ಕಾಸರಗೋಡು: ಕಾಸರಗೋಡು ಜಿಲ್ಲೆಯ ಹಿಂದುಳಿಯುವಿಕೆ ಇಂದು ಬದಲಾಗಿದೆ. ನಾಡು ಇಂದು ಪ್ರಗತಿಯ ಹಾದಿಯಲ್ಲಿದೆ. ಕಾಸರಗೋಡು ಈಗ ಹಳೆಯ ಕಾಸರಗೋಡಲ್ಲ. ರಾಜ್ಯ ಸರಕಾರದ ವಿಶೇಷ ಕಾಳಜಿಯಿಂದ ಕಾಸರಗೋಡು ಜಿಲ್ಲೆ ಮುಖಚರ್ಯೆ ಬದಲಿಸಿಕೊಂಡಿದೆ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಿದ್ಧಪಡಿಸಿರುವ 10 ಕಿರುಚಿತ್ರಗಳ ಪ್ರದರ್ಶನ ಸಮಾರಂಭ ಶನಿವಾರ ಜಿಲ್ಲಾಧಿಕಾರಿ ಕಿರುಸಭಾಂಗಣದಲ್ಲಿ ನಡೆದಿದ್ದು, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರಕಾರದ ವಿಶೇಷ ಕಾಳಜಿಯ ಪರಿಣಾಮ ಕಳೆದ ನಾಲ್ಕೂವರೆ ವರ್ಷದ ಅವಧಿಯಲ್ಲಿ ಇಡೀ ರಾಜ್ಯದಲ್ಲಿ ಪ್ರಗತಿಯ ಅಲೆಕಂಡುಬಂದಿದ್ದು, ಕಾಸರಗೋಡು ಜಿಲ್ಲೆಯ ಎಲ್ಲ ವಲಯಗಳಲ್ಲೂ ಅಭಿವೃದ್ಧಿ ಕಂಡುಬಂದಿದೆ. ಆದ್ರರ್ಂ, ಲೈಫ್, ಹರಿತ ಮಿಷನ್ ಗಳು, ಸಾರ್ವಜನಿಕ ಶಿಕ್ಷಣ ಸಂರಕ್ಷಣೆ ಯಜ್ಞ ಸಹಿತ ಯೋಜನೆಗಳೊಂದಿಗೆ ಜನಪರ ಚಟುವಟಿಕೆಗಳು ನಡೆದುಬಂದಿವೆ. ರಾಜಕೀಯ-ಸಾಮಾಜಿಕ ಭೇದಗಳಿಲ್ಲದೆ ಎಲ್ಲರಿಗೂ ಪ್ರಗತಿ ಲಭಿಸಬೇಕು ಎಂಬ ರಾಜ್ಯ ಸರಕಾರದ ನೀತಿ ಸ್ಥಳೀಯ ಮಟ್ಟದ ಅಭಿವೃದ್ಧಿಗೆ ಕಾರಣವಾಗಿದೆ. ಇದನ್ನೇ ಜಿಲ್ಲಾ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಿರುಚಿತ್ರಗಳು ತಿಳಿಸಿವೆ ಎಂದವರು ನುಡಿದರು.
ಕಾಸರಗೋಡು ಜಿಲ್ಲೆಯ ಹಿಂದುಳಿಯುವಿಕೆಯನ್ನು ಪರಿಹರಿಸುವಲ್ಲಿ ಪ್ರಭಾಕರನ್ ಆಯೋಗ ಕೊಡುಗೆಯಾಗಿ ನೀಡಿರುವ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನ ಸುಗಮ ಜಾರಿಗೆ ಜಿಲ್ಲೆಯವರೇ ಆದ ಅಧಿಕಾರಿಗೆ ಹೊಣೆ ನೀಡಿರುವುದು ಪೂರಕವಾಗಿದೆ. ಸ್ಥಳೀಯಾಡಳಿತ ಸಂಸ್ಥೇಗಳ ಅಧಿಕಾರ ವ್ಯಾಪ್ತಿಯ ವಿವಿಧ ವಲಯಗಳಲ್ಲಿ ಕಿಫ್ ಬಿ ಯೋಜನೆಗಳನ್ನು ಬಳಸಿ ಅತ್ಯುತ್ತಮ ಚಟುವಟಿಕೆಗಳನ್ನು ನಡೆಸಲಾಗಿದೆ. ಎರಡು ವಿಧದ ಬೃಹತ್ ನೆರೆಹಾವಳಿ, ನಿಫಾ, ಓಖಿಯಂಥಾ ದುರಂತಗಳು ನಡೆದರೂ, ಈಗ ಕೋವಿಡ್ ಸೋಂಕು ತಂದಿರುವ ಮುಗ್ಗಟ್ಟುಗಳ ನಡುವೆಯೂ ರಾಜ್ಯ ಸರಕಾರ ಅತ್ಯುತ್ತಮ ರೀತಿ ಅಭಿವೃದ್ಧಿ ನಡೆಸುತ್ತಿದೆ ಎಂದವರು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಕುಟುಂಬಶ್ರೀ ಜಿಲ್ಲಾ ಸಂಚಾಲಕ ಟಿ.ಟಿ. ಸುರೇಂದ್ರನ್, ಜಿಲ್ಲಾ ಸಮಾಜನೀತಿ ಪ್ರಭಾರ ಅಧಿಕಾರಿ ಪಿ.ಬಿಜು, ಜಿಲ್ಲಾ ಐ.ಸಿ.ಡಿ.ಎಸ್. ಕಾರ್ಯಕ್ರಮ ಅಧಿಕಾರಿ ಕವಿತಾರಾಣಿ ರಂಜಿತ್, ಜಿಲ್ಲಾ ಮಹಿಳಾ ಸಂರಕ್ಷಣೆ ಅಧಿಕಾರಿ ಎಂ.ವಿ.ಸುನಿತಾ, ಆರೋಗ್ಯ ಇಲಾಖೆ ಜಿಲ್ಲಾ ಮಾಸ್ ಮೀಡಿಯಾ ಅಧಿಕಾರಿ ಅಬ್ದುಲ್ ಲತೀಫ್ ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ. ಸ್ವಾಗತಿಸಿದರು. ಮಲೆಯಾಳಂ ವಿಭಾಗ ಸಹಾಯಕ ಮಾಹಿತಿ ಅಧಿಕಾರಿ ಕೆ.ಷಾನಿ ಕೆ.ನಾಯರ್ ವಂದಿಸಿದರು.
ಸ್ಥಳಿಯ ಅಭಿವೃದ್ಧಿಯ ಅನುಭವ ಸಾಕ್ಷಿ ನುಡಿಯುವ 10 ಕಿರುಚಿತ್ರಗಳು:
ಕಾಸರಗೋಡು ಜಿಲ್ಲೆಯ ವಿವಿಧ ವಲಯಗಳಲ್ಲಿ ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ರಾಜ್ಯ ಸರಕಾರ ಜಾರಿಗೊಳಿಸಿರುವ ವಿಶೇಷ ಕಾಳಜಿಯ ಅನುಭವ ಸಾಕ್ಷಿಯಾಗೊರುವ ಅಭಿವೃದ್ಧಿ ಚಟುವಟಿಕೆಗಳ 10 ಕಿರು ಚಿತ್ರಗಳನ್ನು ಕಾಸರಗೋಡು ಜಿಲ್ಲಾ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಿದ್ಧಪಡಿಸಿದೆ. ಒಂದುವರೆ ಮಿಮಿಷಗಳ ಅವಧಿಯ 3 ಕನ್ನಡ, 7 ಮಲೆಯಾಳಂ ಕಿರುಚಿತ್ರಗಳು ನಿರ್ಮಾಣಗೊಂಡಿವೆ. ಇಲಾಖೆಯ ಫೇಸ್ ಬುಕ್ ಪೇಜ್ ನಲ್ಲಿ ಈ ಚಿತ್ರಗಳು ಲಭ್ಯವಿವೆ.
ಚಿತ್ರಗಳ ಒಳನೋಟಗಳೇನು:
ಸತತ ವಿಷಮಳೆ ಸುರಿದ ಎಂಡೋಸಲ್ಫಾನ್ ದುರಂತ ನಾಡಿಗೆ ನೀಡಿದ ತಾಳಲಾರದ ಆಘಾತಕ್ಕೆ ರಾಜ್ಯ ಸರಕಾರದ ಸಾಂತ್ವನ ಸ್ಪರ್ಶ, ಕೋವಿಡ್ ಸೋಂಕಿನ ಅವಧಿಯಲ್ಲೂ ಹಾಸುಗೆ ಹಿಡಿದಿರುವ ರೋಗಿಗಳ ಮನೆಗಳಿಗೇ ಆಗಮಿಸಿ ಚಿಕಿತ್ಸೆ ಶುಶ್ರೂಷೆ ಒದಗಿಸುವ ಪಾಲಿಯೇಟಿವ್ ಕೇರ್ ಸೇವೆಗಳು, ಸ್ವಂತ ಮನೆಯ ಕನಸನ್ನು ಕಾಣುತ್ತಿರುವ ಬಡಜನತೆಗೆ ಸ್ವಂತ ಮನೆಯ ನನಸು ಒದಗಿಸಿದ ಲೈಫ್ ಯೋಜನೆಯ ಅನುಷ್ಠಾನ, ವೃದ್ಧಾಪ್ಯದ ಅವಧಿಯಲ್ಲಿ ಸಂತಸ ತಂದುಕೊಡುವ ಹಗಲುಮನೆ ಸಹಿತ ಯೋಜನೆಗಳು, ಮಹಿಳಾ ಪ್ರಬಲೀಕರಣಕ್ಕೆ ಕುಟುಂಬಶ್ರೀ ಮಿಷನ್ ಒದಗಿಸುವ ಸ್ವಾವಲಂಬನೆಯ ಮಾರ್ಗ, ಮಂಜೇಶ್ವರ ತಾಲೂಕಿನಲ್ಲಿ ಜಾರಿಗೊಳಿಸಲಾದ ಕೇರಳ ತುಳು ಅಕಾಡೆಮಿಯ ತುಳುಭವನ, ಮಂಜೇಶ್ವರ ಹಾರ್ಬರ್, ಬೇಳದ ಅತ್ಯದುನಿಕ ವಾಹನ ಚಾಲನೆ ತಪಾಸಣೆ ಕೇಂದ್ರ ಇತ್ಯಾದಿಗಳು ಕಿರುಚಿತ್ರಗಳ ವಿಷಯಗಳಾಗಿವೆ.