ಬದಿಯಡ್ಕ: ಯುವಕೇಸರಿ ಕ್ಲಬ್ ಕಿಳಿಂಗಾರ್ ಇದರ ವತಿಯಿಂದ ಕನ್ನೆಪ್ಪಾಡಿ ಆಶ್ರಯ ವೃದ್ದಾಶ್ರಮಕ್ಕೆ ಅಕ್ಕಿ ಹಾಗೂ ತರಕಾರಿಗಳನ್ನು ನೀಡಲಾಯಿತು.
ಕ್ಲಬ್ಬಿನ ಅಧ್ಯಕ್ಷ ರಂಜಿತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಮನೋಜ್ ಎ, ಉಪಾಧ್ಯಕ್ಷ ನಿಶಾಂತ್ ಕೆ, ಜೊತೆ ಕಾರ್ಯದರ್ಶಿ ಪೃಥ್ವಿರಾಜ್, ಸದಸ್ಯರಾದ ನಿತೇಶ್ ಕೆ, ಪ್ರಕಾಶ್ ಸಿ ಯಚ್ ಹಾಗೂ ಕ್ಲಬ್ಬಿನ ಸಂಚಾಲಕ ಹಾಗೂ ನೆಹರು ಯುವಕೇಂದ್ರ ಸುರಕ್ಷಾ ಯೋಜನೆಯ ಸಂಯೋಜಕ ನಾರಾಯಾಣ ಪಿ ಪೆರಡಾಲ ಆಶ್ರಮ ಸಂದರ್ಶಿಸಿ ಕಿಟ್ ಹಸ್ತಾಂತರಿಸಿದರು.