HEALTH TIPS

ಉನ್ನತಿಗೇರಲು ಕಾರಣ ಶ್ರೀಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳವರ ಹಾಗೂ ಭಗನಾನ್ ಸತ್ಯಸಾಯಿಬಾಬಾ ಅವರ ಆಶೀರ್ವಾದ: ಕೆ.ಯನ್ ಕೃಷ್ಣ ಭಟ್

   

                ಬದಿಯಡ್ಕ: ಕುಲಗುರುಗಳಾದ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಆಶೀರ್ವಾದ ಹಾಗೂ ಭಗವಾನ್ ಸತ್ಯಸಾಯಿಬಾಬಾರ ಅನುಗ್ರಹವು ನನ್ನನ್ನು ಇಂದು ಸಮಾಜವು ಗುರುತಿಸುವ ಹಂತಕ್ಕೆ ಕರೆದೊಯ್ಯಿತು ಎಂದು ಮುಳ್ಳೇರಿಯಾ ಹವ್ಯಕ ಮಂಡಲದ ವತಿಯಿಂದ ಜರಗಿದ ಗೌರವಾರ್ಪಣೆಯನ್ನು ಸ್ವೀಕರಿಸಿ ಮಾತನಾಡುತ್ತಾ ಪ್ರಸಿದ್ದ ಕಿಳಿಂಗಾರು ವೈದಿಕ ಮನೆತನದ ಕೊಡುಗೈ ದಾನಿ ಸಾಯಿರಾಂ ಗೋಪಾಲಕೃಷ್ಣ ಭಟ್ ಅವರ ಪುತ್ರ ಕೆ.ಯನ್ ಕೃಷ್ಣ ಭಟ್ ಅವರು ತಿಳಿಸಿದರು.   

           ಮಾಜ ಬಾಂಧವರ ಉತ್ತಮ ಸಹಕಾರವನ್ನು ನಾನೆಂದೂ ಮರೆಯಲಾರೆ. ಎಲ್ಲರಿಗೂ ಇನ್ನು ಮುಂದೆಯೂ ಸರ್ವರೀತಿಯ ಸಹಕಾರವನ್ನು ನೀಡುತ್ತೇನೆ ಹಾಗೂ ಎಲ್ಲ ಸಜ್ಜನಬಂಧುಗಳ ಸರ್ವ ವಿಧದ ಸಹಕಾರವನ್ನೂ ಮುಂದೆಯೂ ಅಪೇಕ್ಷಿಸುತ್ತೇನೆ. ಹವ್ಯಕ ಸಮಾಜಕ್ಕೆ ಚಿರಋಣಿ.  ಹಲವು ವರ್ಷಗಳಿಂದ ಪಂಚಾಯತ್ ಸದಸ್ಯರಾಗಿದ್ದು ಕಳೆದ 5 ವರ್ಷಗಳ ಕಾಲ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವರು, ಎಲ್ಲರನ್ನೂ ಸಮಾನ ಭಾವದಿಂದ ಕಾಣುವ ಹವ್ಯಕ ಸಮಾಜದ ಮುಂಚೂಣಿ ನಾಯಕರೆಂದು ತಿಳಿಸಿದ  ಮುಳ್ಳೇರಿಯಾ ಹವ್ಯಕ ಮಂಡಲದ ಉಪಾಧ್ಯಕ್ಷರಾದ ಬೇ.ಸೀ ಗೋಪಾಲಕೃಷ್ಣ ಭಟ್ಟರು ಕೆ.ಯನ್. ಕೃಷ್ಣ ಭಟ್ಟರನ್ನು ಗೌರವಿಸಿದರು.

     ಕೋವಿಡ್ ಮಾನದಂಡಗಳನ್ನನುಸರಿಸಿ ಕಾರ್ಯಕ್ರಮವನ್ನು ನಡೆಯಿತು. ಮುಳ್ಳೇರಿಯಾ ಮಂಡಲದ ಪೆರಡಾಲ ವಲಯದ ಅಧ್ಯಕ್ಷ ಪದ್ಮರಾಜ ಪಟ್ಟಾಜೆ ಸ್ವಾಗತಿಸಿ, ನೀರ್ಚಾಲು ವಲಯ ಉಪಾಧ್ಯಕ್ಷ ಶಂಕರನಾರಾಯಣ ಶರ್ಮ ನಿಡುಗಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರೋಹಿತ ಮನೆಗಳಲ್ಲೊಂದಾದ ಕಿಳಿಂಗಾರು ಮನೆತನದಲ್ಲಿ ಜನಿಸಿದ ಕೃಷ್ಣ ಭಟ್ಟರು ಪುರಕ್ಕೆ ಹಿತವನ್ನೇ ಬಯಸುತ್ತಿರುವ ಧೀಮಂತ ವ್ಯಕ್ತಿಯೆಂದು ನುಡಿದರು.

       ನೀರ್ಚಾಲು ವಲಯಾಧ್ಯಕ್ಷ ಜಯದೇವ ಖಂಡಿಗೆ, ಪಳ್ಳತ್ತಡ್ಕ ವಲಯಾಧ್ಯಕ್ಷ ಪರಮೇಶ್ವರ ಪೆರುಮುಂಡ ಶುಭಾಶಂಸನೆಗೈದರು. 

ಮುಳ್ಳೇರಿಯಾ ಮಂಡಲ ಉಪಾಧ್ಯಕ್ಷ ಬೇ.ಸಿ ಗೋಪಾಲಕೃಷ್ಣ ಭಟ್, ಸಾಯಿರಾಂ ಗೋಪಾಲಕೃಷ್ಣ ಭಟ್ ದಂಪತಿಗಳು, ಕೆ.ಯನ್ ಕೃಷ್ಣ ಭಟ್ ದಂಪತಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

         ಮುಳ್ಳೇರಿಯಾ ಮಂಡಲದ ಸಹಾಯ ವಿಭಾಗದ ಸರಳಿ ಮಹೇಶ ಕಾರ್ಯಕ್ರಮ ನಿರೂಪಿಸಿದರು. ಪಳ್ಳತ್ತಡ್ಕ ವಲಯ ಕಾರ್ಯದರ್ಶಿ ಸುಬ್ರಹ್ಮಣ್ಯ ಕೆರೆಮೂಲೆ ಧನ್ಯವಾದವಿತ್ತರು. ಪೆರಡಾಲ, ಪಳ್ಳತ್ತಡ್ಕ, ನೀರ್ಚಾಲು ವಲಯದ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries