ಕೊಚ್ಚಿ: ಚಿನ್ನ ಕಳ್ಳಸಾಗಣೆ ಪ್ರಕರಣ ಸಂಬಂಧ ಆರೋಪಿ ಸ್ವಪ್ನಾ ಸುರೇಶ್‍ಗೆ ಎರ್ನಾಕುಳಂ ಪ್ರಧಾನ ಸೆಷನ್ಸ್ ನ್ಯಾಯಾಲಯ ಮಂಗಳವಾರ ಜಾಮೀನು ನೀಡಿದೆ. ಜಾರಿ ನಿರ್ದೇಶನಾಲಯ ನೋಂದಾಯಿಸಿದ ಪ್ರಕರಣದಲ್ಲಿ ಸ್ವಪ್ನಾ ಅವರಿಗೆ ಜಾಮೀನು ನೀಡಲಾಗಿದೆ. ಕಸ್ಟಮ್ಸ್ ಪ್ರಕರಣದಲ್ಲಿ ಸ್ವಪ್ನಾ ಅವರಿಗೆ ಈ ಹಿಂದೆ ಜಾಮೀನು ನೀಡಲಾಗಿತ್ತು. ಆದರೆ, ಎನ್‍ಐಎ ಪ್ರಕರಣದಲ್ಲಿ ಅವರಿಗೆ ಜಾಮೀನು ನೀಡದ ಕಾರಣ ಅವರು ರಿಮಾಂಡ್‍ನಲ್ಲಿ ಮುಂದುವರಿಯುವರು.
ಜೊತೆಗೆ ಕಸ್ಟಮ್ಸ್ ಸ್ವಪ್ನಾ ವಿರುದ್ಧ ಕೋಫೆಪೆÇಸಾ ಕಾಯ್ದೆಯಡಿ ಒಂದು ವರ್ಷದ ರಿಮಾಂಡ್ ಅನ್ನು ಪಡೆದುಕೊಂಡಿದೆ. ಆದ್ದರಿಂದ, ಎನ್.ಐ.ಎ ಪ್ರಕರಣದಲ್ಲಿ ಜಾಮೀನು ನೀಡಿದರೂ ಸ್ವಪ್ನಾ ರಿಮಾಂಡ್ ನಿಂದ ತಪ್ಪಿಸುವಂತಿಲ್ಲ. ಸ್ವಪ್ನಾ ಅವರಲ್ಲದೆ, ಸಂದೀಪ್ ನಾಯರ್ ಅವರ ಪ್ರಕರಣವನ್ನೂ ನ್ಯಾಯಾಲಯ ಇಂದು ಪರಿಗಣಿಸುತ್ತಿದೆ.
ಕಸ್ಟಮ್ಸ್ ಚಿನ್ನ ಕಳ್ಳಸಾಗಣೆ ಪ್ರಕರಣವನ್ನು ನೋಂದಾಯಿಸಿದ ಬೆನ್ನಲ್ಲೇ ಇಡಿ ಸ್ವಪ್ನಾ ಮತ್ತು ತಂಡದ ವಿರುದ್ಧ ಹಣ ವರ್ಗಾವಣೆಗಾಗಿ ಎಫ್.ಐ.ಆರ್ ದಾಖಲಿಸಲಾಗಿದೆ. ಪ್ರಕರಣದಲ್ಲಿ 60 ದಿನಗಳ ಬಳಿಕ ಅವರು ಚಾರ್ಜ್‍ಶೀಟ್ ಸಲ್ಲಿಸಲಿಲ್ಲ. ಜಾಮೀನುಗಾಗಿ ಸ್ವಪ್ನ ಕೋರ್ಟ್ ಮೆಟ್ಟಲೇರಿದ್ದರು.