ಬದಿಯಡ್ಕ: ಅಗಲ್ಪಾಡಿ ಮಾರ್ಪನಡ್ಕ ಜಯನಗರದ ಶ್ರೀಗೋಪಾಲಕೃಷ್ಣ ಭಜನಾ ಮಂದಿರದ ನೇತೃತ್ವದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಭೋಜನಶಾಲೆ ಹಾಗೂ ಸಭಾಂಗಣದ ಅವಲೋಕನ ಸಭೆ ಭಾನುವಾರ ಸಂಜೆ ಮಂದಿರ ಪರಿಸರದಲ್ಲಿ ನಡೆಯಿತು.
ನಿರ್ಮಾಣ ಸಮಿತಿಯ ಗೌರವ ಸಲಹೆಗಾರ ಸಮಿತಿಯ ಸಂಚಾಲಕ ಪ್ರೊ.ಎ.ಶ್ರೀನಾಥ್ ಕಾಸರಗೋಡು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗೌರವ ಸಲಹೆಗಾರರಾದ ರಾಮಚಂದ್ರ ಭಟ್, ಪ್ರಧಾನ ಕಾರ್ಯದರ್ಶಿ ರಮೇಶ ಕೃಷ್ಣ ಪದ್ಮಾರ್, ಉಪಾಧ್ಯಕ್ಷ ಸುಧಾಮ ಪದ್ಮಾರ್, ಸದಸ್ಯ ನರಸಿಂಹ ಭಟ್ ಕಳೆಯತ್ತೋಡಿ, ಕಾರ್ಯದರ್ಶಿ ರಾಜೇಶ್ ಮಾಸ್ತರ್ ಅಗಲ್ಪಾಡಿ, ಯಾದವ ಸೇವಾ ಸಮಿತಿ ಕಾರ್ಯದರ್ಶಿ ನಾರಾಯಣ ಪದ್ಮಾರ್ ಮೊದಲಾದವರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು. ಭಜನಾ ಮಂದಿರದ ಅಧ್ಯಕ್ಷ ಬಾಬು ಮಾಸ್ತರ್ ಅಗಲ್ಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಾಜೇಶ್ ಮಾಸ್ತರ್ ವಂದಿಸಿದರು.
ಕೋವಿಡ್ ಮಹಾಮಾರಿಯ ಸಂಕಷ್ಟದ ಮಧ್ಯೆಯೂ ಸಭಾಂಗಣ ಮತ್ತು ಭೋಜನ ಶಾಲೆಯ ನಿರ್ಮಾಣ ಕಾರ್ಯ ಸಮರ್ಥವಾಗಿ ನಡೆಯುತ್ತಿರುವ ಬಗ್ಗೆ ಸಭೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಲಾಯಿತು. ಜೊತೆಗೆ ನಿರ್ಮಾಣ ಕಾಮಗಾರಿಯ ತ್ವರಿಗತಿಗೆ ಅಗತ್ಯವಾದ ಸಂಪನ್ಮೂಲಗಳ ಕ್ರೋಢೀಕರಣಕ್ಕೆ ಬೇಕಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.