HEALTH TIPS

ಭಾರತದ ಬಾಹ್ಯಾಕಾಶ ಪಯಣದಲ್ಲಿ ಸಾಗಲು ಖಾಸಗಿ ಕಂಪೆನಿಗಳಿಗೆ ಎಲ್ಲ ರೀತಿಯ ಅವಕಾಶ- ಡಾ ಜಿತೇಂದ್ರ ಸಿಂಗ್

       ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಖಾಸಗಿ ವಲಯಕ್ಕೆ ತನ್ನ ಸೌಲಭ್ಯಗಳನ್ನು ತೆರೆಯಲು ಸಜ್ಜಾಗಿದೆ.

      ಕೇಂದ್ರ ಪರಮಾಣು ಇಂಧನ ಮತ್ತು ಬಾಹ್ಯಾಕಾಶ ಖಾತೆ (ಸ್ವತಂತ್ರ) ಸಚಿವ ಜಿತೇಂದ್ರ ಸಿಂಗ್ ಭಾನುವಾರ ಈ ವಿಷಯ ತಿಳಿಸಿ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಾಹ್ಯಾಕಾಶ ಇಲಾಖೆಯಲ್ಲಿ ಐತಿಹಾಸಿಕ ಸುಧಾರಣೆಗಳನ್ನು ತೆಗೆದುಕೊಂಡಿರುವ ಬಗ್ಗೆ ಉಲ್ಲೇಖಿಸಿದ್ದಾರೆ.

      ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಗ್ರಹಗಳ ಪರಿಶೋಧನೆ ಮತ್ತು ಬಾಹ್ಯಾಕಾಶ ಅನ್ವೇಷನೆಗಳಲ್ಲಿ ಮುಂದಿನ ಯೋಜನೆಗಳು ಖಾಸಗಿ ವಲಯಕ್ಕೆ ಮುಕ್ತವಾಗುತ್ತವೆ ಎಂದು ಅವರು ಹೇಳಿದ್ದಾರೆ. ಇದು ಸ್ವಾವಲಂಬಿ ಭಾರತದತ್ತ ಮೋದಿ ಸರ್ಕಾರದ ‘ಆತ್ಮ ನಿರ್ಭರ್’ ಮಾರ್ಗಸೂಚಿಯ ಒಂದು  ಭಾಗವಾಗಿದೆ. ಇದು ಬಾಹ್ಯಾಕಾಶ ಚಟುವಟಿಕೆಗಳಲ್ಲಿ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಉಪಕ್ರಮವನ್ನು ರೂಪಿಸಿದೆ ಎಂದು ಅವರು ಹೇಳಿದ್ದಾರೆ.

       ಹೊಸ ಸುಧಾರಣೆಗಳು ದೇಶದ ಬಾಹ್ಯಾಕಾಶ ಸಂಬಂಧಿತ ಚಟುವಟಿಕೆಗಳನ್ನು ‘ಪೂರೈಕೆ ಆಧಾರಿತ ಮಾದರಿ’ ಯಿಂದ ‘ಬೇಡಿಕೆ ಆಧಾರಿತ ಮಾದರಿ’ ಗೆ ಬದಲಾಯಿಸಲು ಪ್ರಯತ್ನಿಸುತ್ತವೆ ಎಂದ ಅವರು, ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ದೃಢೀಕರಣ ಕೇಂದ್ರ (ಐಎನ್-ಸ್ಪೇಸ್) ರಚನೆಯೊಂದಿಗೆ  ಕಾರ್ಯವಿಧಾನವೊಂದು ಜಾರಿಯಲ್ಲಿರುತ್ತದೆ. ಖಾಸಗಿ ವಲಯ, ಇಸ್ರೋ ಸೌಲಭ್ಯಗಳು ಮತ್ತು ಇತರ ಸಂಬಂಧಿತ ಸ್ವತ್ತುಗಳನ್ನು ಅವುಗಳ ಸಾಮರ್ಥ್ಯವನ್ನು ಸುಧಾರಿಸುವಂತೆ ಬಳಸಲು ಅನುಮತಿಸಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

     ಖಾಸಗಿ ಉದ್ಯಮಗಲು ತಮ್ಮ ಅರ್ಜಿಗಳನ್ನು ಸಲ್ಲಿಸಲು ವೆಬ್ ಲಿಂಕ್ ಒದಗಿಸಲಾಗಿದೆ. ಉದ್ಯಮಗಳು ಮತ್ತು ನವೋದ್ಯಮಗಳಿಂದ ಪಡೆದ ಅರ್ಜಿಗಳನ್ನು ಉನ್ನತ ಮಟ್ಟದ ಸಮಿತಿಯಿಂದ ಪ್ರಕ್ರಿಯೆಗೊಳಿಸಲಾಗುವುದು ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ. 



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries