ಮಲಯಾಳಂನ ಪ್ರಸಿದ್ಧ ಸಾಹಿತ್ಯ ಪ್ರತಿಭೆಯಾಗಿದ್ದ ಅಕ್ಕಿಥಮ್ ಕಳೆದ ವಾರ ಆಸ್ಪತ್ರೆಗೆ ದಾಖಲಾಗಿದ್ದರು.
ಸರಳ ಮತ್ತು ಸ್ಪಷ್ಟವಾದ ಬರವಣಿಗೆಗೆ ಹೆಸರುವಾಸಿಯಾದ ಮಲಯಾಳಂನ ಕವಿ ಮತ್ತು ಪ್ರಬಂಧಕಾರ ಅಕ್ಕಿಥಮ್ ಅವರಿಗೆ 2019 ರ ಸಾಲಿನ ಜ್ಞಾನಪೀತ್ ಪ್ರಶಸ್ತಿ ಒಲಿದಿತ್ತು.
ಸೆಪ್ಟೆಂಬರ್ 24 ರಂದು ಕೇರಳದ ಪಾಲಕ್ಕಾಡ್ ನಲ್ಲಿರುವ ಕುಮಾರನಲ್ಲೂರು ಅವರ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಪ್ರಧಾನ ಮಾಡಲಾಗಿತ್ತು.
ಅಕ್ಕಿಥಮ್ ಅವರ ಸಾಹಿತ್ಯ ಕೃತಿಗಳು 1950 ರ ಹಿಂದಿನ ದಿನಗಳಿಂದಲೂ ಪ್ರಕಟವಾಗಿತ್ತಿದ್ದವು. ಅಂದಿನಿಂದ ಅವರ ಕೃತಿಗಳು ಅವರಿಗೆ ಮನ್ನಣೆಯನ್ನು ತಂದುಕೊಟ್ಟವು, ಕ್ರಮೇಣ ಅವರನ್ನು ಮಲಯಾಳಂ ಸಾಹಿತ್ಯದಲ್ಲಿ ಒಬ್ಬ ಶ್ರೇಷ್ಠ ಬರಹಗಾರನನ್ನಾಗಿಸಿತ್ತು. ಕೇರಳ ಸರಕಾರದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ 'ಎಳಥುಚಾನ್ ಪ್ರಶಸ್ತಿ, ಭಾರತ ಸರ್ಕಾರದ "ಪದ್ಮಶ್ರೀ" ಪುರಸ್ಕಾರ ಸಹ ಇವರಿಗೆ ಸಂದಿದೆ.
ಅಕ್ಕಿಥಮ್ ಅವರು 'ಕೇರಳ ಸಾಹಿತ್ಯ ಅಕಾಡೆಮಿ' ಪ್ರಶಸ್ತಿ, 'ಒಡಕ್ಕುಳಾಲ್' ಪ್ರಶಸ್ತಿ, 'ವಲ್ಲಥೋ' ಪ್ರಶಸ್ತಿ, 'ವಯಲಾರ್' ಪ್ರಶಸ್ತಿ, 'ಆಸಾನ್' ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.