ಕಾಸರಗೋಡು: ಪೆÇಸಡಿಗುಂಪೆಯನ್ನು ಕಾಸರಗೋಡು ಜಿಲ್ಲೆಯ ಪ್ರಧಾನ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಗೊಳಿಸಲಾಗುವುದು ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ತಿಳಿಸಿದರು.
ಶನಿವಾರ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರೊಂದಿಗೆ ಶನಿವಾರ ಸಚಿವರು ಪೊಸಡಿಗುಂಪೆಗೆ ಭೇಟಿ ನೀಡಿದ ಬಳಿಕ ಅವರು ಮಾತಯನಾಡಿದರು.
ಪೆÇಸಡಿಗುಂಪೆ ಅತ್ಯಧಿಕ ಪ್ರವಾಸೋದ್ಯಮ ಸಾಧ್ಯತೆಯಿರುವ ಹಿಲ್ ಸ್ಟೇಷನ್ ಆಗಿದೆ. ಪ್ರವಾಸಿಗರನ್ನು ಆಕರ್ಷಿಸುವ ಅನೇಕ ವಿಚಾರಗಳು ಇಲ್ಲಿವೆ. ಪ್ರವಾಸಿಗಳಿಗೆ ಅಗತ್ಯವಿರುವ ಎಲ್ಲ ವ್ಯವಸ್ಥೆಯನ್ನು ಇಲ್ಲಿ ನಡೆಸಬೇಕಿದೆ ಎಂದವರು ನುಡಿದರು. 1880ರಲ್ಲಿ ಬ್ರಿಟೀಷರು ಸಮೀಕ್ಷೆ ನಡೆಸುವ ಉದ್ದೇಶದಿಂದ ಪೆÇಸಡಿಗುಂಪೆಯಲ್ಲಿ ಸ್ಥಾಪಿಸಿದ್ದ ಇ.ಟಿ.ಸ್ಟೇಷನ್ ನ್ನು ಸಂರಕ್ಷಿತ ಕೇಂದ್ರವಾಗಿಸಲಾಗುವುದು ಎಂದವರು ಹೇಳಿದರು.
ಬೇಕಲಕೋಟೆಯ ಜೊತೆ ಕಡಲತೀರ ಪ್ರವಾಸೋದ್ಯಮ, ಪೆÇಸಡಿಗುಂಪೆ, ಮಂಞಂಪೆÇದಿಕುನ್ನು, ರಾಣಿಪುರಂ, ಕೋಟ್ಟಂಜೇರಿ ಸಹಿತ ಹಿಲ್ ಸ್ಟೇಷನ್ ವಲಯಗಳಲ್ಲಿ ಅಭಿವೃದ್ಧಿ ನಡೆಸುವುದು ರಾಜ್ಯಸರಕಾರದ ಉದ್ದೇಶವಾಗಿದೆ ಎಂದು ತಿಳಿಸಿದರು.
ಬಿ.ಆರ್.ಡಿ.ಸಿ. ಮತ್ತು ಡಿ.ಟಿ.ಪಿ.ಸಿ. ಜಂಟಿಯಾಗಿ ಪ್ರವಾಸೋದ್ಯಮ ಯೋಜನೆಗಳಿಗೆ ರೂಪುರೇಷೆ ನೀಡಲಿವೆ. ಕಣ್ಣೂರು, ಮಂಗಲೂರು ವಿಮಾನ ನಿಲ್ದಾಣಗಳ ಮೂಲಕ ವಿದೇಶಿ ಪ್ರವಾಸಿಗರಿಗೆ ಆಗಮನ ಸುಳಬವಾಗಿದೆ. ನೂತನ ಡೆಸ್ಟಿನೇಷನ್ ಗಳು ಕಾಸರಗೋಡು ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಗಳಿಗೆ ಹುರುಪು ನೀಡಲಿವೆ ಎಂದವರು ತಿಳಿಸಿದರು.