ಬದಿಯಡ್ಕ: ರೋಟರಿ ಸುಳ್ಯ ಸಿಟಿ ಇದರ ಆಶ್ರಯದಲ್ಲಿ ವೀನಸ್ ಏಜನ್ಸೀಸ್ ಹಾಗೂ ಅಕ್ಷತ್ ಭಾರದ್ವಾಜ್ ಜಂಟಿಯಾಗಿ ದಾನ ನೀಡಿದ ವ್ಹೀಲ್ ಚಯರ್ ನ್ನು ಹಿರಿಯ ಸಂಸ್ಕøತ ವಿದ್ವಾಂಸ, ಪುರೋಹಿತ ಬೇಂಗ್ರೋಡಿ ಮಾಧವ ಭಟ್ಟರಿಗೆ ನೀಡುವ ಕಾರ್ಯಕ್ರಮ ಅವರ ಮನೆಯಲ್ಲಿ ಇತ್ತೀಚೆಗೆ ನಡೆಯಿತು.
ರೋಟರಿ ಸುಳ್ಯ ಸಿಟಿ ಇದರ ಅಧ್ಯಕ್ಷ, ಉದ್ಯಮಿ, ರೊ. ಗುರು ವಿಕ್ರಮ್ ಪ್ರಸಾದ್ ಇವರು ವ್ಹೀಲ್ ಚಯರ್ ಹಸ್ತಾಂತರಿಸಿ ರೋಟರಿ ಸಂಸ್ಥೆಯ ಸಾಮಾಜಿಕ ಕಾಯ9ಚಟುವಟಿಕೆಗಳ ಪರಿಚಯ ಮಾಡಿದರು. ಈ ಸಂದರ್ಭದಲ್ಲಿ ಉದ್ಯಮಿ, ಉಪ್ಪಂಗಳ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ರಂಗ ಶಮಾ9 ಉಪ್ಪಂಗಳ, ವೀನಸ್ ಏಜನ್ಸೀಸ್ ನ ಸತ್ಯ ನಾರಾಯಣ ಪ್ರಸಾದ್ ಕಯಂಪಾಡಿ ಅತಿಥಿಗಳಾಗಿ ಉಪಸ್ಥಿತರಿದ್ದರು. ರಾಜು ಶರ್ಮಾ ಉಪ್ಪಂಗಳ ಉಪಸ್ಥಿತರಿದ್ದರು. ಪರಾಶರ ಶಮಾ9 ಉಪ್ಪಂಗಳ ಸ್ವಾಗತಿಸಿ,ಪೃಥ್ವಿ ಅಂಬುಕುಂಜೆ ವಂದಿಸಿದರು. ರಶ್ಮಿ .ಎ ಪ್ರಾಥಿ9ಸಿದಳು.