ಕಾಸರಗೋಡು: ಕೋವಿಡ್ ಪ್ರತಿರೋಧ, ಜನಜಾಗೃತಿ ಚಟುಚವಟಿಕೆಗಳ ಪ್ರಬಲೀಕರಣ ಅಂಗವಾಗಿ ಐ.ಇ.ಸಿ. ಸಂಚಲನ ಸಮಿತಿ , ಜಿಲ್ಲಾಡಳಿತೆಯ ನೇತೃತ್ವದಲ್ಲಿ ತಯಾರಿಸಿರುವ ಕಿರುಚಿತ್ರ "ಪ್ಲೀಸ್"ನ ಬಿಡುಗಡೆ ನಾಳೆ ಜರಗಲಿದೆ.
ನಾಳೆ ಬೆಳಗ್ಗೆ 10.30ಕ್ಕೆ ಕಾಞಂಗಾಡ್ ಜಿಲ್ಲಾ ಮೆಡಿಕಲ್ ಕಚೇರಿ(ಆರೋಗ್ಯ)ಯ ಸಭಾಂಗಣದಲ್ಲಿ ಜರಗುವ ಸಮಾರಂಭದಲ್ಲಿ ಕಂದಾಯ ಸಚಿವ ಇ.ಚಂದ್ರಶೇಖರನ್ ಚಿತ್ರ ಬಿಡುಗಡೆಗೊಳಿಸುವರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಕಾಞಂಗಾಡ್ ನಗರಸಭೆ ಅಧ್ಯಕ್ಷ ವಿ.ವಿ.ರಮೆಶನ್, ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್, ರಾಷ್ಟ್ರೀಯ ಆರೋಗ್ಯ ದೌತ್ಯ ಜಿಲ್ಲಾ ಕಾರ್ಯಕ್ರಮ ಪ್ರಬಂಧಕ ರಾಮನ್ ಸ್ವಾತಿ ವಾಮನ್, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ಎ.ಟಿ.ಮನೋಜ್ ಮೊದಲಾದವರು ಉಪಸ್ಥಿತರಿರುವರು.
ಜಿಲ್ಲಾಡಳಿತೆಗಾಗಿ ಜಿಲ್ಲಾ ಮೆಡಿಕಲ್ ಕಚೇರಿ(ಆರೋಗ್ಯ) , ರಾಷ್ಟ್ರೀಯ ಆರೋಗ್ಯ ದೌತ್ಯ ಜಂಟಿ ವತಿಯಿಂದ ಈ ಕಿರುಚಿತ್ರ ಸಿದ್ಧಪಡಿಸಲಾಗಿದೆ.