ಕಾಸರಗೋಡು: ಗಾಂಧಿ ಜಯಂತಿ ಅಂಗವಾಗಿ ನಿನ್ನೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಗಾಂಧಿ ಪ್ರತಿಮೆಗೆ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಪುಷ್ಪಾರ್ಚನೆ ನಡೆಸಿದರು.
ಪ್ರತಿಮೆ ನಿರ್ಮಾಣ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ಕೆ.ಪಿ.ಕುಂಞÂ್ಞ ಕಣ್ಣನ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಹುಜೂರು ಶಿರಸ್ತೇದಾರ್ ಇನ್‍ಚಾರ್ಜ್ ಅನ್ಸಾರ್ ಎಂ, ಜಿಲ್ಲಾಧಿಕಾರಿ ಕಚೇರಿಯ ಸ್ಟಾಫ್ ಕೌನ್ಸಿಲ್ ಪ್ರತಿನಿಧಿಗಳು ಮೊದಲಾದವರು ಪುಷ್ಪಾರ್ಚನೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.