ಕಾಸರಗೋಡು: ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಕಾಸರಗೋಡು ಇದರ ವತಿಯಿಂದ ಸಮಾಜದ ವಿದ್ಯಾರ್ಥಿಗಳಿಗೆ ವರ್ಷಂಪ್ರತಿಯಂತೆ ಪ್ರತಿಭಾ ಪುರಸ್ಕಾರ, ಆರ್ಥಿಕ ಸಹಾಯ ಮತ್ತು ಅಭಿನಂದನಾ ಕಾರ್ಯಕ್ರಮ ಜರಗಲಿದೆ.
ಆಸಕ್ತರು ಅರ್ಜಿಗಳನ್ನು ಆಯಾ ಉಪಸಂಘ, ಜಿಲ್ಲಾ ಸಂಘದಿಂದ ಪಡೆದು ಪೂರ್ತಿಗೊಳಿಸಿ ಅ.31 ರ ಮುಂಚಿತವಾಗಿ ಉಪಸಂಘ, ಜಿಲ್ಲಾಸಂಘದ ಕಾರ್ಯದರ್ಶಿಯವರಿಗೆ ತಲುಪಿಸತಕ್ಕದ್ದು. 2019-20 ರ ಸಾಲಿನ ಕೇರಳ ಎಸ್‍ಎಸ್‍ಎಲ್‍ಸಿಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಪಡೆದವರು, ಉಪಸಂಘದ ವ್ಯಾಪ್ತಿಯಲ್ಲಿ ಅತ್ಯ„ಕ ಅಂಕ ಪಡೆದವರಿಗೆ, ಕರ್ನಾಟಕ ಎಸ್‍ಎಸ್‍ಎಲ್‍ಸಿಯಲ್ಲಿ ಶೇ.90 ಕ್ಕಿಂತ ಅ„ಕ ಪಡೆದವರಿಗೆ, ಕೇರಳ, ಕರ್ನಾಟಕ ಪಿಯುಸಿಯಲ್ಲಿ ಅತ್ಯ„ಕ ಅಂಕ ಪಡೆದವರಿಗೆ, ಪಾಲಿಟೆಕ್ನಿಕ್, ಎಂಜಿನಿಯರಿಂಗ್, ಮೆಡಿಕಲ್, ಟಿಟಿಸಿ/ಬಿಎಡ್ ತರಗತಿಗಳಲ್ಲಿ ಕಲಿಯುತ್ತಿರುವ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ(ಓರ್ವ ವಿದ್ಯಾರ್ಥಿಯಂತೆ) ಆರ್ಥಿಕ ಸಹಾಯ ನೀಡಲಾಗುವುದು. ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಗಳಿಸಿದರವನ್ನೂ, ವಿದ್ಯಾಭ್ಯಾಸದಲ್ಲಿ ರ್ಯಾಂಕ್ ಗಳಿಸಿದವರನ್ನೂ ಅಭಿನಂದಿಸಲಾಗುವುದು. ಹೆಚ್ಚಿನ ವಿವರಗಳಿಗಾಗಿ ಜಿಲ್ಲಾ ಸಂಘದ ಅಧ್ಯಕ್ಷರನ್ನು (ಮೊ:9446524452) ಸಂಪರ್ಕಿಸಬಹುದು.