ಕೊಚ್ಚಿ: ಫೇಸ್‍ಬುಕ್ ಲೈವ್‍ನಲ್ಲಿ ಕಣ್ಣೀರು ಸುರಿಸಿದ ಟ್ರಾನ್ಸ್ ಜೆಂಡರ್ ಮಹಿಳೆ ಸಜಾನಾ ಶಾಜಿಗೆ ಅಗತ್ಯ ಸಹಾಯ ಮತ್ತು ಭದ್ರತೆ ನೀಡಲಾಗುವುದು ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಹೇಳುವ ಮೂಲಕ ಗಮನ ಸೆಳೆದ ಘಟನೆ ಮಂಗಳವಾರ ನಡೆದಿದೆ.
ಸಜನಾ ಅವರನ್ನು ಫೆÇೀನ್‍ನಲ್ಲಿ ಕರೆಮಾಡಿ ಸಚಿವೆ ವಿಷಯ ತಿಳಿದುಕೊಂಡರು. ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪೆÇಲೀಸರು ಭದ್ರತೆಯನ್ನು ಖಚಿತಪಡಿಸಲಾಗುವುದೆಂದು ಸಚಿವರು ಹೇಳಿದರು.
ಘಟನೆ ಏನು?
ಕೊಚ್ಚಿಯ ಇರುಬನ್ನತ್ ಎಂಬಲ್ಲಿ ಬಿರಿಯಾನಿ ಮಾರಾಟ ಮಾಡುತ್ತಿದ್ದ ಟ್ರಾನ್ಸ್ ಜೆಂಡರ್ ಸಜನಾಳಿಗೆ ಪಕ್ಕದ ಇತರ ಮಾರಾಟಗಾರರು ತಡೆದು ಹಲ್ಲೆ ನಡೆಸಿದ ಘಟನೆ ನಡೆದಿತ್ತು. ಈ ಬಗ್ಗೆ ಸಜಾನಾ ಸೋಷಿಯಲ್ ಮೀಡಿಯಾದಲ್ಲಿ ಹಲ್ಲೆಯ ಬಗ್ಗೆ ಅವಲತ್ತುಕೊಂಡಿದ್ದಳು. ಸುದ್ದಿ ಮಾಧ್ಯಮಗಳು ಈ ಬಗ್ಗೆ ಗಮನ ಸೆಳೆದ ಬಳಿಕ ಆರೋಗ್ಯ ಸಚಿವರು ಪ್ರತಿಕ್ರಿಯೆಯೊಂದಿಗೆ ಸಜನಾಳಿಗೆ ಬೆಂಬಲ ಸೂಚಿಸಿದರು.
ಟ್ರಾನ್ಸ್ ಜೆಂಡರ್ ಗಳಿಗೆ ಸಮಾಜದಲ್ಲಿ ಪುರುಷರು ಮತ್ತು ಮಹಿಳೆಯರಂತೆಯೇ ಹಕ್ಕುಗಳಿವೆ. ಅವರನ್ನು ಅವಮಾನಿಸಲು ಯಾರಿಗೂ ಅವಕಾಶ ನೀಡುವುದಿಲ್ಲ. ಸಾಮಾಜಿಕ ನ್ಯಾಯ ಇಲಾಖೆಯ ಭಾಗವಾಗಿ ಕೇರಳ ಸಾಮಾಜಿಕ ಭದ್ರತಾ ಮಿಷನ್ ವಿ ಕೇರ್ ಯೋಜನೆಯ ಮೂಲಕ ಸಜಾನಾಗೆ ತಕ್ಷಣದ ಆರ್ಥಿಕ ನೆರವು ನೀಡಲಾಗುವುದು. ಆಕೆಯನ್ನು ಅವಮಾನಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಮತ್ತು ಆಕೆಗೆ ಸ್ವಾವಲಂಬಿಯಾಗಿ ಸ್ವ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಮತ್ತು ಘನತೆಯಿಂದ ಬದುಕಲು ಅವಕಾಶ ನೀಡಲಾಗುವುದು ಎಂದು ಸಚಿವರು ಫೇಸ್‍ಬುಕ್ ಪೆÇೀಸ್ಟ್‍ನಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಟ್ರಾನ್ಸ್ ಜೆಂಡರ್ ಗಳಿಗೆ ಹಲವಾರು ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ. ಮಳವಿಲ್ ಎಂಬ ಯೋಜನೆಯ ಮೂಲಕ ಸ್ಕೈಲ್ ಅಭಿವೃದ್ಧಿ ಯೋಜನೆ, ಸ್ವ-ಉದ್ಯೋಗ ಸಾಲ ಸೌಲಭ್ಯಗಳು ಮತ್ತು ಉನ್ನತ ಶಿಕ್ಷಣಕ್ಕೆ ಸಮಾನವಾದ ಶಿಕ್ಷಣ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಗುರುತಿನ ಚೀಟಿ ನೀಡಲಾಗಿದೆ ಎಂದು ಸಚಿವರು ಹೇಳಿದರು.
ಎರ್ನಾಕುಳಂನ ಸಜಾನಾ ಮತ್ತು ಅವಳ ಸ್ನೇಹಿತರನ್ನು ಸೋಮವಾರ ಗುಂಪೊಂದು ತಡೆದು ಥಳಿಸಿದ ಘಟನೆ ನಡೆದಿತ್ತು. ಕಡಿಮೆ ಬೆಲೆಗೆ ಬಿರಿಯಾಣಿ ಮಾರಾಟ ಮಾಡುತ್ತಿರುವುದರ ಕಾರಣದಿಂದ ಥಳಿಸಿರುವುದಾಗಿ ಸಜನಾ ತಿಳಿಸಿದ್ದಾರೆ. ದೂರು ನೀಡಿದ್ದರೂ ಪೆÇಲೀಸರು ಯಾವುದೇ ಗಂಭೀರ ಕ್ರಮ ಕೈಗೊಂಡಿಲ್ಲ ಮತ್ತು ವ್ಯಾಪಾರಕ್ಕಾಗಿ ಬೇರೆ ಸ್ಥಳಕ್ಕೆ ತೆರಳುವಂತೆ ಹೇಳಿದರು ಎಂದು ಸಜನಾ ಹೇಳಿದ್ದಾರೆ.