ಕಾಸರಗೋಡು: ನಗರಸಭೆ ವ್ಯಾಪ್ತಿಯ ಕೊಪ್ಪಳದಲ್ಲಿ 53ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕಾಲ್ನಡೆ ಸೇತುವೆಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎ.ಜಿ.ಸಿ ಬಶೀರ್ ಉದ್ಘಾಟಿಸಿದರು.
ಕಾಸರಗೋಡು ನಗರಸಭಾ ಅಧ್ಯಕ್ಷೆ ಬೀಫಾತಿಮ್ಮ ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಸ್.ಎ ಮಹಮ್ಮದ್ ಹಾಜಿ, ನಗರಸಭಾ ಕಾರ್ಯದರ್ಶಿ ಮಹಮ್ಮದ್ ಶಾಫಿ, ಮುಖ್ಯ ಇಂಜಿನಿಯರ್ ಉಣ್ಣಿಕೃಷ್ಣನ್ ಪಿಳ್ಳೆ, ನಗರಸಭಾ ಸದಸ್ಯರು ಉಪಸ್ಥಿತರಿದ್ದರು.ಈ ಪ್ರದೇಶದಲ್ಲಿ ಎಸ್.ಸಿ, ಎಸ್.ಟಿ ಸಮುದಾಯದ ಜನತೆ ಹೆಚ್ಚಾಗಿ ವಾಸಿಸುತ್ತಿದ್ದು, ಮಳೆಗಾಲದಲ್ಲಿ ಇಲ್ಲಿನ ಜನತೆ ದ್ವೀಪಸದೃಶ ಜೀವನ ನಡೆಸುತ್ತಿರುವುದನ್ನು ಮನಗಂಡು ನಗರಸಭೆಯ ಹಿಂದುಳಿದ ಸಮುದಾಯದ ಅಭಿವೃದ್ಧಿ ಇಲಾಖೆ ಸಹಕಾರದೊಂದಿಗೆ ಕಾಲ್ನಡೆ ಸೇತುವೆ ನಿರ್ಮಿಸಲಾಗಿದೆ.