ಕಾಸರಗೋಡು: ವಿಡಿಯೋಕಾನ್ಪರೆನ್ಸ್ ಮೂಲಕ ಸಾರ್ವಜನಿಕ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ಸಂಪೂರ್ಣ ಡಿಜಿಟಲ್ ರಾಜ್ಯವಾಗಲಿದೆ ಎಂದು ಕೇರಳದ ರಾಜ್ಯಮಟ್ಟದ ಘೋಷಣೆಯನ್ನು ಸೋಮವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾಡಿದರು. ಈ ಮೂಲಕ ರಾಜ್ಯದ ಶಾಲೆಗಳು ಹೈಟೆಕ್ ಎಂದು ಘೋಷಿಸಲಾಗಿದೆ.
ಉದಿನೂರ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಮಟ್ಟದ ಘೋಷಣೆಯನ್ನು ತೃಕ್ಕರಿಪುರಶಾಸಕ ಎಂ.ರಾಜಗೋಪಾಲನ್ ನಿರ್ವಹಿಸಿದರು. ಸಮಾರಂಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ವಿ ಫೌಜಿಯಾ ಅಧ್ಯಕ್ಷತೆ ವಹಿಸಿದ್ದರು. ನೀಲೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ವಿ.ಪಿ.ಜಾನಕಿ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಪಿ.ಕುಂಞÂ ಕೃಷ್ಣನ್, ಕಾಸರಗೋಡು ಎಸ್‍ಎಸ್‍ಕೆಡಿಪಿಸಿಪಿ ರವೀಂದ್ರನ್, ಚೆರ್ವತ್ತೂರು ಎಇಒ ಜಿ ಸನಾಲ್ ಶಾ, ಚಿತ್ತಾರಿಕಲ್ ಎಇಒ ಕೆ.ಕೆ ವಿನೋದ್ ಕುಮಾರ್, ಚೆರ್ವತ್ತೂರು ಎಸ್‍ಎಸ್‍ಕೆಬಿಪಿ ಸಿವಿಎಸ್ ಬಿಜುರಾಜ, ಪಿಟಿಎ ಅಧ್ಯಕ್ಷ ರಮೇಶ್ ಕಿಜಕೂಲ್, ಮಾತೃಸಂಘದ ಅಧ್ಯಕ್ಷೆ ಪಿ ಸಜೀನಾ, ಎಚ್‍ಎಸ್‍ಎಸ್ ಹಿರಿಯ ಸಹಾಯಕ ರಮೇಶನ್ ಮುಂಡವಳಪಿಲ್, ಎಚ್‍ಎಸ್‍ಎಸ್ ಹಿರಿಯ ಸಹಾಯಕ ಪಿ.ಭಾಸ್ಕರನ್, ಸಿಬ್ಬಂದಿ ಕಾರ್ಯದರ್ಶಿ ಕೆ.ಸುರೇಂದ್ರನ್ ಮತ್ತು ಶಾಲಾ ಮುಖಂಡರು ಉಪಸ್ಥಿತರಿದ್ದರು. ಪ್ರಾಂಶುಪಾಲೆ ಸಿ.ಪಿ.ಜಯಶ್ರೀ ಸ್ವಾಗತಿಸಿ, ಮುಖ್ಯೋಪಾಧ್ಯಾಯಿನಿ ಪಿ.ವಿ.ಜಯಪ್ರಭ ವಂದಿಸಿದರು.
ಕಾಞÂಂಗಾಡ್ ಕ್ಷೇತ್ರದ ಶಾಲೆಗಳಲ್ಲಿ 50 ಕೋಟಿ ಕಾಮಗಾರಿ ಮಾಡಲಾಗಿದೆ; ಕಂದಾಯ ಸಚಿವ:
ಕೇರಳದ ಎಲ್ಲಾ ಶಾಲೆಗಳನ್ನು ಮುಖ್ಯಮಂತ್ರಿಗಳು ಹೈಟೆಕ್ ಎಂದು ಘೋಷಿಸಿದ ಬೆನ್ನಲ್ಲೇ ಕಂದಾಯ ಮತ್ತು ವಸತಿ ಸಚಿವ ಇ.ಚಂದ್ರಶೇಖರನ್ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿ ಕ್ಷೇತ್ರ ಮಟ್ಟದಲ್ಲಿ ಘೋಷಣೆ ಮಾಡಿದರು. ಸ್ಥಳೀಯಡಳಿತ ಸಂಸ್ಥೆಗಳ ನಿಯಂತ್ರಣದಲ್ಲಿರುವ ಶಾಲೆಗಳು ಹೈಟೆಕ್ ಆಗಿ ಬೆಳೆಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಮತ್ತು ಹಣಕಾಸು ಇಲಾಖೆಗಳು ತೋರಿಸಿರುವ ವಿಶೇಷ ಆಸಕ್ತಿ ಮತ್ತು ಪರಿಗಣನೆಯು ನಮ್ಮ ಶಿಕ್ಷಣ ಕ್ಷೇತ್ರವನ್ನು ಮೇಲೆತ್ತಲು ಕಾರಣವಾಗಿದೆ. ಕೇರಳದ ಶಾಲೆಗಳ ಸಂಪೂರ್ಣ ಮುಖ ಇಂದು ಬದಲಾಗಿದೆ ಎಂದು ಸಚಿವರು ನೆನಪಿಸಿದರು. ಕಳೆದ ನಾಲ್ಕೂವರೆ ವರ್ಷಗಳಲ್ಲಿ, ಭೌತಿಕ ಪರಿಸರವನ್ನು ಸಿದ್ಧಪಡಿಸುವಲ್ಲಿ ಅದ್ಭುತ ದಾಪುಗಾಲು ಹಾಕಿದ್ದೇವೆ. ಡಿಜಿಟಲ್ ವ್ಯವಸ್ಥೆ ಪೂರ್ಣಗೊಂಡಿದೆ ಎಂದರು.
ಸಾಮಾನ್ಯ ಶಿಕ್ಷಣ ಸಂರಕ್ಷಣಾ ಯಜ್ಞದ ಭಾಗವಾಗಿ ಶಾಲೆಗಳನ್ನು ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ತರುವ ಕ್ರಿಯಾ ಯೋಜನೆಯಲ್ಲಿ ಕಕ್ಕಾಡ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಕಾಞಂಗಾಡ್ ಕ್ಷೇತ್ರದ ಮೊದಲ ಡಿಜಿಟಲ್ ಶಾಲೆಯಾಗಿ ಹೊರಹೊಮ್ಮಿದೆ. ಆ ಶಾಲೆಗೆ 5 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿತ್ತು. ಚಟುವಟಿಕೆಗಳು ಬಹುಬೇಗನೆ ಸಾಕಾರಗೊಂಡಿತು. 5 ಕೋಟಿ ಮೌಲ್ಯದ ಕಾಮಗಾರಿಗಳನ್ನು ಪೂರ್ಣಗೊಳಿಸಿದ ರಾಜ್ಯದ ಮೊದಲ ಶಾಲೆಗಳಲ್ಲಿ ಕಕ್ಕಾಡ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಪ್ರಥಮವಾದುದು. 2019 ರ ಅಂತ್ಯದ ವೇಳೆಗೆ ಅದು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿತ್ತು. ಕಾಞಂಗಾಡ್ ಕ್ಷೇತ್ರದ ಶಾಲೆಯೊಂದು ಉನ್ನತ ಸ್ಥಾನದಲ್ಲಿವೆ ಎಂದು ಘೋಷಣೆ ಮಾಡಿದಾಗ ತುಂಬಾ ಸಂತೋಷವಾಗಿದೆ ಎಂದು ಸಚಿವರು ಹೇಳಿದರು. ಕ್ಷೇತ್ರದ ಏಳು ಶಾಲೆಗಳಿಗೆ 3 ಕೋಟಿ ರೂ.ಗಳ ಆರ್ಥಿಕ ಸಹಾಯವನ್ನೂ ರಾಜ್ಯ ಸರ್ಕಾರ ಮಂಜೂರು ಮಾಡಿದೆ. ಇದಲ್ಲದೆ 14 ಶಾಲೆಗಳಿಗೆ ತಲಾ 1 ಕೋಟಿ ರೂ.ಮಂಜೂರಾಗಿದೆ. ಕ್ಷೇತ್ರದ ಶಾಲೆಗಳಲ್ಲಿ ಭೌತಿಕ ಸೌಲಭ್ಯಗಳನ್ನು ಒದಗಿಸಲು 40 ಕೋಟಿ ರೂ.ವಿನಿಯೋಗಿಸಲಾಗಿದೆ. ಈ ಅವಧಿಯಲ್ಲಿ ಶಾಸಕರ ಆಸ್ತಿ ಅಭಿವೃದ್ಧಿ ನಿಧಿಯನ್ನು ಬಳಸಿ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡಿದೆ ಎಂದರು. ಶಾಸಕರಿಗೆ ನೀಡಲಾಗಿದ್ದ `25 ಕೋಟಿಯಲ್ಲಿ,` 10 ಕೋಟಿಗಳನ್ನು ಶಿಕ್ಷಣ ಸಂಸ್ಥೆಗಳ ಸ್ಥಿತಿಗತಿಗಳನ್ನು ಉನ್ನತೀಕರಿಸಲು ಬಳಸಲಾಯಿತು. ಇದಲ್ಲದೆ, ಐದು ವರ್ಷಗಳಲ್ಲಿ ಕಾಞಂಗಡ್ ಕ್ಷೇತ್ರದ ಶಾಲೆಗಳಿಗೆ 50 ಕೋಟಿ ರೂ. ನೀಡಲಾಗಿದೆ. ಕೇರಳ ಸರ್ಕಾರಕ್ಕೆ ಬಹಳ ಮುಖ್ಯವಾದ ಶಿಕ್ಷಣ ಕ್ಷೇತ್ರದಲ್ಲಿ ಉತ್ತರ ಮಲಬಾರ್‍ನ ಕಾಞಂಗಡ್ ಕ್ಷೇತ್ರಕ್ಕೂ ಹೆಚ್ಚಿನ ಗಮನ ನೀಡಲಾಗಿದೆ ಎಂದು ಸಚಿವರು ಹೇಳಿದರು.
ಕಕ್ಕಾಡ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಮಡಿಕ್ಕೈ ಪಂಚಾಯತ್ ಅಧ್ಯಕ್ಷ ಸಿ ಪ್ರಭಾಕರನ್ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಪಂಚಾಯತ್ ಸದಸ್ಯೆ ಪಿ. ಒಮಾನಾ, ಡಿಡಿಇ ಕೆವಿ ಪುಷ್ಪಾ, ಗ್ರಾಮ ಪಂಚಾಯತ್ ಸದಸ್ಯರು, ಎಇಒ ಪಿವಿ ಜಯರಾಜನ್, ಜಿಲ್ಲಾ ಸಹಾಯಕ ಸಂಯೋಜಕ ಕೆ. ಮೋಹನನ್, ಡಯಟ್ ಪ್ರಿನ್ಸಿಪಾಲ್ ಎ. ಬಾಲನ್ ಮತ್ತು ಇತರರು ಮಾತನಾಡಿದರು. ಸಭೆಯನ್ನು ಶಾಲಾ ಪ್ರಾಂಶುಪಾಲ ಪಿ.ಯು ಚಂದ್ರಶೇಖರನ್ ಸ್ವಾಗತಿಸಿದ್ದು, ಪಿಟಿಎ ಅಧ್ಯಕ್ಷ ಕೆ.ವಿ.ಮಧು ವಂದಿಸಿದರು. ಕ್ಷೇತ್ರದಲ್ಲಿ 96 ಶಾಲೆಗಳಿವೆ. ಶಾಲೆಯಲ್ಲಿ ಲ್ಯಾಪ್‍ಟಾಪ್‍ಗಳು, ಪೆÇ್ರಜೆಕ್ಟರ್‍ಗಳು, ಸ್ಕ್ರೀನ್ ಬೋರ್ಡ್‍ಗಳು, ಟಿವಿಗಳು, ಯುಎಸ್‍ಬಿ ಸ್ಪೀಕರ್‍ಗಳು, ಮಲ್ಟಿ-ಫಂಕ್ಷನ್ ಮುದ್ರಕಗಳು, ಡಿಎಸ್‍ಎಲ್‍ಆರ್ಗಳು ಮತ್ತು ಎಚ್‍ಡಿ ವೆಬ್ ಕ್ಯಾಮೆರಾಗಳಂತಹ ಸೌಲಭ್ಯಗಳಿವೆ.
ಕಾಸರಗೋಡು ಕ್ಷೇತ್ರ ವ್ಯಾಪ್ತಿಯ ಹೈಟೆಕ್‍ನಲ್ಲಿರುವ ಸಾರ್ವಜನಿಕ ಶಾಲೆಗಳು:
ಸಾರ್ವಜನಿಕ ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲೀಕರಣದ ಬಗ್ಗೆ ಕಾಸರಗೋಡು ಕ್ಷೇತ್ರ ಮಟ್ಟದ ಚಾಲನೆಯನ್ನು ಜಿಎಚ್‍ಎಸ್‍ಎಸ್ ಮೊಗ್ರಾಲ್ ಪುತ್ತೂರಿನಲ್ಲಿ ಶಾಸಕ ಎನ್‍ಎ ನೆಲ್ಲಿಕುನ್ನು ಮಾಡಿದರು. ಕ್ಷೇತ್ರದ 88 ಶಾಲೆಗಳನ್ನು ಪ್ರೌಢ ಶಾಲೆಗಳನ್ನಾಗಿ ಮಾಡಿರುವುದಕ್ಕೆ ತುಂಬಾ ಸಂತೋಷವಾಗಿದೆ ಎಂದು ಶಾಸಕರು ಹೇಳಿದರು ಮತ್ತು ಇದನ್ನು ಸಾಧ್ಯವಾಗಿಸಲು ಸರ್ಕಾರ ಮತ್ತು ವಿದ್ಯಾಭ್ಯಾಸ ಇಲಾಖೆಯ ಉಪಕ್ರಮಗಳನ್ನು ಶ್ಲಾಘಿಸಿದರು. ಕೋವಿಡ್ ಸೋಂಕಿನಿಂದ ಮಕ್ಕಳು ಸಂಕಷ್ಟಕ್ಕೊಳಗಾಗಿದ್ದಾರೆ. ಶಾಲಾ ಜೀವನ ಅಪೂರ್ವದ ಅನುಭವವಾಗಿದೆ. ಈ ಹಿನ್ನೆಲೆಯಲ್ಲಿಯೇ ಸರ್ಕಾರವು ಆನ್‍ಲೈನ್ ಶಿಕ್ಷಣಕ್ಕೆ ಮಹತ್ವ ನೀಡುತ್ತಿದೆ. ಇದನ್ನು ಸಾಕಾರಗೊಳಿಸುವಲ್ಲಿ ಕೈಟ್‍ನ ಬೆಂಬಲ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ನ್ಯಾಯವಾದಿ. ಸಮೀರಾ ಫೈಸಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎಇಒ ಅಗಸ್ಟೀನ್ ಬರ್ನಾರ್ಡ್, ಎಸ್‍ಎಸ್‍ಕೆ ಡಿಡಿಒ ಡಿ ನಾರಾಯಣ, ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮುಜೀಬ್ ಕಂಪಾರ್, ಹಮೀದ್ ಬಳ್ಳೂರ್, ಪ್ರಾಂಶುಪಾಲ ಡಾ. ಎಂ.ಲಲಿತಾ, ಮುಖ್ಯ ಶಿಕ್ಷಕ ಕೆ.ಅರವಿಂದ ಮತ್ತು ಪಿಟಿಎ ಅಧ್ಯಕ್ಷ ಮಹಮೂದ್ ಬಳ್ಳೂರ್ ಉಪಸ್ಥಿತರಿದ್ದರು.
ಮಂಜೇಶ್ವರ ಕ್ಷೇತ್ರದ ಸಾರ್ವಜನಿಕ ಶಾಲೆಗಳೂ ಹೈಟೆಕ್:
ಜಿವಿಹೆಚ್‍ಎಸ್‍ಎಸ್ ಮೊಗ್ರಾಲ್ ನಲ್ಲಿ ಶಾಸಕ ಎಂ.ಸಿ.ಕಮರುದ್ದೀನ್ ಕ್ಷೇತ್ರ ಮಟ್ಟದ ಘೋಷಣೆ ಮಾಡಿದ್ದಾರೆ. ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಜಿಸಿ ಬಶೀರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಂ.ಸಿ.ಕಮರುದ್ದೀನ್ ಅವರು ಐಟಿ ಉಪಕರಣಗಳನ್ನು ಒದಗಿಸುವ ಮೂಲಕ ಸಾರ್ವಜನಿಕ ಶಾಲೆಗಳನ್ನು ಉನ್ನತ ಸ್ಥಾನಕ್ಕೆ ತಂದ ಸರ್ಕಾರವನ್ನು ಶ್ಲಾಘಿಸಿದರು. ಕುಂಬಳ ಪಂಚಾಯತ್ ಅಧ್ಯಕ್ಷ ಕೆ.ಎಲ್. ಪುಂಡರೀಕಾಕ್ಷ, ಕೆಎಂ ಮೊಹಮ್ಮದ್ ಮತ್ತು ಪಿ.ಎ.ಅಶಿಫ್ ಉಪಸ್ಥಿತರಿದ್ದರು.