ಕಾಸರಗೋಡು: ಜಿಲ್ಲೆಯಲ್ಲಿ ಕೋವಿಡ್ ತಪಾಸಣೆ ಹೆಚ್ಚಳಗೊಳಿಸಲಾಗುವುದು. ಈಗ ಜಿಲ್ಲೆಯಲ್ಲಿ ಕೋವಿಡ್ ರೋಗಲಕ್ಷಣ ವಿರುವ ಎಲ್ಲಾ ಮಂದಿಯನ್ನೂ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಪ್ರತಿದಿನ 1700 ರಿಂದ 2 ಸಾವಿರ ಮಂದಿಯ ತಪಾಸಣೆ ನಡೆಸಲಾಗುತ್ತಿದೆ. ಮುಂದೆ 3 ಸಾವಿರ ಮಂದಿಯನ್ನು ತಪಾಸಣೆಗೊಳಪಡಿಸಲು ರಾಜ್ಯ ಸರ್ಕಾರ ಆದೇಶ ನೀಡಿದೆ. ಈ ನಿಟ್ಟಿನಲ್ಲಿ ದಂತವೈದ್ಯರನ್ನು, ದಾದಿಯರನ್ನು ಗಡಿ ಚೆಕ್ ಪೆÇೀಸ್ಟ್ ಗಳಲ್ಲಿ ಕರ್ತವ್ಯದಲ್ಲಿ ನೇಮಿಸಿ ತಪಾಸಣೆ ನಡೆಸಲು ಕೊರೋನಾ ಕೋರ್ ಸಮಿತಿ ಸಭೆ ತೀರ್ಮಾನಿಸಿದೆ.
ತರಬೇತಿ ಕೇಂದ್ರಗಳಿಗೆ ಅನುಮತಿ:
ಕುಟುಂಬಶ್ರೀ ನೌಕರಿ ತರಬೇತಿಯ ಒಂದು ಘಟಕದಲ್ಲಿ ಗರಿಷ್ಠ 20 ಮಂದಿಯನ್ನು ಒಳಗೊಂಡು , ಕೋವಿಡ್ ಕಟ್ಟುನಿಟ್ಟುಗಳನ್ನು ಪಾಲಿಸಿ, ಚಟುವಟಿಕೆ ನಡೆಸಲು ಅನುಮತಿಯಿದೆ ಎಂದು ಜಿಲ್ಲಾಧಿಕಾರಿ ತಿಳಿಸಿರುವರು.
ಆರ್ಟ್ ಗ್ಯಾಲರಿ ತೆರೆಯಬಹುದು:
ಕಾಞಂಗಾಡಿನ ಆರ್ಟ್ ಗ್ಯಾಲರಿ ತೆರೆದು ಕಾರ್ಯಾಚರಿಸಲು ಸರ್ಕಾರಿ ಕಚೇರಿಗಳು ತೆರೆಯಲು ಅನುಮತಿ ನೀಡಿದ ವೇಳೆಯಲ್ಲೇ ಅನುಮತಿ ನೀಡಲಾಗಿದೆ. ಕೋವಿಡ್ ಕಟ್ಟುನಿಟ್ಟುಗಳನ್ನು ಪಾಲಿಸಿ ಆರ್ಟ್ ಗ್ಯಾಲರಿ ಕಾರ್ಯಾಚರಿಸಬಹುದು ಎಂದು ಜಿಲ್ಲಾಧಿಕಾರಿ ನುಡಿದರು.
ಹೌಸ್ ಬೋಟ್ ಗಳಲ್ಲಿ ಗರಿಷ್ಠ 20 ಮಂದಿ:
ಒಟ್ಟು ಸೀಟುಗಳಲ್ಲಿ ಶೇ 50 ಸೀಟುಗಳನ್ನು ಬಳಸಿ, ಕೋವಿಡ್ ಕಟ್ಟುನಿಟ್ಟುಗಳನ್ನು ಪಾಲಿಸಿ ಹೌಸ್ ಬೋಟುಗಳ ಸಂಚಾರ ಆರಂಭಿಸಲು ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಆದರೆ 20 ಮಂದಿಗಿಂತ ಅಧಿಕ ಜನ ಸೇರಕೂಡದು ಎಂದು ತಿಳಿಸಲಾಗಿದೆ.
ಕಾಸರಗೋಡು ನಗರಸಭೆ ಮೈದಾನವನ್ನು ವ್ಯಾಯಾಮಕ್ಕಾಗಿ ಬಳಸಬಹುದು. ಏಕಕಾಲಕ್ಕೆ 20 ಮಮದಿಗೆ ಮಾತ್ರ ಪ್ರವೇಶಾತಿ ಇರುವುದು. ಕೋವಿಡ್ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ನಿಷೇಧಾಜ್ಞೆ ಜಾರಿಯಲ್ಲಿರುವ ಪ್ರದೇಶಗಳಲ್ಲಿ ಹಿನ್ನೆಲೆಯಲ್ಲಿ ಫುಟ್ ಬಾಲ್ ಪಂದ್ಯಕ್ಕೆ ಅನುಮತಿ ಇರುವುದಿಲ್ಲ. ಇತರ ಕಡೆಗಳಲ್ಲಿ ಗರಿಷ್ಠ 20 ಮಂದಿ ಭಾಗವಹಿಸಲು ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಟಾಟಾ ಆಸ್ಪತ್ರೆ ಚಟುವಟಿಕೆ ಕ್ರಮ ಚುರುಕು:
ತೀವ್ರ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಚಿಕಿತ್ಸೆಗೆ ಅಗತ್ಯದ ಮೂಲಭೂತ ಸೌಲಭ್ಯಗಳನ್ನು ಏರ್ಪಡಿಸಿ ಟಾಟಾ ಕೋವಿಡ್ ಆಸ್ಪತ್ರೆಯನ್ನು ತೆರೆದು ಕಾರ್ಯಾಚರಿಸಲು ಬೇಕಾದ ಕ್ರಮಗಳನ್ನು ಚುರುಕುಗೊಳಿಸಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದರು. ಈಗ ಜಿಲ್ಲಾ ಆಸ್ಪತ್ರೆಯಲ್ಲಿ ಗಮಭೀರ ಸ್ಥಿತಿಯ ರೋಗಿಗಳಿಗೆ ವೆಂಟಿಲೇಟರ್ ಸೌಲಭ್ಯ ಒದಗಿಸಲಾಗುತ್ತದೆ. ಕೋವಿಡ್ ರೋಗಿಗಳಿಗೆ ಡಯಾಲಿಸಿಸ್ ಸೌಲಭ್ಯ ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಅವರು ನುಡಿದರು.
ಸೆಕ್ಟರ್ ಮೆಜಿಸ್ಟ್ರೇಟ್ ಗಳಿಗೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಶೀಘ್ರದಲ್ಲೇ ಆನ್ ಲೈನ್ ಮೂಲಕ ತರಬೇತಿ ಒದಗಿಸಲು ಸಭೆ ನಿರ್ಧರಿಸಿದೆ.