ಮಂಜೇಶ್ವರ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ ಶಿಲಾನ್ಯಾಸದ ಸಂದರ್ಭದಲ್ಲಿ ಮತ್ತು ಆ ಬಳಿಕ ಭಾರತದ ವಿವಿಧ ಪುಣ್ಯಕ್ಷೇತ್ರದ ಪ್ರಸಾದ ಮೃತ್ತಿಕೆ ಮತ್ತು ಪುಣ್ಯಕ್ಷೇತ್ರಗಳ ನದಿಗಳ ತೀರ್ಥವನ್ನು ಸಮರ್ಪಿಸುವ ಚಟುವಟಿಕೆ ನಡೆಯುತ್ತಿದ್ದು ಕಾಸರಗೋಡು ಜಿಲ್ಲೆಯ ಮಧೂರು ಸಿದ್ಧಿವಿನಾಯಕ ಕ್ಷೇತ್ರದ ಪ್ರಸಾದ ಮತ್ತು ಮೃತ್ತಿಕೆ ಹಾಗೂ ಪವಿತ್ರ ಮಧುವಾಹಿನಿ ನದಿಯ ತೀರ್ಥವನ್ನು ಕಣ್ವತೀರ್ಥ ಕ್ಷೇತ್ರದ ಪ್ರಸಾದ ಮತ್ತು ಮೃತ್ತಿಕೆ ಹಾಗೂ ತೀರ್ಥವನ್ನು ವಿಶ್ವ ಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಘಟಕದಿಂದ ಸಂಗ್ರಹಿಸಿಡಲಾಗಿತ್ತು.
ಉಡುಪಿ ಶ್ರೀಕೃಷ್ಣ ಕ್ಷೇತ್ರದ ಪೇಜಾವರಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ಅಯೋಧ್ಯೆಗೆ ಭೇಟಿ ನೀಡಲು ನಿನ್ನೆ(ಭಾನುವಾರ) ಹೊರಡುವ ಸಂದರ್ಭದಲ್ಲಿ ಅವರಿಗೆ ಕಾಸರಗೋಡಿನಿಂದ ಸಂಗ್ರಹಿಸಿದ ಪವಿತ್ರ ವಸ್ತುಗಳನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಕಾಸರಗೋಡು ಜಿಲ್ಲೆಯ ಕಾರ್ಯಾಧ್ಯಕ್ಷ ಗೋಪಾಲಶೆಟ್ಟಿ ಅರಿಬೈಲು, ಕಾರ್ಯದರ್ಶಿ ಉಳುವಾನ ಶಂಕರ ಭಟ್, ಸಹಕಾರ್ಯದರ್ಶಿಗಳಾದ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ಕಾಸರಗೋಡು ಪ್ರಖಂಡ ಕಾರ್ಯದರ್ಶಿ ರವಿಚಂದ್ರ ಎಡನೀರು, ಮಧೂರು ಖಂಡ ಸಮಿತಿ ಅಧ್ಯಕ್ಷ ಉದಯಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸ್ವಾಮೀಜಿಗಳನ್ನು ಬೀಳ್ಕೊಡಲಾಯಿತು.