ತಿರುವನಂತಪುರ: ಸರ್ಕಾರದ ವೆಚ್ಚಗಳನ್ನು ಕಡಿತಗೊಳಿಸುವ ಭಾಗವಾಗಿ ಲೋಕ ಕೇರಳ ಸಭೆಯ ನೂತನ ನಿರ್ದೇಶಕರನ್ನಾಗಿ ನಿವೃತ್ತ ಸರ್ಕಾರಿ ಅಧಿಕಾರಿಯನ್ನು ನೇಮಕ ಮಾಡಲು ಆದೇಶ ಹೊರಡಿಸಲಾಗಿದೆ. ನಿವೃತ್ತ ಹೆಚ್ಚುವರಿ ಕಾರ್ಯದರ್ಶಿ ಮತ್ತು ಸಿಪಿಎಂ ಯೂನಿಯನ್ ನ ಮುಖಂಡ ಜಿ.ಎಸ್. ಏಂಜಲೋಸ್ ಅವರನ್ನು ವಿಶೇಷ ಅಧಿಕಾರಿಯಾಗಿ ನೇಮಿಸಲಾಗಿದೆ. ನೇಮಕಾತಿ ಒಂದು ವರ್ಷದ್ದಾಗಿದೆ. ಇದು ಗುತ್ತಿಗೆಯಾದಾರದ ನೇಮಕಾತಿಯಾಗಿರುವುದರಿಂದ, ಪ್ರಸ್ತುತ ಪಡೆಯುತ್ತಿರುವ ಪಿಂಚಣಿಗೆ ಅರ್ಹವಾಗಿದೆ. ನೇಮಕಾತಿ ಆದೇಶದಲ್ಲಿ ವೇತನ ಆದೇಶವನ್ನು ನಂತರ ನೀಡಲಾಗುವುದು ಎಂದು ಹೇಳಲಾಗಿದೆ. ಒಂದು ತಿಂಗಳ ಹಿಂದೆ ಸರ್ಕಾರ ಹೊರಡಿಸಿದ ವೆಚ್ಚ ಕಡಿತ ಪ್ರಸ್ತಾಪಗಳ ಮಧ್ಯೆ ಈ ನೇಮಕಾತಿ ಸೋಮವಾರ ನಡೆದಿದೆ.
ಕೋವಿಡ್ ತೀವ್ರಗೊಂಡ ಬಳಿಕ ಕೊಲ್ಲಿ ರಾಷ್ಟ್ರಗಳಿಂದ ಹೆಚ್ಚಿನ ಸಂಖ್ಯೆಯ ಮಲಯಾಳಿಗಳು ಆಗಮಿಸುವ ಬಗ್ಗೆ ಅನೇಕ ಆತಂಕಗಳು ಮತ್ತು ಬಿಕ್ಕಟ್ಟುಗಳು ಇದ್ದ ಸಮಯದಲ್ಲಿ ಲೋಕಾ ಕೇರಳ ಸಭಾ ಸರ್ಕಾರಕ್ಕೆ ಯಾವುದೇ ಸಹಕಾರವನನೂ ನೀಡಿರಲಿಲ್ಲ. ಲೋಕ ಕೇರಳಸಭೆಯ ಹೆಸರಿನಲ್ಲಿ ಸರ್ಕಾರ ದೊಡ್ಡ ವಂಚನೆ ಮಾಡಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಲೋಕ ಕೇರಳ ಸಭೆ ಈ ವರ್ಷ ಜನವರಿ 1 ರಿಂದ 3 ರವರೆಗೆ ನಡೆದಿತ್ತು.
ಲೋಕ ಕೇರಳ ಸಭೆಯ ಪ್ರತಿನಿಧಿಗಳು ಆಹಾರಕ್ಕಾಗಿ ಮಾತ್ರ 63 ಲಕ್ಷ ರೂ. ಮತ್ತು ವಸತಿಗಾಗಿ 23 ಲಕ್ಷ ರೂ.ಕಳೆದವರ್ಷದ ಮುಂಗಡಪತ್ರದಲ್ಲಿ ವಚ್ಚಮಾಡಲಾಗಿದೆ. ಈ ವರ್ಷದ ಬಜೆಟ್‍ನಲ್ಲಿ ಲೋಕ ಕೇರಳಸಭೆಗೆ `10 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಈ ಹಣವನ್ನು ದುರುಪಯೋಗಪಡಿಸಿಕೊಳ್ಳಲು ಮಾತ್ರ ಲೋಕ ಕೇರಳ ಸಭೆ ಇರುವುದೆಂದು ಭಾರೀ ವಿವಾದಗಳು ಈಗಾಗಲೇ ಕೇಳಿಬಂದಿದೆ. ಈ ಸಾಂಸ್ಥಿಕ ರಚನೆಯ ಒಟ್ಟು ಲಾಭವು ಯಾವುದೇ ರೀತಿಯಲ್ಲಿ ವಲಸಿಗ ಮಲಯಾಳಿಗಳ ಕಲ್ಯಾಣ ಅಥವಾ ಇತರ ಅಗತ್ಯಗಳಿಗೆ ಅನುಕೂಲಕರವಾಗಿಲ್ಲ, ಇದು ಸಿಪಿಎಂ ಪಕ್ಷದ ಕಾರ್ಯಕರ್ತರು ಮತ್ತು ಸಿಪಿಎಂ ನಾಯಕರ ಗುಂಪಿಗೆ ಮಾತ್ರ ಪ್ರಯೋಜನಕಾರಿಯೆಂದು ಈಗಾಗಲೇ ಭಾರೀ ಚರ್ಚೆಗಳೂ ನಡೆದಿದ್ದವು.
ಕೇರಳ ಅಭಿವೃದ್ಧಿ ನಿಧಿ, ಎನ್‍ಆರ್‍ಐ ಹೂಡಿಕೆ, ಪುನರ್ವಸತಿ, ಭದ್ರತೆ, ಭಾರತದ ಒಳಗೆ ಮತ್ತು ಹೊರಗಿನ ಎನ್‍ಆರ್‍ಐಗಳ ಸಮಸ್ಯೆಗಳ ಕುರಿತು ಕ್ರಿಯಾ ಯೋಜನೆಗಳನ್ನು ರೂಪಿಸುವುದು ಮೊದಲಾದವುಗಳಿಗಾಗಿ ಲೋಕ ಕೇರಳ ಸಭೆಯನ್ನು ರಚಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದರು. ಆದರೆ ಇಲ್ಲಿಯವರೆಗೆ, ವಲಸಿಗರಿಗೆ ಈ ಸಂಸ್ಥೆಯಿಂದ ಯಾವುದೇ ಪ್ರಯೋಜನ ವಾಗಿಲ್ಲ ಎಂದು ದೂರಲಾಗಿದೆ. ಲೋಕ ಕೇರಳ ಸಭೆ ಭಾರೀ ವಂಚನೆಯ ತಾಣವೆಂದು ಆರೋಪಿಸಿ ಈ ವರ್ಷದ ಸಭೆಯಿಂದ ಪ್ರತಿಪಕ್ಷಗಳು ದೂರವಿತ್ತು.