ಎಜಿಯನ್: ಸಮುದ್ರದಲ್ಲಿ ಸುನಾಮಿ ಎದ್ದ ಪರಿಣಾಮ ಗ್ರೀಸ್ ಮತ್ತು ಟರ್ಕಿ ರಾಷ್ಟ್ರಗಳಲ್ಲಿ ಶುಕ್ರವಾರ ಪ್ರಬಲ ಭೂಕಂಪನ ಸಂಭವಿಸಿದೆ. ಘಟನೆಯಲ್ಲಿ ಕಟ್ಟಡಗಳು ಕುಸಿದು ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದರು ಮತ್ತು ಅನೇಕರು ಅವಶೇಷಗಳಲ್ಲಿ ಸಿಲುಕಿದ್ದಾರೆ.
ರಿಕ್ಟರ್ ಮಾಪಕದಲ್ಲಿ 7 ರ ತೀವ್ರತೆ ದಾಖಲಾಗಿದೆ. ಟರ್ಕಿಯ ಕರಾವಳಿ ಪ್ರಾಂತ್ಯದ ಇಜ್ಮೀರ್ ನಲ್ಲಿ ಕನಿಷ್ಠ 120 ಜನರು ಗಾಯಗೊಂಡಿದ್ದಾರೆ ಎಂದು ಟರ್ಕಿಯ ಆರೋಗ್ಯ ಸಚಿವ ಫಹ್ರೆತಿನ್ ಕೋಕಾ ಹೇಳಿದ್ದಾರೆ.
20 ಕಟ್ಟಡಗಳು ಕುಸಿದಿರುವ ಬಗ್ಗೆ ಇಜ್ಮಿರ್ ಮೇಯರ್ ಟಂಕ್ ಸೋಯರ್ ಸಿಎ???ನ್ ಟರ್ಕಿಗೆ ತಿಳಿಸಿದ್ದು ಸುಮಾರು 4,5 ಮಿಲಿಯನ್ ನಿವಾಸಿಗಳಿರುವ ಟರ್ಕಿಯಲ್ಲಿ ಈ ನಗರವು ಮೂರನೇ ದೊಡ್ಡ ನಗರವಾಗಿದೆ.ಟರ್ಕಿಯ ಆಂತರಿಕ ಸಚಿವರು ಇಜ್ಮೀರ್‍ನಲ್ಲಿ ಆರು ಕಟ್ಟಡಗಳು ನಾಶವಾಗಿವೆ ಎಂದು ಟ್ವೀಟ್ ಮಾಡಿದ್ದಾರೆ.