ಮಂಜೇಶ್ವರ: ಕಲ್ಲಚ್ಚು ಪ್ರಕಾಶನ ಮಂಗಳೂರು ಇವರ ವಿಂಶತಿ ವರುಷ 2020 ಇದರ ಆಚರಣೆಯ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗೌರವಿಸಲು ತೀರ್ಮಾನಿಸಲಾಗಿದ್ದು, ಗಡಿನಾಡಿನ ಖ್ಯಾತ ಹನಿಗವಿ ಹಸು.ಒಡ್ಡಂಬೆಟ್ಟು ಅವರನ್ನೂ ಆಯ್ಕೆ ಮಾಡಲಾಗಿದೆ. ಅಕ್ಟೋಬರ್ 17 ರಂದು ಸಂಜೆ 4ಕ್ಕೆ ಮಂಗಳೂರಿನ ಹೋಟೆಲ್ ಉಡ್ಲೇಂಡ್ಸ್ ಸಭಾಂಗಣದಲ್ಲಿ ನಡೆಯುವ ಕಲ್ಲಚ್ಚು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಡೆಯಲಿರುವುದೆಂದು ಸಂಚಾಲಕ ಸಾಹಿತ ಮಹೇಶ್ ಆರ್ ನಾಯಕ್ ತಿಳಿಸಿದ್ದಾರೆ.