ಕಾರರಗೋಡು: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ಭಾರತೀಯ ಚಿತ್ರರಂಗದ ಗಾನ ಗಾರುಡಿಗ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ, ಯಕ್ಷಗಾನದ ಹಿರಿಯ ಪ್ರಸಾದನ ಕಲಾವಿದ ವಿಷ್ಣು ಪುರುಷ ಜೋಡುಕಲ್ಲು ಅವರ ಸಂಸ್ಮರಣೆ ಕಾರ್ಯಕ್ರಮ ಪಾರೆಕಟ್ಟೆಯ ರಂಗ ಕುಟೀರದಲ್ಲಿ ಜರಗಿತು.
ಸವಾಕ್ ಜಿಲ್ಲಾ ಸಮಿತಿ ವತಿಯಿಂದ ನಡೆದ ಸಮಾರಂಭದಲ್ಲಿ ಸಮಿತಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ವೀಜಿ ಕಾಸರಗೋಡು ಸಂಸ್ಮರಣೆ ನುಡಿ ಆಡಿದರು. ಸಂಘಟನೆಯ ವಿವಿಧ ಸಮಿತಿಗಳ ಪದಾ„ಕಾರಿಗಳಾದ ದಯಾಪ್ರಸಾದ್ ಕೆ.ಎಸ್., ಎಂ.ಎಂ.ಗಂಗಾಧರನ್, ಸುರೇಶ್ ಬೇಕಲ್, ಪಿ.ವಿ.ಬಾಬು, ಪಿ.ವಿ.ಬಾಲರಾಜ್, ಜಯಂತಿ ಸುವರ್ಣ, ಭಾರತೀ ಬಾಬು, ರವೀಂದ್ರನ್ ನಾಯರ್, ಪ್ರಾರ್ಥನಾ ಕಲ್ಲೂರಾಯ, ಹರಿಕಾಂತ್ ಕೆ., ದಿವಾಕರ ಪಿ.ಅಶೋಕನಗರ, ನರೇಂದ್ರ ಮೊದಲಾದವರು ಉಪಸ್ಥಿತರಿದ್ದರು.
ನಂತರ ಸಮಿತಿಯ ಸಭೆ ಜರಗಿತು. ಸಂಘಟನೆಯ ಮುಂದಿನ ಕಾರ್ಯ-ಯೋಜನೆಗಳ ಬಗ್ಗೆ ಚರ್ಚಿಸಲಾಯಿತು.
ಗಾನಾಲಾಪನೆ ಮೂಲಕ ಶ್ರದ್ದಾಂಜಲಿ : ಸಮಾರಂಭದಲ್ಲಿ ಡಾ.ಎಸ್.ಪಿ.ಬಿ. ಅವರಿಗೆ ಗಾನಾಲಾಪನೆ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಜರಗಿತು. 'ನೂರೊಂದು ನೆನಪು' ಎಂಬ ಹೆಸರಿನಲ್ಲಿ ನಡೆದ ಕಾರ್ಯಕ್ರಮವನ್ನು ಸವಾಕ್ ಜಿಲ್ಲಾ ಸಮಿತಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ಉದ್ಘಾಟಿಸಿದರು. ಸಮಿತಿಯ ಪದಾ„ಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಹರಿಕಾಂತ್ ಕೆ. ಮತ್ತು ದಯಾಪ್ರಸಾದ್ ಕೆ.ಎಸ್. ನೇತೃತ್ವ ವಹಿಸಿದ್ದರು. ದಿವಾಕರ ಪಿ.ಅಶೋಕನಗರ, ಜಯಂತಿ ಸುವರ್ಣ, ವೀಜಿ ಕಾಸರಗೋಡು ಮೊದಲಾದವರು ಡಾ.ಎಸ್.ಪಿ.ಬಿ. ಅವರು ಹಾಡಿದ ವಿವಿಧ ಭಾಷೆಗಳ ಹಾಡುಗಳನ್ನು ಆಲಾಪಿಸಿದರು.