HEALTH TIPS

ದೇಶದಲ್ಲೇ ಮೊದಲು ಕೋವಿಡ್ ನಿಯಂತ್ರಣ ಹೇರಿದ್ದು ಕೇರಳ- ಆದರೂ ಕೋವಿಡ್ ಹೆಚ್ಚಳಕ್ಕೆ ಕಾರಣವೇನು?

  

           ತಿರುವನಂತಪುರ: ದೇಶದಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿರುವ ಮಹಾರಾಷ್ಟ್ರ ಸೇರಿದಂತೆ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಕ್ಷೀಣಿಸುತ್ತಿವೆ. ಆದರೆ ಕೇರಳದಲ್ಲಿ ಪ್ರಕರಣಗಳು ಆತಂಕಕಾರಿಯಾಗಿ ಏರಲು ಪ್ರಾರಂಭಿಸಿವೆ. ದೇಶದಲ್ಲಿ ಕೋವಿಡ್ ಹರಡುವಿಕೆಯ ಕುಸಿತದ ಹೊರತಾಗಿಯೂ, ಕೇರಳದಲ್ಲಿ ಪ್ರಕರಣಗಳ ಹೆಚ್ಚಳವು ರಾಜ್ಯಕ್ಕೆ ಹಿನ್ನಡೆಯಾಗಿದೆ. ಜೊತೆಗೆ ಆರಂಭದ ಕಾಲದಲ್ಲಿ ಕೋವಿಡ್ ನಿಯಂತ್ರಣದಲ್ಲಿ ಕೇರಳ ಮಾದರಿ ಎಂದೇ ಬಿಂಬಿತವಾಗಿದ್ದೂ ಮರೆಯುವಂತಿಲ್ಲ. ಓಣಂ ಸೇರಿದಂತೆ ಹಬ್ಬಗಳ ಸಂದರ್ಭದಲ್ಲಿ ಹೆಚ್ಚಿನ ನಿಯಂತ್ರಣ ರಿಯಾಯಿತಿಗಳನ್ನು ನೀಡಿದ್ದರಿಂದ  ಇಂದಿನ ಸ್ಥಿತಿ ನಿರ್ಮಾಣವಾಗಿದೆ ಎಂದು ರಾಜ್ಯ ಸರ್ಕಾರ ಬೊಟ್ಟುಮಾಡುತ್ತಿದೆ. ರಾಜ್ಯದಲ್ಲಿ ರೋಗ ಹರಡಲು ಅನಿಯಂತ್ರಿತ ಜನರ ಓಡಾಟ, ಕೋವಿಡ್ ಮಾನದಂಡಗಳ ಉಲ್ಲಂಘನೆ ಪ್ರಮುಖ ಕಾರಣ ಎಂದು ಸರ್ಕಾರ ತಿಳಿಸುತ್ತಿದ್ದು ಕೇಂದ್ರ ಆರೋಗ್ಯ ಸಚಿವರೂ ಇದನ್ನು ಬೆಂಬಲಿಸಿದ್ದಾರೆ. 

                  ದೇಶದಲ್ಲಿ ಮೊದಲ ಪ್ರಕರಣ ವರದಿಯಾದ ರಾಜ್ಯ:

     ಚೀನಾದ ವುಹಾನ್‍ನಲ್ಲಿ ಕೋವಿಡ್ ಸೋಂಕು ಹರಡಿದ ಅಲ್ಪ ಕಾಲಾವಧಿಯಲ್ಲೇ ಕೋವಿಡ್ ಕೇರಳದಲ್ಲಿ ವರದಿಯಾಗಿತ್ತು. ಆದರೆ ಆರಂಭದಲ್ಲಿ ಸೋಂಕು ಉಂಟಾದವರಿಂದ ಬೇರೊಬ್ಬರಿಗೆ ಸೋಂಕು ಹತ್ತಿಕೊಂಡಿಲ್ಲ ಎಂದು ರಾಜ್ಯ ಆರೋಗ್ಯ ಇಲಾಖೆ ಈಗಾಗಲೇ ತಿಳಿಸಿದೆ. ಸೋಂಕು ಆರಂಭದಲ್ಲಿ ಚೀನಾದಿಂದ ವಿಶ್ವದ ಅನೇಕ ಭಾಗಗಳಿಗೆ ಹರಡಿದರೂ, ಹೆಚ್ಚಿನ ಜನಸಂಖ್ಯಾ ಸಾಂದ್ರತೆಯ ಹೊರತಾಗಿಯೂ ಕೇರಳವು ಆ ಹಂತದಲ್ಲಿ ಅದನ್ನು ತಡೆಯಲು ಸಾಧ್ಯವಾಯಿತು. ಕೋವಿಡ್ ಪೆÇ್ರೀಟೋಕಾಲ್ ಅಭಿವೃದ್ಧಿಪಡಿಸಿದ ರಾಜ್ಯಗಳಲ್ಲಿ ಕೇರಳವು ಮೊದಲ ಸ್ಥಾನದಲ್ಲಿದೆ. ಮಾರ್ಚ್ 15 ರ ಮೊದಲು ಬ್ರೇಕ್ ದಿ ಚೈನ್ ಅಭಿಯಾನವನ್ನು ಪ್ರಾರಂಭಿಸಲಾಯಿತು. ಎರಡನೇ ಹಂತದಲ್ಲಿ  ಕೋವಿಡ್ ಸೋಂಕು ಇಟಲಿಯಿಂದ ರಾಜ್ಯಕ್ಕೆ ತಲುಪಿ ಅನೇಕರ ಮೇಲೆ ಪರಿಣಾಮ ಬೀರಿತು. ದೇಶದಲ್ಲೇ ಮೊದಲು ಲಾಕ್‍ಡೌನ್ ಜಾರಿಗೊಂಡದ್ದೂ ಕೇರಳದಲ್ಲೇ ಎನ್ನುವುದೂ ಉಲ್ಲೇಖಾರ್ಹ. 

                ಸೋಂಕಿನ ಉತ್ತುಂಗಕ್ಕೆ ವಿಳಂಬ: 

      ರಾಜ್ಯವು ಅಳವಡಿಸಿಕೊಂಡ ನಿಯಂತ್ರಣ ಕ್ರಮದ ಕಾರಣ ಸೋಂಕು ತೀವ್ರತರಗೊಳ್ಳುವಲ್ಲಿ ಸಾಧ್ಯವಾದಷ್ಟು ವಿಳಂಬಗೊಂಡಿರುವುದು ಉಲ್ಲೇಖಾರ್ಹ.  ಆದ್ದರಿಂದ, ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಸಮಯ ಬಂದಿದೆ ಎಂದು ಸರ್ಕಾರ ಹೇಳುತ್ತದೆ. ತಡೆಗಟ್ಟುವ ಕ್ರಮಗಳನ್ನು ವಿಸ್ತರಿಸುವ ಜೊತೆಗೆ  ಸಾವುಗಳ ಹೆಚ್ಚಳ ತಡೆಯಲಾಯಿತು. ಕೋವಿಡ್ ಹರಡುವಿಕೆಯು ಉತ್ತುಂಗಕ್ಕೇರಿರುವಂತೆ, ಕ್ಷೀಣಿಸುತ್ತಿರುವ ಮರಣ ಪ್ರಮಾಣ ಇದರ ಒಂದು ಭಾಗವಾಗಿದೆ ಎಂದು ಸರ್ಕಾರ ಹೇಳುತ್ತದೆ.

            ಮರಣ ಪ್ರಮಾಣ ಕುಸಿಯುತ್ತಿದೆ:

     ಕೇರಳದಲ್ಲಿ, ಸಾವಿನ ಪ್ರಮಾಣವು ಮೇ ತಿಂಗಳಲ್ಲಿ ಶೇಕಡಾ 0.77 ರಷ್ಟಿತ್ತು ಮತ್ತು ಜೂನ್‍ನಲ್ಲಿ ಶೇಕಡಾ 0.45 ಕ್ಕೆ ಇಳಿದಿದೆ. ಇದು ಆಗಸ್ಟ್‍ನಲ್ಲಿ ಶೇಕಡಾ 0.4 ರಷ್ಟಿತ್ತು ಮತ್ತು ಸೆಪ್ಟೆಂಬರ್‍ನಲ್ಲಿ ಮತ್ತೆ ಶೇಕಡಾ 0.38 ಕ್ಕೆ ಇಳಿದಿದೆ. ಅಕ್ಟೋಬರ್‍ನಲ್ಲಿ ಇದುವರೆಗಿನ ಸಾವಿನ ಪ್ರಮಾಣ ಶೇಕಡಾ 0.28 ರಷ್ಟಿತ್ತು. ಈ ಹಂತದಲ್ಲೂ ನಾವು ಮರಣ ಪ್ರಮಾಣವನ್ನು ಕಡಿಮೆ ಮಾಡಲು ಸಮರ್ಥರಾಗಿದ್ದೇವೆ ಎಂಬ ಅಂಶವನ್ನು ಆರೋಗ್ಯ ವ್ಯವಸ್ಥೆಯ ಸಾಧನೆ ಎಂದು ಪರಿಗಣಿಸಲಾಗುತ್ತದೆ.

              ರೋಗ ಹರಡುವಿಕೆಯ ಹಿಂದೆ ಓಣಂ ಆಚರಣೆಗಳು?

      ಓಣಂ ರಜಾದಿನಗಳಲ್ಲಿ ಸಾಕಷ್ಟು ರಿಯಾಯಿತಿಗಳನ್ನು ಅನುಮತಿಸಲಾಗಿದೆ ಎಂಬ ಅಪಪ್ರಚಾರ ತಪ್ಪಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಇತರ ಹಬ್ಬಗಳಲ್ಲಿ ಅನುಮತಿಸಿದಂತೆ ಓಣಂ ಸಮಯದಲ್ಲಿ ಬಹಳ ಕಡಿಮೆ ರಿಯಾಯಿತಿಗಳನ್ನು ಮಾತ್ರ ನೀಡಲಾಯಿತು. ಓಣಂ ಗೌಜುಗಳನ್ನು  ನಿಯಂತ್ರಿಸಲು ಪೆÇಲೀಸರು ಓಣಂಗೆ ಮೊದಲು ಹಲವಾರು ನಿರ್ದೇಶನಗಳನ್ನು ನೀಡಿದ್ದಾರೆ ಎಂದು ಅವರು ಹೇಳಿದರು. ಜನಸಂದಣಿ ಮತ್ತು ಅನಗತ್ಯ ಪ್ರಯಾಣವನ್ನು ತಪ್ಪಿಸಲು ಕೇಳಿಕೊಳ್ಳಲಾಗಿದೆ ಮತ್ತು ಅಂಗಡಿಗಳ ತೆರೆಯುವ ಸಮಯ ಮತ್ತು ಜನರ ಪ್ರವೇಶವನ್ನು ನಿಬರ್ಂಧಿಸಲಾಗಿತ್ತು ಎಂದು ಸಿಎಂ ಹೇಳಿರುವರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries