉನ್ನತಿ ಸೇರಿ ರಾಜ್ಯದ 144 ಸಾರ್ವಜನಿಕ ಶಿಕ್ಷಣಾಲಯಗಳ ಅಭಿವೃದ್ಧಿ ಚಟುವಟಿಕೆಗಳಿಗೆ ವೀಡಿಯೋ ಕಾನ್ ಫೆರೆನ್ಸ್ ಮೂಲಕ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಇದಕ್ಕೆ ಸಾರ್ವಜನಿಕ ಶಿಕ್ಷಣ ಯಜ್ಞ ಯೋಜನೆ ಉತ್ತಮ ನಿದರ್ಶನವಾಗಿದೆ. ಈ ಯೋಜನೆ ಜಾರಿಯ ಮೂಲಕ ಜನಪ್ರತಿನಿಧಿಗಳು, ಸ್ಥಳೀಯಾಡಳಿತ ಸಂಸ್ಥೆಗಳು,. ಶಿಕ್ಷಕ-ರಕ್ಷಕ ಸಂಘ, ಹಳೆ ವಿದ್ಯಾರ್ಥಿಗಳು, ಆಸಕ್ತ ವ್ಯಕ್ತಿಗಳು, ಸಂಘಟನೆಗಳು ಒಟ್ಟಾಗಿ ಪ್ರತಿ ಪ್ರದೇಶಗಳ ಶಿಕ್ಷಣಾಲಯಗಳನ್ನು ಉದ್ಧಾರಗೊಳಿಸುವ ಮೂಲಕ ಇಡೀ ನಾಡನ್ನು ಉತ್ತಮವಾಗಿಸುವ ಕ್ರಮನಡೆದುಬರುತ್ತಿದೆ. ಉತ್ತಮ ಸೌಲಭ್ಯಗಳೊಂದಿಗೆ ಸಾರ್ವಜನಿಕ ಶಿಕ್ಷಣಾಲಯಗಳು ಬದಲಾಗುತ್ತಿರುವ ಕಾಲಾವಧಿಯ ಅನಿವಾರ್ಯತೆಗಳಾಗಿವೆ. ಕೋವಿಡ್ ಮಹಾಮಾರಿಯ ಅವಧಿಯಲ್ಲೂ ಆನ್ ಲೈನ್ ಮೂಲಕ ಶಿಕ್ಷಣ ಒದಗಿಸಿ ಮಕ್ಕಳನ್ನು ಪಠ್ಯಕ್ರಮದಲ್ಲೇ ಉಳಿಯುವಂತೆ ಮಾಡಲಾಗುತ್ತಿದೆ. ಕೋವಿಡ್ ಅನಂತರದ ದಿನಗಳಲ್ಲಿ ಸುಧಾರಿತ ಶಿಕ್ಷಣ ಕ್ರಮ ಒದಗಿಬರಲಿದೆ. ಇದಕ್ಕಾಗಿ ಕ್ರಾಂತಿಕಾರಿ ಬದಲಾವಣೆ ನಡೆಸಲಾಗುತ್ತಿದೆ ಎಂದು ಅವರು ನುಡಿದರು.
ಸಾರ್ವಜನಿಕ ಶಿಕ್ಷಣ ಯಜ್ಷಕ್ಕೆ ಜನ ಸ್ವೀಕೃತಿ: 4 ವರ್ಷಗಳಲ್ಲಿ 5 ಲಕ್ಷ ಮಕ್ಕಳು ಶಿಕ್ಷಣ ವಲಯಕ್ಕೆ ಮರಳಿದ್ದಾರೆ: ಕಂದಾಯ ಸಚಿವ
ಕಾಸರಗೋಡು: ಸಾರ್ವಜನಿಕ ಶಿಕ್ಷಣ ಯಜ್ಷಕ್ಕೆ ಜನ ಸ್ವೀಕೃತಿ ಲಭಿಸಿದೆ. 4 ವರ್ಷಗಳಲ್ಲಿ 5 ಲಕ್ಷ ಮಕ್ಕಳು ಶಿಕ್ಷಣ ವಲಯಕ್ಕೆ ಮರಳಿದ್ದಾರೆ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ತಿಳಿಸಿದರು.
ಕಾಞಂಗಾಡ್ ಸೌತ್ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ನೂತನ ಕಟ್ಟಡ ನಿರ್ಮಾಣದ ಶಿಲಾನ್ಯಾಸ ಸಮಾರಂಭದಲ್ಲಿ ಶಿಲಾಫಲಕ ಅನಾವರಣಗೊಳಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳು ಹೆಚ್ಚುವರಿ ಸೌಲಭ್ಯಗಳೊಂದಿಗೆ ಅಭಿವೃದ್ಧಿ ಕಾಣುತ್ತಿವೆ ಎಂದವರು ನುಡಿದರು.
ಕಾಞಂಗಾಡ್ ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿದ್ದರು. ನಗರಸಭೆ ಸ್ಥಾಯೀ ಸಮಿತಿ ಅಧ್ಯಕ್ಷ ಮುಹಮ್ಮದ್ ಮುರಿಯಾನಾವಿ, ವಾರ್ಡ್ ಸದಸ್ಯೆ ಕೆ.ಪಿ.ವಸಂತಿ ಮೊದಲಾದವರು ಉಪಸ್ಥಿತರಿದ್ದರು.