HEALTH TIPS

ಬದಲಾಗುತ್ತಿರುವ ಉದ್ಯೋಗ ಸ್ವರೂಪಗಳಿಗೆ ಹೊಂದಿಕೊಳ್ಳಿ; ಯುವಜನತೆಗೆ ಪ್ರಧಾನಿ ಮೋದಿ ಕರೆ

         ನವದೆಹಲಿ: ಮೈಸೂರು ವಿಶ್ವವಿದ್ಯಾಲಯದ 100ನೇ ಘಟಿಕೋತ್ಸವದಲ್ಲಿ ನಿನ್ನೆ ವರ್ಚುವಲ್ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಯುವ ಜನರಿಗೆ ಉದ್ಯೋಗ ಸ್ವರೂಪ ಬದಲಾವಣೆಗೆ ಹೊಂದಿಕೊಳ್ಳುವಂತೆ ಕರೆ ನೀಡಿದ್ದಾರೆ. ಯುವ ಜನತೆ ಬದಲಾಗುತ್ತಿರುವ ಸ್ವರೂಪಕ್ಕೆ ಹೊಂದಿಕೊಳ್ಳುವಂತಹ ಉದ್ಯೋಗಗಳತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು. ಇಂದಿನ ಜಗತ್ತಿನಲ್ಲಿ ಉದ್ಯೋಗದ ಕೌಶಲ್ಯ, ಮರು ಕೌಶಲ್ಯ, ಕೌಶಲ್ಯವೃದ್ಧಿಗೆಗೆ ಮಹತ್ವ ನೀಡಲಾಗಿದೆ, ಇದನ್ನೇ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ(ಎನ್?ಇಪಿ) ಕೂಡ ತಿಳಿಸಿದೆ. ಎನ್?ಇಪಿ ಶಿಕ್ಷಣದ ಆಯಾಮವನ್ನು ಖಾತ್ರಿಗೊಳಿಸುವುದರ ಜೊತೆಗೆ ಮೂಲಭೂತ ಬದಲಾವಣೆ ತರುತ್ತದೆ. ಇದು ಯುವಜನತೆಯನ್ನು ಇನ್ನಷ್ಟು ಸ್ಪರ್ಧಾತ್ಮಕರನ್ನಾಗಿ ಮಾಡುತ್ತದೆ ಎಂದರು.

       ಇದೇ ವೇಳೆ ಮೈಸೂರು ವಿಶ್ವವಿದ್ಯಾಲಯ ಎನ್ ಇಪಿ ಅಡಿ ಬಹು ಸ್ತರದ ಕಾರ್ಯಕ್ರಮಗಳನ್ನು ಪ್ರಾರಂಭಿಸುವ ಯೋಜನೆಗೆ ಹರ್ಷ ವ್ಯಕ್ತಪಡಿಸಿದರು. ಈ ಯೋಜನೆ ಅಡಿ ವಿದ್ಯಾರ್ಥಿಗಳು ಏಕಕಾಲದಲ್ಲಿ ಜಾಗತಿಕ ತಂತ್ರಜ್ಞಾಮ ಮತ್ತು ಸ್ಥಳೀಯ ಸಂಸ್ಕøತಿಗಳ ಅಧ್ಯಯನ ಮಾಡಬಹುದು ಎಂದು ತಿಳಿಸಿದರು. ಈ ಜಾಗತಿಕ ತಂತ್ರಜ್ಞಾನದಿಂದಾಗಿ ಸ್ಥಳೀಯ ವ್ಯವಹಾರವನ್ನು ಉತ್ತೇಜಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

         ಭಾರತದ ನವೀನತೆ ಕಲ್ಪಿಸುವ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಮೈಸೂರು ವಿಶ್ವವಿದ್ಯಾಲಯ ಕೂಡ ಒಂದಾಗಿದೆ, ಈ ಕಾರಣದಿಂದ ಈ ವಿಶ್ವವಿದ್ಯಾಲಯ ತಂತ್ರಜ್ಞಾಮ ಅಭಿವೃದ್ಧಿ ಕೇಂದ್ರಗಳನ್ನು ಪ್ರಾರಂಭಿಸಬೇಕು. ಇದರ ಜೊತೆಗೆ ಕೈಗಾರಿಕಾ ಅಕಾಡೆಮಿಯಂತಹ ಕ್ಷೇತ್ರಗಳಂತಹ ಅಂತರ ಸ್ತರದ ಸಂಶೋಧನೆಗೂ ಆದ್ಯತೆ ನೀಡಬೇಕು ಎಂದರು.ಮೈಸೂರು ವಿಶ್ವವಿದ್ಯಾಲಯ ಸಮಕಾಲೀನ ಜಾಗತಿಕ ವಿಷಯಗಳ ಜೊತೆಗೆ ಸ್ಥಳೀಯ ಸಂಸ್ಕೃತಿ, ಕಲೆಗಳನ್ನು ಪೆÇ್ರೀತ್ಸಾಹಿಸಬೇಕು ಎಂದರು.

       ಯುವ ಜನತೆ ವೈಯಕ್ತಿಕ ಸಾಮಥ್ರ್ಯ ಮತ್ತು ಶಕ್ತಿ ಆಧಾರದ ಮೇಲೆ ಶ್ರಮಿಸಬೇಕು. ಒಂದು ಕ್ಷೇತ್ರಕ್ಕೆ ಸೀಮಿತವಾಗಬಾರು. ನೀವು ಆಯ್ಕೆ ಮಾಡಿಕೊಂಡ ಕ್ಷೇತ್ರಕ್ಕೆ ನೀವು ಸರಿಹೊಂದದೆ ಇರಬಹುದು. ಆ ಕಾರಣ ಎಲ್ಲಾ ಕ್ಷೇತ್ರಗಳಲ್ಲಿಯೂ ಆಸಕ್ತಿ ಹೊಂದುವುದು ಅನಿವಾರ್ಯ. ಇದಕ್ಕಾಗಿ ಸಮಯ ತೆಗೆದುಕೊಳ್ಳಿ. ಈ ಮೂಲಕ ನಿಮ್ಮ ಶಕ್ತಿಯನ್ನು ಅರ್ಥ ಮಾಡಿಕೊಳ್ಳಿ. ಇದು ನಿಮಗೆ ಭವಿಷ್ಯದ ದಾರಿ ರೂಪಿಸುತ್ತದೆ. ಈ ರೀತಿಯ ವಿಪುಲ ಅವಕಾಶಗಳು ಭಾರತದಲ್ಲಿದೆ ಎಂದರು.

    ಕೊರೋನಾ ಸೋಂಕಿನ ಸಂದರ್ಭದಲ್ಲಿ ದೇಶದಲ್ಲಿ ಅನೇಕ ಯುವಕರು ಸ್ಟಾರ್ಟ್ ಅಪ್ ಪ್ರಾರಂಭಿಸುವತ್ತ ಹೊಸ ಹೆಜ್ಜೆ ಇಟ್ಟಿದ್ದಾರೆ. ಇದರಿಂದಾಗಿ ದೇಶವನ್ನು ಬಲಗೊಳಿಸಲು ಸಹಾಯಕವಾಗುತ್ತದೆ. ನಿಮ್ಮ ಅಭ್ಯುದ್ಯಯ ದೇಶದ ಅಭ್ಯುದ್ಯಯ ಕೂಡ ಆಗಿದೆ, ನೀವು ಆತ್ಮ ನಿರ್ಭರವಾದಲ್ಲಿ ಮಾತ್ರ ದೇಶ ಆತ್ಮನಿರ್ಭರವಾಗಲು ಸಾಧ್ಯ ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries