ಕಾಸರಗೋಡು: ರಾಜ್ಯದಲ್ಲಿ 2024 ರ ವೇಳೆಗೆ 49.65 ಲಕ್ಷ ಗ್ರಾಮೀಣ ಕುಟುಂಬಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ರಾಜ್ಯಮಟ್ಟದ ಜಲಜೀವನ್ ಮಿಷನ್ ಯೋಜನೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ವೀಡಿಯೋ ಕಾನ್ಪರೆನ್ಸ್ ಮೂಲಕ ಉದ್ಘಾಟಿಸಿದರು.
ಜಲಸಂಪನ್ಮೂಲ ಸಚಿವ ಕೆ.ಎಸ್. ಕೃಷ್ಣನ್ ಕುಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯಾಡಳಿತ ಸಚಿವ ಎ.ಸಿ.ಮೊಯ್ದೀನ್ ಮತ್ತು ಹಣಕಾಸು ಸಚಿವ ಡಾ.ಟಿ.ಎಂ ಥಾಮಸ್ ಐಸಾಕ್ ಮುಖ್ಯ ಅತಿಥಿಗಳಾಗಿದ್ದರು.
ಕಾಞಂಗಾಡ್ ವಿಧಾನಸಭಾ ಕ್ಷೇತ್ರ ಮಟ್ಟದ ಉದ್ಘಾಟನೆ ವೆಳ್ಳಿಕ್ಕೋತ್ ಮಹಾಕವಿ ಪಿ.ವಿ.ಸ್ಮಾರಕ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಂದಾಯ ಮತ್ತು ವಸತಿ ಸಚಿವ ಇ.ಚಂದ್ರಶೇಖರನ್ ಚಾಲನೆ ನೀಡಿದರು. ಕಾಞಂಗಾಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎಂ. ಗೌರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ವರದಿ ಮಂಡಿಸಿದರು. ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಜಿಸಿ ಬಶೀರ್ ಮುಖ್ಯ ಅತಿಥಿಗಳಾಗಿದ್ದರು. ಕಾಞಂಗಾಡ್ ಬ್ಲಾಕ್ ಪಂಚಾಯತ್ ಸದಸ್ಯ ಸಿ.ಕೆ.ಸೈನಬ, ಅಜಾನೂರು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ವಿ.ರಾಘವನ್ ಮತ್ತು ಕೆ ಸತಿ, ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಪಿ.ಬಾಲಕೃಷ್ಣನ್, ದಾಮೋದರನ್, ಸುರೇಶ್ ಪುತಿಯೆಡತ್, ಎನ್ ಮಧು, ಜಲ ಪ್ರಾಧಿಕಾರ ಸಹಾಯಕ ಅಭಿಯಂತರ ಎಸ್. ಗೋವಿಂದರಾಜ್ ಉಪಸ್ಥಿತರಿದ್ದರು. ಅಜಾನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪಿ.ದಾಮೋದರನ್ ಸ್ವಾಗತಿಸಿ, ಕಾಸರಗೋಡು ಜಲ ಪ್ರಾಧಿಕಾರದ ಕಾರ್ಯನಿರ್ವಾಹಕ ಅಭಿಯಂತರ ಕೆ.ಸುದೀಪ್ ವಂದಿಸಿದರು.