ನವದೆಹಲಿ: ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಪರ ಒಲವು ತೋರುವ ಕಾರಣಕ್ಕೆ ದೇಶದ ಕಂಪನೀಸ್ ಕಂಟೆಂಟ್ ಮಾಡರೇಶನ್ ನೀತಿಯಲ್ಲಿ ಹಸ್ತಕ್ಷೇಪ ಮಾಡಿದ ಆರೋಪದ ಹಿನ್ನೆಲೆ ಫೇಸ್ ಬುಕ್‍ನ ಭಾರತದ ಸಾರ್ವಜನಿಕ ನೀತಿಯ ಮುಖ್ಯಸ್ಥೆ ಅಂಖಿ ದಾಸ್ ರಾಜೀನಾಮೆ ಸಲ್ಲಿಸಿದ್ದಾರೆ.
ಫೇಸ್‍ಬುಕ್ ಇಂಡಿಯಾ, ದಕ್ಷಿಣ ಮತ್ತು ಮಧ್ಯ ಏಷ್ಯಾದ ಸಾರ್ವಜನಿಕ ನೀತಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ದಾಸ್ ಸಾರ್ವಜನಿಕ ಸೇವೆಯಲ್ಲಿ ತನ್ನ ಕಾಳಜಿಯನ್ನು ಮುಂದುವರಿಸಲು ಕಂಪನಿಯನ್ನು ತೊರೆಯುತ್ತಿದ್ದೇನೆ ಎಂದು ಹೇಳಿದರು.
ತನ್ನ ಸಹೋದ್ಯೋಗಿಗಳಿಗೆ ನೀಡಿದ ಸಂದೇಶದಲ್ಲಿ, ದಾಸ್ " 2011 ರಲ್ಲಿ ಕಂಪನಿಗೆ ಸೇರಿದ ಸಮಯದಲ್ಲಿ ದೇಶದಲ್ಲಿದ್ದ ಫೇಸ್‍ಬುಕ್ ಮತ್ತು ಇಂಟರ್ನೆಟ್ ಪರಿಸರ ವ್ಯವಸ್ಥೆಯನ್ನು ವಿವರಿಸಿದರು. ನಾವು ಒಂದು ಸಣ್ಣ ಅನ್ ಲಿಸ್ಟೆಡ್ ಸ್ಟಾರ್ಟಪ್ ಆಗಿದ್ದೆವು,, ಆಗ ನಮ್ಮ ಮಿಷನ್ ಮತ್ತು ಭಾರತದಲ್ಲಿ ಜನರನ್ನು ಸಂಪರ್ಕಿಸುವ ಉದ್ದೇಶವನ್ನಷ್ಟೇ ಹೊಂದಿತ್ತು. . ಒಂಬತ್ತು ದೀರ್ಘ ವರ್ಷಗಳ ನಂತರ, ಮಿಷನ್ ದೊಡ್ಡ ಮಟ್ತದಲ್ಲಿ ಗುರಿ ಹೊಂದಿದೆ. ಕಂಪನಿಯ ನಂಬಲಾಗದಷ್ಟು ಸ್ಮಾರ್ಟ್ ಮತ್ತು ಪ್ರತಿಭಾವಂತ ಜನರಿಂದ, ವಿಶೇಷವಾಗಿಪಾಲಿಸಿ ಟೀಂ ಜನರಿಂದ ನಾನು ಕಲಿತದ್ದು ಅಗಾಧ. ಇದು ವಿಶೇಷ ಕಂಪನಿ ಮತ್ತು ವಿಶೇಷ ಜನರ ಗುಂಪು. ನಾನು ನಿಮಗೆ ಮತ್ತು ಕಂಪನಿಗೆ ಉತ್ತಮ ಸೇವೆ ಸಲ್ಲಿಸಿದ್ದೇನೆ, ನಾನು ಫೇಸ್‍ಬುಕ್‍ನಲ್ಲಿ ಸಂಪರ್ಕದಲ್ಲಿರುತ್ತೇವೆ ಎಂದು ನನಗೆ ಗೊತ್ತಿದೆ:" ಎಂದಿದ್ದಾರೆ.
ಒಂದು ಹೇಳಿಕೆಯಲ್ಲಿ, ಫೇಸ್‍ಬುಕ್ ಇಂಡಿಯಾದ ಮುಖ್ಯಸ್ಥ ಅಜಿತ್ ಮೋಹನ್, "ಅಂಖಿ ತಮ್ಮ ಭಾರತದ ಆರಂಭಿಕ ಉದ್ಯೋಗಿಗಳಲ್ಲಿ ಒಬ್ಬರಾಗಿದ್ದರು ಮತ್ತು ಕಳೆದ 9 ವರ್ಷಗಳಲ್ಲಿ ಕಂಪನಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಕಳೆದ 2 ವರ್ಷಗಳಿಂದ ನನ್ನ ನಾಯಕತ್ವದ ತಂಡದ ಭಾಗವಾಗಿದ್ದಾರೆ, ಇದರಲ್ಲಿ ಅವರು ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಅವರ ಸೇವೆಗಾಗಿ ನಾವು ಕೃತಜ್ಞರಾಗಿರುತ್ತೇವೆ ಮತ್ತು ಅವರ ಉತ್ತಮ ಭವಿಷ್ಯಕ್ಕಾ ಶುಭ ಹಾರೈಸುತ್ತೇವೆ " ಎಂದರು.