ತಿರುವನಂತಪುರ: ಕೇರಳದಲ್ಲಿ ಕೋವಿಡ್ ನಿಯಂತ್ರಣ ಚಟುವಟಿಕೆಗಳು ಕುಸಿಯಲು ಕಾರಣ ಬೃಹತ್ ಪ್ರತಿಭಟನೆಗಳು ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಹೇಳಿದ್ದಾರೆ. ಪ್ರತಿಭಟನೆಯಲ್ಲಿ ಜೋರಾಗಿ ಬೊಬ್ಬಿರಿಯುವುದರಿಂದ ಜೊಲ್ಲು ರಸದ ಮೂಲಕ ಸೋಂಕು ವ್ಯಾಪಕ ಪ್ರಮಾಣದಲ್ಲಿ ಹರಡಲು ಕಾರಣವಾಯಿತೆಂದು ಆರೋಗ್ಯ ಸಚಿವೆ ಸೋಮವಾರ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
'ಕೇರಳದಲ್ಲಿ ಕೋವಿಡ್ ನಿಯಂತ್ರಣ ಕಾರ್ಯಾಚರಣೆಗಳ ಕುಸಿತಕ್ಕೆ ಜನಸಮೂಹ ಪ್ರತಿಭಟನೆಗಳಲ್ಲಿ ನಿರತರಾಗಿದ್ದೂ ಕಾರಣವಾಗಿದೆ. ಘೋಷಣೆ ಕೂಗುವಾಗ ಜೊಲ್ಲು ರಸದ ಮೂಲಕ ಸೋಂಕು ಹರಡುವಲ್ಲಿ ವಿಭಿನ್ನವಾಗಿ ಕಾರಣವಾಯಿತು. ಇದು ಹೆಚ್ಚಿನರಿಗೆ ವೇಗವಾಗಿ ಸೋಂಕು ಹರಡಲು ಕಾರಣವಾಯಿತು ಎಂದು ಆರೋಗ್ಯ ಸಚಿವರು ಹೇಳಿದರು.
ಕೋವಿಡ್ ನಿಯಂತ್ರಣ ಹೋರಾಟದ ಸಂದರ್ಭ ರಾಜಕೀಯ ಪ್ರೇರಿತ ಆರೋಗ್ಯ ಕಾರ್ಯಕರ್ತರನ್ನು ಬಳಸುವ ಪ್ರಯತ್ನಗಳು ನಡೆದಿವೆ ಎಂದು ಆರೋಗ್ಯ ಸಚಿವರು ಹೇಳಿದರು. ಆರೋಗ್ಯ ಕಾರ್ಯಕರ್ತರು ತಿಂಗಳುಗಳಿಂದ ಉತ್ತಮ ಕೆಲಸ ಮಾಡುತ್ತಿದ್ದಾರೆ. ಆದರೆ ಈ ಮಧ್ಯೆ, ಆರೋಗ್ಯ ಕಾರ್ಯಕರ್ತರನ್ನು ರಾಜಕೀಯ ಪ್ರೇರಿತವಾಗಿ ಬಳಸುವ ಪ್ರಯತ್ನಗಳು ನಡೆದಿವೆ ಎಂದು ಆರೋಗ್ಯ ಸಚಿವರು ಹೇಳಿದರು. ಈ ಎಲ್ಲ ಪ್ರಯತ್ನಗಳು ಅಲ್ಪಾವಧಿಯದ್ದಾಗಿದ್ದು, ಆರೋಗ್ಯ ಕಾರ್ಯಕರ್ತರು ಕಾನೂನು ಬಾಹಿರವಾಗಿ ವರ್ತಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದರು.