ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗೆ ರಂಗ ಸಿದ್ದಗೊಳ್ಳುತ್ತಿದ್ದು ಜಿಲ್ಲಾ-ಬ್ಲಾಕ್ ಪಂಚಾಯತ್ ಮೀಸಲಾತಿ ವಾರ್ಡ್ ಗಳ ಆಯ್ಕೆ ಸೋಮವಾರ ಆನ್ ಲೈನ್ ಸೌಲಭ್ಯಗಳೊಂದಿಗೆ ಚೀಟಿ ಎತ್ತುವ ಮೂಲಕ ನಡೆಯಿತು.
ಕಳೆದ ಬಾರಿ ಜನರಲ್ ಡಿವಿಝನ್ ಗಳಾಗಿದ್ದ ಕಾಸರಗೋಡು ಜಿಲ್ಲಾ ಪಂಚಾಯತ್ ನ ವಿಭಾಗಗಳು ಈ ಬಾರಿ ಮೀಸಲಾತಿ ಡಿವಿಝನ್ ಗಳಾಗಿವೆ. ಸಿವಿಲ್ ಸ್ಟೇಷನ್ (ಡಿವಿಝನ್ 15) ಡಿವಿಝನ್ ಚೀಟಿ ಎತ್ತುವಿಕೆ ಮೂಲಕ ಮಹಿಳಾ ಮೀಸಲಾತಿ ವಿಭಾಗವಾಗಿ ಆಯ್ಕೆಯಾಗಿದೆ. ಆಯ್ಕೆ ಕ್ರಮದಂತೆ 2010 ರಲ್ಲೂ, 2015ರಲ್ಲೂ ಸತತವಾಗಿ ಮೀಸಲಾತಿ ಡಿವಿಝನ್ ಆಗಿರುವ 14ನ್ನು ಹೊರತುಪಡಿಸಿ ಆಯ್ಕೆ ನಡೆದಿತ್ತು. ಜಿಲ್ಲಾ ಪಂಚಾಯತ್ ಪರಿಶಿಷ್ಟ ಜಾತಿ ಮೀಸಲಾತಿ ವಿಭಾಗವಾಗಿ ಪಿಲಿಕೋಡ್ (ಡಿವಿಝನ್ 9 ) ಆಯ್ಕೆಗೊಂಡಿದೆ. ಪರಿಶಿಷ್ಟ ಪಂಗಡ ವಿಭಾಗವಾಗಿ ಪುತ್ತಿಗೆ (ವಿಭಾಗ 2) ಆಯ್ಕೆಯಾಗಿದೆ.
ಬ್ಲಾಕ್ ಪಂಚಾಯತ್ ಮೀಸಲಾತಿ ವಾರ್ಡ್ ಗಳು
ಮಂಜೇಶ್ವರ ಬ್ಲಾಕ್ : ಮಹಿಳಾ ಮೀಸಲಾತಿ-01,04,05,08,09,11,15, ಚೀಟಿ ಎತ್ತುವ ಮೂಲಕ 13-ಕಡಂಬಾರ್. ಪರಿಶಿಷ್ಟ ಜಾತಿ ಮೀಸಲಾತಿ-ಬಂದ್ಯೋಡು.
ಕಾಸರಗೋಡು ಬ್ಲಾಕ್ : ಮಹಿಳಾ ಮೀಸಲಾತಿ-02,03,05,06,07,11,14, ಚೀಟಿ ಎತ್ತುವ ಮೂಲಕ ವಾರ್ಡ್ 9-ಚೆರ್ಕಳ, ಪರಿಶಿಷ್ಟ ಜಾತಿ ಮೀಸಲಾತಿ-ಕಳನಾಡು.
ಕಾಞಂಗಾಡ್ ಬ್ಲಾಕ್: ಮಹಿಳಾ ಮೀಸಲಾತಿ-03,06,07,10,11,13-ಪಳ್ಳಿಕ್ಕರೆ. ಪರಿಶಿಷ್ಟ ಜಾತಿ ಮೀಸಲಾತಿ-ಕರಿಪೆÇ್ಪಡಿ.
ಕಾರಡ್ಕ ಬ್ಲೋಕ್: ಮಹಿಳಾ ಮೀಸಲಾತಿ-01,03,04,05,09,10, ವಾರ್ಡ್ 08-ಕುತ್ತಿಕೋಲು, ಪರಿಶಿಷ್ಟ ಜಾತಿ 07-ಬಂದಡ್ಕ, ಪರಿಶಿಷ್ಟ ಪಂಗಡ 08-ಕುಂಬಡಾಜೆ.
ನೀಲೇಶ್ವರ ಬ್ಲಾಕ್ : ಮಹಿಳಾ ಮೀಸಲಾತಿ-02,04,06,07,09,13, 01-ತುರ್ತಿ. ಪರಿಶಿಷ್ಟ ಜಾತಿ ಮೀಸಲಾತಿ-ಕ್ಲಾಯಿಕ್ಕೋಡು.
ಪರಪ್ಪ ಬ್ಲಾಕ್: ಮಹಯಿಳಾ ಮೀಸಲಾತಿ-01,04,08,11,12, 14-ಪರಿಶಿಷ್ಟ ಪಂಗಡ ಮಹಿಳಾ ಮೀಸಲಾತಿ-ಕೊಟ್ಟಮಲ, ಪರಿಶಿಷ್ಟ ಪಂಗಡ-ಎಳೇರಿ.
ಜಿಲ್ಲಾ ಪಂಚಾಯತ್ ಮೀಸಲಾತಿ ವಾರ್ಡ್ ಗಳು
ಮಹಿಳಾ ಮೀಸಲಾತಿ: 1. ವರ್ಕಾಡಿ, 2. ಎಡನೀರು, 3, ಬೇಡಗಂ, 8, ಕರಿಂದಲಂ, 11. ಮಡಿಕೈ, 12. ಪೆರಿಯ, 13. ಉದುಮಾ, 15. ಸಿವಿಲ್ ಸ್ಟೇಷನ್(ಪುನರಾವರ್ತನೆ), 16. ಕುಂಬಳೆ.
ಪರಿಶಿಷ್ಟ ಪಂಗಡ-9. ಪಿಲಿಕೋಡ್, ಪರಿಶಿಷ್ಟ ಜಾತಿ -2. ಪುತ್ತಿಗೆ.
ಜಿಲ್ಲಾ-ಬ್ಲಾಕ್ ಪಂಚಾಯತ್ ಮೀಸಲಾತಿ ವಾರ್ಡ್ ಗಳ ಆಯ್ಕೆ ಸೋಮವಾರ ಆನ್ ಲೈನ್ ಸೌಲಭ್ಯಗಳೊಂದಿಗೆ ಚೀಟಿ ಎತ್ತುವ ಮೂಲಕ ನಡೆಯಿತು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಎ.ಕೆ.ರಮೇಂದ್ರನ್, ಪಂಚಾಯತ್ ಸಹಾಯಕ ನಿರ್ದೇಶಕ ಧನೀಶ್, ಹಣಕಾಸು ಅಧಿಕಾರಿ ಕೆ.ಸತೀಶನ್ , ಎ.ಡಿ.ಸಿ.(ಜನರಲ್) ಬೆವಿನ್ ಜಾನ್ ವರ್ಗೀಸ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಕೆ.ಆರ್.ಜಯಾನಂದ, ಮನುಲಾಲ್ ಮೇಲತ್, ಮೂಸಾಬಿ ಚೆರ್ಕಳ, ವಿ.ಸುರೇಶ್ ಬಾಬು, ನ್ಯಾಷನಲ್ ಅಬ್ದುಲ್ಲ, ಎಂ.ಸಿ.ಪ್ರಭಾಕರನ್ , ಸ್ಥಳೀಯಾಡಳಿತ ಸಂಸ್ಥೆಗಳ, ಕಂದಾಯ-ಚುನಾವಣೆ ವಿಭಾಗಗಳ ಸಿಬ್ಬಂದಿ ಉಪಸ್ಥಿತರಿದ್ದರು.