HEALTH TIPS

ತಿಮಿರಿಯ ಚಾಮುಂಡಿ ದೈವ ಬಿತ್ತನೆ ನಡೆಸುವ ಮೂಲಕ ಉತ್ತರ ಮಲಬಾರಿನ ದೈವಾರಾಧನೆಗೆ ಚಾಲನೆ

     

        ಕಾಸರಗೋಡು: ತುಳುನಾಡು ಸಹಿತ ಅದರಾಚೆಗಿರುವ ಮಲಬಾರ್ ಪ್ರದೇಶದ ಸಾಂಪ್ರದಾಯಿಕ ಜೀವನ ಶೈಲಿಗಳು ಎಂದಿಗೂ ಅಪೂರ್ವವೂ ವೈಜ್ಞಾನಿಕ ಹಿನ್ನೆಲೆಯೊಂದಿಗೆ ನಂಬಿಕೆ-ನಡವಳಿಕೆಗಳ ಲೇಪನದೊಂದಿಗೆ ಚೇತೋಹಾರಿಯಾಗಿ ಗಮನ ಸೆಳೆಯುತ್ತದೆ. ಉತ್ತರ ಮಲಬಾರ್ ನಲ್ಲಿ ಸಾಂಪ್ರದಾಯಿಕ ಕೃಷಿ ಋತುವಿಗೆ ಭಾನುವಾರ ಅಧಿಕೃತ ಚಾಲನೆ ನೀಡಲಾಗಿದೆ. ಮುಖದಿಂದ ಕೆಳಗೆ ಇಳಿಬಿದ್ದ ತಿರುಮುಡಿ(ಹಿಂಗಾರದ ಶೃಂಗಾರ) ಧರಿಸಿದ ಚೆರ್ವತ್ತೂರು ಚೀಮೇನಿ ಸಮೀಪದ ತಿಮಿರಿಯ ಚಾಮುಂಡಿ ದೈವ ಹೊಲದಲ್ಲಿ ಬೀಜಗಳನ್ನು ಬಿತ್ತಿ ಚಾಲನೆ ನೀಡಿತು. ಕರೋನಾ ಅವಧಿಯಲ್ಲಿ ಉತ್ತರ ಮಲಬಾರ್ ನಲ್ಲಿ ಇದು ಮೊದಲ ಭೂತವಾಗಿದ್ದು ಈ ಮೂಲಕ ಈ ಋತುವಿನ ದೈವಾರಾಧನೆ ಮತ್ತೆ ಆರಂಭಗೊಂಡಿತು. 

         ದೊಡ್ಡ ಅಂಗಳದ ಪಕ್ಕದಲ್ಲಿರುವ ಚಾಮುಂಡಿ ಹೊಲದಲ್ಲಿ ಬಿತ್ತನೆ ನಡೆದ ಬಳಿಕ  ರೈತರು ವಾರ್ಷಿಕ ಬೆಳೆಗೆ ತೊಡಗಿಸಿಕೊಳ್ಳುವುದು ವಾಡಿಕೆ. ಇದು ಹೊಲಗಳಲ್ಲಿ ಸಮೃದ್ಧಿ ಮತ್ತು ಸುಭಿಕ್ಷೆಯನ್ನು ಹರಡುವ ಮೂಲಕ ಕೃಷಿಯನ್ನು ರಕ್ಷಿಸುತ್ತದೆ ಎಂದು ನಂಬಲಾಗಿದೆ. 


      ಮಳೆಗಾಲದ ಬಳಿಕ ವೃಶ್ಚಿಕ ಋನತುವಿನ ಮೊದಲು ದೈವಾರಾಧನೆ ಆರಂಭಗೊಳ್ಳುತ್ತದೆ. ತುಲಾ ರಾಶಿಯ ಜನ್ಮದಿನವಾದ ಭಾನುವಾರ ತಿಮಿರಿಯಲ್ಲಿರುವ ಚಾಮುಂಡಿ ದೈವ  ಕ್ಷೇತ್ರದಲ್ಲಿ ಮೊದಲ ದೈವ ನರ್ತನ ಆರಂಭಗೊಂಡಿತು.(ತುಲಾ ಮಾಸದ ಹತ್ತನೇ ದಿನ).  ಕೈಯಲ್ಲಿ ಕತ್ತಿ ಮತ್ತು ಗುರಾಣಿಯೊಂದಿಗೆ ಹೊಲಕ್ಕೆ ಆಗಮಿಸಿದ ಚಾಮುಂಡಿ ದೊಡ್ಡ ಹೊಲದಲ್ಲಿ ಬೀಜವನ್ನು ಬಿತ್ತಿ ಅಧಿಕೃತ ಚಾಲನೆ ನೀಡಿತು.  ಕೋವಿಡ್ ನಿಯಮಗಳನ್ನು ಸಂಪೂರ್ಣವಾಗಿ ಅನುಸರಿಸಿ ದೈವನರ್ತನ ಕಾರ್ಯಕ್ರಮ ನಡೆಯಿತು. ಭೂತಾರಾಧನೆ ಆಚರಣೆಗಳನ್ನು ಷರತ್ತುಗಳೊಂದಿಗೆ ನಡೆಸಲು ಜಿಲ್ಲಾಧಿಕಾರಿ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಮೊದಲ ಭೂತಕೋಲವಾಗಿ ತಿಮಿರಿಯಲ್ಲಿ ಈ ಆಚರಣೆ ನಡೆಯಿತು. ಗರಿಷ್ಠ 20 ಜನರಿಗೆ ಹಾಜರಾಗಲು ಅವಕಾಶ ನೀಡಲಾಯಿತು. ಕೋವಿದ್ ತಪಾಸಣೆ ನಡೆಸಿ ನಕಾರಾತ್ಮಕ ಪ್ರಮಾಣಪತ್ರವನ್ನು ಹೊಂದಿರಲು ಮತ್ತು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಯಿಂದ ಅನುಮತಿ ಪಡೆಯಲು ಸಂಘಟಕರಿಗೆ ನಿರ್ದೇಶನ ನೀಡಲಾಗಿತ್ತು.

            ಉತ್ತರ ಮಲಬಾರ್ ಕೃಷಿ:

   ತುಲಾ ಮಾಸದ 10ನೇ ದಿನ ಉತ್ತರ ಮಲಬಾರ್‍ನಲ್ಲಿ ದೈವಾರಾಧನೆ ಪ್ರಾರಂಭವಾಗುವುದು ವಾಡಿಕೆ. ಜೊತೆಗೆ ಕೃಷಿ ಕೊಯ್ಲಿಗೂ ಈ ಮೂಲಕ ಚಾಲನೆ ದೊರಕುತ್ತದೆ. ಚೆಂಡೆಯವರು, ದೈವ ಕರ್ಮಿಗಳು, ಪರಿಕರ್ಮಿಗಳು ಮತ್ತು ದೇವಾಲಯದ ಅಧಿಕಾರಿಗಳು ಸೇರಿದಂತೆ 500 ಕ್ಕೂ ಹೆಚ್ಚು ಜನರು ಭಾಗವಹಿಸುತ್ತಿದ್ದರು. ಈ ಬಾರಿ  ಕೇವಲ 20 ಜನರ ಭಾಗವಹಿಸುವಿಕೆಯೊಂದಿಗೆ ಭೂತಾರಾಧನೆ(ತೈಯ್ಯಂ)ಯನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ದೇವಾಲಯದ ಅಧಿಕಾರಿಗಳು ಹೇಳುತ್ತಾರೆ. ಈ ಕಾರಣದಿಂದಾಗಿ, ಅನೇಕ ದೇವಾಲಯಗಳಲ್ಲಿನ ಭೂತದ ಕೋಲ ಅಥವಾ ನರ್ತನಗಳನ್ನು/ ಉತ್ಸವಗಳನ್ನು  ಈ ಬಾರಿ ರದ್ದುಪಡಿಸಲಾಗಿದೆ. ಮಾವಿಲಕ್ಕಡಪುರಂ ಒರಿಯರಕ್ಕಾವ್ ವಿಷ್ಣುಮೂರ್ತಿ ದೇವಸ್ಥಾನ, ಕೈಯ್ಯೂರು ಆಳ್‍ಕ್ಕಿಳಿಲ್ ದೇವಸ್ಥಾನ, ಕರಿಯಿಲ್ ವಿಷ್ಣುಮೂರ್ತಿ ದೇವಸ್ಥಾನ ಮತ್ತು ಚೆರ್ವತ್ತೂರು ಅಳಿವಾತುಕ್ಕಾಲ್ ವಿಷ್ಣುಮೂರ್ತಿ ದೇವಾಲಯಗಳ ಒತ್ತೆಕೋಲ ಮಹೋತ್ಸವಗಳನ್ನು ರದ್ದುಪಡಿಸಲಾಗಿದೆ. ಆದರೆ ತಿಮಿರಿಯ ವಲಿಯ ವಳಪ್ಪಿಲ್ ಚಾಮುಂಡಿ ದೈವ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಉತ್ಸವ ಭಾನುವಾರ ನಡೆದಿರುವುದರಿಂದ ದೈವನರ್ತನ ಕಲಾವಿದರು ಶುಭ ನಿರೀಕ್ಷೆಯಲ್ಲಿರುವರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries