1952ರಲ್ಲಿ ಸೌಭಾಗ್ಯಲಕ್ಷ್ಮೀ ಚಿತ್ರದ ಮೂಲಕ ಸಂಗೀತ ನಿರ್ದೇಶನ ಕ್ಷೇತ್ರಕ್ಕೆ ಕಾಲಿರಿಸಿ ಅತ್ಯಂತ ಹೆಚ್ಚು ಸಂಖ್ಯೆಯ ಮಧುರ ಗೀತೆಗಳನ್ನು ನೀಡಿ ಅತಿ ಹೆಚ್ಚು ಕಾಲ ಚಲಾವಣೆಯಲ್ಲಿದ್ದ ರಾಜನ್ ನಾಗೇಂದ್ರ ಜೋಡಿಯ ರಾಜನ್ ಪರಮಪದ ಸೇರಿದ್ದಾರೆ ಎಂಬ ಸುದ್ದಿ ಬಂದಿದೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.
ನಾಗೇಂದ್ರ 2000ನೇ ಇಸವಿಯಲ್ಲಿ ನಮ್ಮನ್ನಗಲಿದ್ದರು. ಅವರಿಗೆ ಶ್ರದ್ಧಾಂಜಲಿಯ ರೂಪದಲ್ಲಿ ಅನ್ನಪೂರ್ಣ ಚಿತ್ರದ ಈ ಗೀತೆ. ಇದರಲ್ಲಿ ಆರ್ಕೆಷ್ಟ್ರಾ ಕಂಡಕ್ಟ್ ಮಾಡುತ್ತಿರುವ ಅವರಿಬ್ಬರನ್ನೂ ನೋಡಬಹುದು. ಶಂಕರ್ ಜೈಕಿಶನ್ ಅವರಂತೆ ಅತಿ ದೊಡ್ಡ ಆರ್ಕೆಷ್ಟ್ರಾ ನಿರ್ವಹಿಸಬಲ್ಲವರಾಗಿದ್ದ ಇವರು ಅತಿ ಕಡಿಮೆ ವಾದ್ಯಗಳನ್ನು ಉಪಯೋಗಿಸಿಯೂ ಅದೇ ಪರಿಣಾಮ ಉಂಟು ಮಾಡುವುದರಲ್ಲಿ ನಿಷ್ಣಾತರಾಗಿದ್ದವರು.