HEALTH TIPS

ಬದಿಯಡ್ಕದಲ್ಲಿ ಅಬಕಾರಿ ಕಚೇರಿ ಹೊಸ ಕಟ್ಟಡ ಉದ್ಘಾಟನೆ-ವೆಬಿನಾರ್ ಮೂಲಕ ಮುಖ್ಯಮಂತ್ರಿಗಳಿಂದ ಉದ್ಘಾಟನೆ

Top Post Ad

Click to join Samarasasudhi Official Whatsapp Group

Qries

  

       ಬದಿಯಡ್ಕ: ಬದಿಯಡ್ಕ ಅಬಕಾರಿ ವಲಯ ಕಚೇರಿ ಇನ್ನು ಹೆಚ್ಚುವರಿ ಕಟ್ಟಡಗಳೊಂದಿಗೆ ಹೊಸ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿದೆ. ಸರ್ಕಾರದ ಮಹತ್ವಾಕಾಂಕ್ಷಿ 100 ದಿನಗಳ ಕಾರ್ಯಕ್ರಮದಲ್ಲಿ ಒಳಪಡಿಸಲಾಗಿದ್ದ ಬದಿಯಡ್ಕ ಅಬಕಾರಿ ಕಚೇರಿಕಟ್ಟಡವನ್ನು ಮಂಗಳವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಡಿಯೋ ಕಾನ್ಫರೆನ್ಸ್ ನಲ್ಲಿ ಉದ್ಘಾಟಿಸಿದರು.

         ಅಬಕಾರಿ ಸಚಿವ ಟಿ.ಪಿ.ರಾಮಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಸಚಿವರಾದ ಇ ಚಂದ್ರಶೇಖರನ್, ಕೆ.ಕೆ.ಶೈಲಜಾ, ಇ.ಪಿ.ಜಯರಾಜನ್, ಎಂ.ಎಂ.ಮಣಿ ಮುಖ್ಯ ಅತಿಥಿಗಳಾಗಿದ್ದರು. ಸಂಸದ ರಾಜಮೋಹನ್ ಉಣ್ಣಿತ್ತಾನ್, ಶಾಸಕ ಎನ್.ಎ. ನೆಲ್ಲಿಕುನ್ನು, ಅಬಕಾರಿ ಆಯುಕ್ತ ಎಸ್.ಅನಂದಕೃಷ್ಣನ್, ಜಿಲ್ಲಾ ಪಂಚಾಯತಿ ಅಧ್ಯಕ್ಷ ಎಜಿಸಿ ಬಶೀರ್, ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ಪಂಚಾಯತಿ ಸದಸ್ಯೆ ಬಿ.ಶಾಂತ, ಹೆಚ್ಚುವರಿ ಅಬಕಾರಿ ಆಯುಕ್ತ ಡಿ ರಾಜೀವ್ ಮತ್ತು ಉಪ ಅಬಕಾರಿ ಆಯುಕ್ತ ವಿನೋದ್ ಬಿ ನಾಯರ್, ಡಿ ಬಾಲಕೃಷ್ಣನ್, ಟಿ.ಕೆ.ಅಶ್ರಫ್, ಅಬಕಾರಿ ಇನ್ಸ್‍ಪೆಕ್ಟರ್ ಎಸ್.ಸತೀಶ್, ಸರ್ಕಲ್ ಇನ್ಸ್‍ಪೆಕ್ಟರ್‍ಗಳು, ಅಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು.

       ಹೊಸ ಕಟ್ಟಡವು ಬದಿಯಡ್ಕದಲ್ಲಿರುವ ಅಬಕಾರಿ ಇಲಾಖೆಯ ಸ್ವಂತ ನಿವೇಶನದಲ್ಲಿ ನಿರ್ಮಿಸಲಾಗಿದೆ. ಈವರೆಗೆ  ಅಬಕಾರಿ ಕಚೇರಿ ಮುಳ್ಳೇರಿಯಾದ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಬದಿಯಡ್ಕದಲ್ಲಿ ಇಲಾಖೆಯ 25 ಸೆಂಟ್ಸ್ ಭೂಮಿಯಲ್ಲಿ ಹೊಸ ಕಟ್ಟಡವನ್ನು ನಿರ್ಮಿಸಲಾಗಿದೆ. 4542 ಚದರ ಅಡಿ ಎರಡು ಅಂತಸ್ತಿನ ಕಟ್ಟಡದ ಬೆಲೆ ಸುಮಾರು 1 ಕೋಟಿ ರೂ. ಆಗಿದ್ದು 218ರ ಜೂನ್ ನಲ್ಲಿ ಇಲಾಖೆಯ ಸಚಿವರು ಕಚೇರಿಗೆ ಶಿಲಾನ್ಯಾಸ ನಿರ್ವಹಿಸಿದ್ದರು. ಕಾರ್ಯಾಲಯ ಕೊಠಡಿ, ಇನ್ಸ್‍ಪೆಕ್ಟರ್ ಕೊಠಡಿ, ಹೆಚ್ಚುವರಿ  ಇನ್ಸ್‍ಪೆಕ್ಟರ್ ಕೊಠಡಿ, ಸೆಲ್, ಮಹಿಳಾ ಕೊಠಡಿ, ಸ್ಟಾಫ್ ರೆಸ್ಟ್ ರೂಮ್ ಮತ್ತು ಎವಿಡೆನ್ಸ್ ಸ್ಟೋರ್ ರೂಮ್ ಮೊದಲಾದವುಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಪೂರ್ಣಗೊಂಡ ಕಟ್ಟಡಗಳನ್ನು ಮುಖ್ಯಮಂತ್ರಿ ಉದ್ಘಾಟಿಸಿದ್ದು ಕೋವಿಡ್ ನಿಯಮಾನುಸಾರ ಸಮಾರಂಭವನ್ನು ಆಯೋಜಿಸಲಾಗಿತ್ತು.



Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries