ತಿರುವನಂತಪುರ: ಜೂನ್ 30 ರಂದು ದುಬೈನಿಂದ ತಿರುವನಂತಪುರಂಗೆ ಎಮಿರೇಟ್ಸ್ ಸರಕು ಹಾರಾಟದ ರಾಜತಾಂತ್ರಿಕ ಸರಂಜಾಮುಗಳಲ್ಲಿ 15 ಕೋಟಿ ರೂ.ಗಳ ಚಿನ್ನದ ಅಕ್ರಮ ವಿಲೇವಾರಿ ಯತ್ನ ಕೇರಳ ರಾಜಕೀಯವನ್ನು ಬೆಚ್ಚಿಬೀಳಿಸಿತು.
ಐಟಿ ಇಲಾಖೆಯ ಅಧೀನದಲ್ಲಿರುವ ರಾಜ್ಯ ಮಾಹಿತಿ ತಂತ್ರಜ್ಞಾನ ಮತ್ತು ಮೂಲಸೌಕರ್ಯ ಕಾರ್ಯಾಚರಣೆ ವ್ಯವಸ್ಥಾಪಕ ಸ್ವಪ್ನಾ ಸುರೇಶ್ ಅವರು ಚಿನ್ನದ ಕಳ್ಳಸಾಗಣೆಯ ಹಿಂದಿನ ಸೂತ್ರಧಾರಿ ಎಂದು ತನಿಖಾ ತಂಡ ಕಂಡುಹಿಡಿದಿದೆ. ಸ್ವಪ್ನಾಳ ಬಗ್ಗೆ ಮಾಹಿತಿ ಲಭ್ಯವಾದುದು ಕಸ್ಟಮ್ಸ್ ನಿಂದ ಬಂಧಿಸಲ್ಪಟ್ಟ ದೂತಾವಾಸದ ಮಾಜಿ ಪಿ ಆರ್ ಒ ಮತ್ತು ತಿರುವಲ್ಲಂ ಮೂಲದ ಸರಿತ್ ಅವರಿಂದ. ಪ್ರಕರಣದ ಬಳಿಕ ಐ.ಟಿ. ವಿಭಾಗವು ಸಪ್ನಾಳನ್ನು ಕೆಲಸದಿಂದ ವಜಾ ಮಾಡಿತ್ತು.
ಬಳಿಕದ ನಾಟಕೀಯ ಘಟನೆಯಲ್ಲಿ ಉನ್ನತ ಮಟ್ಟದಲ್ಲಿ ಹಲವರು ಭಾಗಿಯಾಗಿರುವ ವರದಿಗಳು ಬಂದವು. ಸಿಎಂ ಕಚೇರಿ ಮತ್ತು ಐಟಿ ಕಾರ್ಯದರ್ಶಿ ಎಂ.ಶಿವಶಂಕರ್ ಅವರೊಂದಿಗೆ ಸ್ವಪ್ನಾ ಸಂಬಂಧ ಹೊಂದಿದ್ದಾರೆ ಎಂಬ ಆರೋಪಗಳು ಹೊರಬಿದ್ದ ಬಳಿಕ ಸರ್ಕಾರ ಒತ್ತಡಕ್ಕೆ ಒಳಗಾಯಿತು. ಪ್ರತಿಪಕ್ಷಗಳು ಈ ವಿಷಯವನ್ನು ರಾಜಕೀಯ ಅಸ್ತ್ರವಾಗಿಯೂ ಬಳಸಿಕೊಂಡಿವೆ.
ಪ್ರಕರಣ ಸಾಗಿಬಂದ ಸೂಚಿ:
ಜೂನ್ 30: ದುಬೈನಿಂದ ತಿರುವನಂತಪುರಕ್ಕೆ ಎಮಿರೇಟ್ಸ್ ಸರಕು ಹಾರಾಟದಲ್ಲಿ ಚಿನ್ನದ ಸಾಮಾನು ಪತ್ತೆಯಾಯಿತು. ಚಿನ್ನ ಕಳ್ಳಸಾಗಣೆ ಹಿಂದೆ ಹೆಚ್ಚಿನ ಪ್ರಭಾವಿಗಳ ಸಂಪರ್ಕವಿದೆ ಎಂದು ತಿಳಿದುಬಂತು. ಶಿವಶಂಕರ್ ಹೆಸರು ಮೊದಲು ಉಲ್ಲೇಖಿಸಲಾಗಿತ್ತು.
ಜುಲೈ 7: ಶಿವಶಂಕರ್ ಅವರನ್ನು ಮುಖ್ಯಮಂತ್ರಿ ಕಾರ್ಯದರ್ಶಿ ಮತ್ತು ಐಟಿ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಲಾಯಿತು.
ಜುಲೈ 11: ಶಿವಶಂಕರ್ ಅವರ ಬಾಡಿಗೆ ಫ್ಲಾಟ್ ಮೇಲೆ ಕಸ್ಟಮ್ಸ್ ದಾಳಿ
ಜುಲೈ 14: ಕಸ್ಟಮ್ಸ್ ತಿರುವನಂತಪುರ ಕಚೇರಿಯಲ್ಲಿ ಶಿವಶಂಕರ್ ಅವರನ್ನು ಪ್ರಶ್ನಿಸಲಾಯಿತು
ಜುಲೈ 16: ಎಂ.ಎ. ಶಿವಶಂಕರ್ ಅವರನ್ನು ಅಧಿಕೃತವಾಗಿ ಸೇವೆಯಿಂದ ಅಮಾನತುಗೊಳಿಸಲಾಯಿತು. ಸಂಬಂಧಗಳನ್ನು ಬೆಳೆಸುವಲ್ಲಿ ಶಿವಶಂಕರ್‍ಗೆ ಜವಾಬ್ದಾರಿಯ ಕೊರತೆ ಇದೆ ಎಂದು ನಿರ್ಣಯಿಸಿತು.
ಜುಲೈ 17: ಸ್ವಾಪ್ನಾ ಅವರನ್ನು ಉದ್ಯೋಗ ನೇಮಕಗೊಳಿಸಿರುವುದು ಶಿಪಾರಸಿನ ಮೇರೆಗೆ ಎಂದು ಸರ್ಕಾರ ಹೇಳಿಕೊಂಡಿದೆ
ಜುಲೈ 23: ಶಿವಶಂಕರ್ ಅವರನ್ನು ಎನ್‍ಐಎ 5 ಗಂಟೆಗಳ ಕಾಲ ವಿಚಾರಣೆ ನಡೆಸಿತು
ಜುಲೈ 28: ಶಿವಶಂಕರ್ ಅವರನ್ನು ಎನ್‍ಐಎ 10 ಗಂಟೆಗಳ ಕಾಲ ವಿಚಾರಣೆ ನಡೆಸಿತು
ಆಗಸ್ಟ್ 2: ಶಿವಶಂಕರ್ ವಿರುದ್ಧ ತನಿಖೆ ನಡೆಸಲು ವಿಜಿಲೆನ್ಸ್ ಅನುಮತಿ ಕೋರಿತು
ಆಗಸ್ಟ್ 15: ಶಿವಶಂಕರ್ ಅವರನ್ನು ಇಡಿ ಪ್ರಶ್ನಿಸಿತು
ಅಕ್ಟೋಬರ್ 9: ಶಿವಶಂಕರ್ ಅವರನ್ನು 11 ಗಂಟೆಗಳ ಕಾಲ ಕಸ್ಟಮ್ಸ್ ಪ್ರಶ್ನಿಸಿತು
ಅಕ್ಟೋಬರ್ 10: ಕಸ್ಟಮ್ಸ್ ಶಿವಶಂಕರ್ ಮತ್ತು ಸ್ವಪ್ನಾ ಅವರನ್ನು ಒಟ್ಟಿಗೆ ವಿಚಾರಣೆ ನಡೆಸಿತು
ಅಕ್ಟೋಬರ್ 14: ಮತ್ತೆ ಪ್ರಶ್ನಿಸಲು ಕರೆ. ಆದರೆ ಇ.ಡಿ. ಶಿವಶಂಕರ್ ಕಚೇರಿಗೆ ಗೈರು. ನಿರೀಕ್ಷಿತ ಜಾಮೀನು ಕೋರಿ ಹೈಕೋರ್ಟ್‍ನಲ್ಲಿ
ಅಕ್ಟೋಬರ್ 16: ವಿಚಾರಣೆಗಾಗಿ ಶಿವಶಂಕರ್ ಅವರ ಮನೆಯಲ್ಲಿ ಕಸ್ಟಮ್ಸ್. ಶಿವಶಂಕರ್ ಅನಾರೋಗ್ಯದಿಂದಾಗಿ ಖಾಸಗಿ ಆಸ್ಪತ್ರೆಗೆ ದಾಖಲು
ಅಕ್ಟೋಬರ್ 17: ಶಿವಶಂಕರ್ ಅವರನ್ನು ವೈದ್ಯಕೀಯ ಕಾಲೇಜಿಗೆ ವರ್ಗಾವಣೆ
ಅಕ್ಟೋಬರ್ 19: ಶಿವಶಂಕರ್ ಅವರನ್ನು ವೈದ್ಯಕೀಯ ಕಾಲೇಜಿನಿಂದ ಆಯುರ್ವೇದ ಆಸ್ಪತ್ರೆಗೆ ವರ್ಗಾವಣೆ. ಶಿವಶಂಕರ್ ಅವರನ್ನು 23 ರವರೆಗೆ ಬಂಧಿಸದಂತೆ ಕಸ್ಟಮ್ಸ್ ಗ್ಗೆ ನ್ಯಾಯಾಲಯ ಆದೇಶ
ಅಕ್ಟೋಬರ್ 23: ಶಿವಶಂಕರ್ ಅವರ ಬಂಧನವನ್ನು ಅಕ್ಟೋಬರ್ 28 ರವರೆಗೆ ಅಮಾನತುಗೊಳಿಸಲಾಯಿತು
ಅಕ್ಟೋಬರ್ 28: ಶಿವಶಂಕರ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಯಿತು. ಶಿವಶಂಕರ್ ಅವರನ್ನು ಇಡಿ ಆಸ್ಪತ್ರೆಯಿಂದ ವಶಕ್ಕೆ ತೆಗೆದುಕೊಂಡಿತು. ಆರು ಗಂಟೆಗಳ ವಿಚಾರಣೆಯ ನಂತರ ಬಂಧನವನ್ನು ದಾಖಲಿಸಲಾಗಿದೆ.
ಸರ್ಕಾರ ಮತ್ತು ಸಿಪಿಎಂ ಒತ್ತಡದಲ್ಲಿ:
ಶಿವಶಂಕರ್ ಅವರ ಬಂಧನವು ಚುನಾವಣೆಯ ಹೊಸ್ತಿಲಿನ ಈ ಹಂತದಲ್ಲಿ ಸರ್ಕಾರ ಮತ್ತು ಸಿಪಿಎಂಗೆ ತಲೆನೋವಾಗಿಯೂ ಹಾಗೂ ಪ್ರತಿಪಕ್ಷಗಳಿಗೆ ರಾಜಕೀಯ ದಾಳವಾಗಿ ಪರಿಣಮಿಸಿದೆ. ಪ್ರತಿಪಕ್ಷ ಗುಂಪುಗಳು ಮುಖ್ಯಮಂತ್ರಿ ರಾಜೀನಾಮೆ ನೀಡುವಂತೆ ಕರೆ ನೀಡಿದೆ.
ಚಿನ್ನದ ಕಳ್ಳಸಾಗಣೆ ಸ್ಪ್ರಿಂಕ್ಲರ್ ಒಪ್ಪಂದದ ನಂತರ ಶಿವಶಂಕರ್ ಮೂಲಕ ಮುಖ್ಯಮಂತ್ರಿಯನ್ನು ಗುರಿಯಾಗಿಸಿಕೊಂಡ ಪ್ರತಿಪಕ್ಷಗಳಿಗೆ ಅನಾಯಾಸವಾಗಿ ಲಭ್ಯವಾದ ಆಯುಧವಾಗಿದೆ. ಚಿನ್ನ ಕಳ್ಳಸಾಗಣೆ ಸಿಕ್ಕಿಬಿದ್ದ ಎರಡನೇ ದಿನ, ಶಿವಶಂಕರ್ ಹೆಸರು ಕೇಳಿ ಬಂದಿತು. 115 ದಿನಗಳ ನಂತರ ಶಿವಶಂಕರ್ ಅವರನ್ನು ವಶಕ್ಕೆ ತೆಗೆದುಕೊಂಡಾಗ ಅವರು ಮಾಡಿದ ಆರೋಪಗಳು ನಿಜವೆಂದು ಪ್ರತಿಪಕ್ಷಗಳು ವಾದಿಸತೊಡಗಿದೆ.