HEALTH TIPS

"ನನ್ನ ಕೇರಳ ಹೈಟೆಕ್'; ಎಲ್ಲಾ ಸಾರ್ವಜನಿಕ ಶಾಲೆಗಳಲ್ಲಿ ಹೈಟೆಕ್ ತರಗತಿ ಕೊಠಡಿಗಳನ್ನು ಹೊಂದಿದ ಮೊದಲ ರಾಜ್ಯ ಕೇರಳ-ಘೋಷಣೆ

 

         ತಿರುವನಂತಪುರ: ಎಲ್ಲಾ ಸಾರ್ವಜನಿಕ ಶಾಲೆಗಳಲ್ಲಿ ಹೈಟೆಕ್ ತರಗತಿ ಕೊಠಡಿಗಳನ್ನು ಹೊಂದಿರುವ ಮೊದಲ ರಾಜ್ಯ ಕೇರಳವಾಗಿ ಹೊರಹೊಮ್ಮಿದೆ. ಕೇರಳ ಸಾರ್ವಜನಿಕ ಶಿಕ್ಷಣ ಕ್ಷೇತ್ರದಲ್ಲಿ ಭಾರತದ ಮೊದಲ ಸಂಪೂರ್ಣ ಡಿಜಿಟಲ್ ರಾಜ್ಯವಾಗಿದೆ ಎಂದು ಘೋಷಿಸಲಾಗಿದೆ. 'ನನ್ನ ಕೇರಳ ಹೈಟೆಕ್ ಆಗಿ ಮಾರ್ಪಟ್ಟಿದೆ' ಎಂಬ ಶೀರ್ಷಿಕೆಯೊಂದಿಗೆ ರಾಜ್ಯವು ಸಾರ್ವಜನಿಕ ಶಿಕ್ಷಣ ಕ್ಷೇತ್ರದಲ್ಲಿ ಈ ಸಾಧನೆಯನ್ನು ಮುನ್ನಡೆಸಿದೆ. ರಾಜ್ಯದ 16027 ಶಾಲೆಗಳಲ್ಲಿ 374274 ಡಿಜಿಟಲ್ ಸಾಧನಗಳನ್ನು ನಿಯೋಜಿಸುವ ಮೂಲಕ ಜಾರಿಗೆ ತಂದಿರುವ ಹೈಟೆಕ್ ಶಾಲಾ ಯೋಜನೆಗಳನ್ನು ಪೂರ್ಣಗೊಳಿಸುವುದನ್ನು ಮುಖ್ಯಮಂತ್ರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಕಟಿಸಿದರು. 

         ಕಿಫ್ಬಿ ಸಹಾಯದಿಂದ ಯೋಜನೆ ಜಾರಿ:

   ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಕಾಯ್ದೆಯ ಭಾಗವಾಗಿ ರಾಜ್ಯವು ಹೈಟೆಕ್ ತರಗತಿ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಗೆ ಕಿಫ್ಬಿ ಮತ್ತು ಕೈಟ್ ನೇತೃತ್ವ ವಹಿಸಿದೆ. ಸಂಸದರು ಮತ್ತು ಶಾಸಕರ ಆಸ್ತಿ ಅಭಿವೃದ್ಧಿ ನಿಧಿ ಮತ್ತು ಸ್ಥಳೀಯ ಸಂಸ್ಥೆಯ ನಿಧಿಯೊಂದಿಗೆ ಹೈಟೆಕ್ ತರಗತಿ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಹೈಟೆಕ್ ತರಗತಿ ಯೋಜನೆ ಸಾರ್ವಜನಿಕ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಸರ್ಕಾರ ಹೇಳಿದೆ.

             45,000 ಹೈಟೆಕ್ ತರಗತಿ ಕೊಠಡಿಗಳು:

    ತರಗತಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸುವ ಉದ್ದೇಶದಿಂದ ಸಾರ್ವಜನಿಕ ಶಾಲೆಗಳ ಮೂಲಸೌಕರ್ಯದಲ್ಲಿ ಕ್ರಾಂತಿಯುಂಟು ಮಾಡಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಮೊದಲ ಹಂತದಲ್ಲಿ, ಕಿಫ್ಬಿ ಹಣವನ್ನು ಬಳಸಿಕೊಂಡು ಕೈಟ್ಸ್ ನೇತೃತ್ವದಲ್ಲಿ  8 ರಿಂದ 12 ನೇ ತರಗತಿಗಳಲ್ಲಿ 45,000 ತರಗತಿ ಕೊಠಡಿಗಳನ್ನು ಹೈಟೆಕ್ ಆಗಿ ಪರಿವರ್ತಿಸಲಾಯಿತು. ಜೊತೆಗೆ ಲಿಟಲ್ ಕೈಟ್ಸ್ ಐಟಿ ಕ್ಲಬ್‍ಗಳನ್ನು ಕೂಡಾ ಪ್ರಾರಂಭಿಸಲಾಗಿದೆ. ಎಲ್ಲಾ ಶಿಕ್ಷಕರಿಗೆ ತಂತ್ರಜ್ಞಾನ ತರಬೇತಿಯನ್ನೂ ನೀಡಲಾಗಿದೆ. ಮುಂದಿನ ಹಂತದಲ್ಲಿ ಪ್ರಾಥಮಿಕ ಮತ್ತು ಉನ್ನತ ಪ್ರಾಥಮಿಕ ಶಾಲೆಗಳಲ್ಲಿ ಹೈಟೆಕ್ ಲ್ಯಾಬ್‍ಗಳನ್ನು ಸ್ಥಾಪಿಸಲಾಗುವುದು. 11,275 ಹೈಟೆಕ್ ಲ್ಯಾಬ್‍ಗಳನ್ನು ಕೂಡಾ ಸ್ಥಾಪಿಸಲಾಗುವುದು. ಈ ಎರಡು ಯೋಜನೆಗಳು ಪೂರ್ಣಗೊಳ್ಳುವುದರೊಂದಿಗೆ ಕೇರಳ ಶಿಕ್ಷಣ ಕ್ಷೇತ್ರದಲ್ಲಿ ಭಾರತದ ಮೊದಲ ಸಂಪೂರ್ಣ ಡಿಜಿಟಲ್ ರಾಜ್ಯವಾಗಲಿದೆ.

             3,74,274 ಡಿಜಿಟಲ್ ಸಾಧನಗಳು:

     ಸ್ಮಾರ್ಟ್ ತರಗತಿ ಯೋಜನೆಗಾಗಿ 16,027 ಶಾಲೆಗಳಿಗೆ ಒಟ್ಟು 3,74,274 ಡಿಜಿಟಲ್ ಸಾಧನಗಳನ್ನು ವಿತರಿಸಲಾಗಿದೆ. ಮುಖ್ಯಮಂತ್ರಿಯರು ಈ ಬಗ್ಗೆ ತಮ್ಮ ಫೇಸ್‍ಬುಕ್ ಪೆÇೀಸ್ಟ್ ನಲ್ಲಿ ತಿಳಿಸಿರುವಂತೆ ಮೊದಲ ಹಂತದಲ್ಲಿ 4752 ಪ್ರೌಢ ಶಾಲೆಗಳು ಮತ್ತು ಹೈಯರ್ ಸೆಕೆಂಡರಿ ಶಾಲೆಗಳಲ್ಲಿ 45,000 ಹೈಟೆಕ್ ತರಗತಿ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಈ ಯೋಜನೆಯು ಪ್ರಾಥಮಿಕ ಮತ್ತು ಉನ್ನತ ಪ್ರಾಥಮಿಕ ಹಂತಗಳಲ್ಲಿ 11,275 ಶಾಲೆಗಳಲ್ಲಿ ಹೈಟೆಕ್ ಲ್ಯಾಬ್‍ಗಳನ್ನು ಸ್ಥಾಪಿಸಿದೆ.

                 ತರಗತಿ ಕೋಣೆಗಳೊಂದಿಗೆ ಪರಿಸರ ಮತ್ತು ಹೈಟೆಕ್ ಕಲಿಕೆ: 

     ಕಲಿಕೆಯ ವಾತಾವರಣದ ಜೊತೆಗೆ ತರಗತಿ ಕೊಠಡಿಗಳನ್ನು ಹೈಟೆಕ್ ಆಗಿ ಪರಿವರ್ತಿಸುವ ಮೂಲಕ ಕೇರಳವನ್ನು ಎಲ್ಲಾ ಸಾರ್ವಜನಿಕ ಶಾಲೆಗಳಲ್ಲಿ ಹೈಟೆಕ್ ತರಗತಿ ಕೊಠಡಿಗಳನ್ನು ಹೊಂದಿರುವ ಮೊದಲ ರಾಜ್ಯವನ್ನಾಗಿ ಮಾಡುವ ಹೆಜ್ಜೆಯೆಂದು ಸಿಎಂ ವಿವರಿಸಿದರು. ಶಾಲೆಗಳಲ್ಲಿ ಡಿಜಿಟಲ್ ಸಾಧನಗಳನ್ನು ವಿತರಿಸಲಾಗಿದೆ ಮತ್ತು ಸ್ಥಾಪಿಸಲಾಗಿದೆ ಮಾತ್ರವಲ್ಲ, ಅದಕ್ಕೆ ತಕ್ಕಂತೆ ಬೋಧನಾ ವಿಧಾನಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಅವರು ಗಮನಸೆಳೆದಿದ್ದಾರೆ. ಡಿಜಿಟಲ್ ಕಲಿಕೆಗೆ ಅನುಕೂಲವಾಗುವಂತೆ 'ಸಮಗ್ರ' ಡಿಜಿಟಲ್ ಕಲಿಕೆ ಸಂಪನ್ಮೂಲ ಪೆÇೀರ್ಟಲ್ ಅನ್ನು ರಚಿಸಲಾಗಿದೆ. ಈ ಸಂಪನ್ಮೂಲ ಪೆÇೀರ್ಟಲ್ ಮೂಲಕ ಅಧ್ಯಯನ ಸಾಮಗ್ರಿಗಳನ್ನು ಸಂಗ್ರಹಿಸಬಹುದು. ಇದಕ್ಕಾಗಿ ಶಿಕ್ಷಕರಿಗೆ ಆನ್‍ಲೈನ್‍ನಲ್ಲಿ ತರಬೇತಿ ನೀಡಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries