ಮಂಜೇಶ್ವರ: ಗಡಿನಾಡ ಯುವಕರ ಹೊಸ ಪ್ರಯತ್ನ ಉದಯ್ ಕುಮಾರ್ ಬೇಕೂರ್ ಸಾಹಿತ್ಯ ಮತ್ತು ನಿರ್ದೇಶನದಲ್ಲಿ, ದೀಪಕ್ ಹೊಸಂಗಡಿ ಪ್ರಜ್ವಲ್ ಬೇಕೂರ್ ಸಹ ನಿರ್ದೇಶನದಲ್ಲಿ ಉಡಲ ಮೋಕೆ [ದೇವೆರೆ ಸೃಷ್ಠಿ ] ತುಳುನಾಡ ಬಹು ಜನರ ಮನಸ್ಸಲ್ಲಿ ಸಂಚಲನ ಮೂಡಿಸಿದ ಬಹು ನಿರೀಕ್ಷಿತ ತುಳು ಆಲ್ಬಮ್ ಸಾಂಗ್ ಬುಧವಾರ ಬಿಡುಗಡೆಗೊಂಡಿತು.
ಶಿವಂ ಕ್ರಿಯೇಷನ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ತುಳು ಕನ್ನಡ ಚಲನಚಿತ್ರ ನಟ ಸ್ಯಾಂಡಲ್ ವುಡ್ 2019 ಸಿಮಾ ಪ್ರಶಸ್ತಿ ವಿಜೇತ ತುಳುವ ಸೌರಭ ಪ್ರಕಾಶ್ ತೂಮಿನಾಡ್ ಅವರು ಶ್ರೀಮತ್ ಅನಂತೇಶ್ವರ ದೇವಸ್ಥಾನ ಮಂಜೇಶ್ವರದಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಖ್ಯಾತ ಕಲಾವಿದರಾದ ಪದ್ಮನಾಭ ತೂಮಿನಾಡ್, ಸುನಿಲ್ ಕುಮಾರ್ ಬಾಯಿಕಟ್ಟೆ, ಸಾಹಿತಿ ಮೌನೇಶ್ ಆಚಾರ್ಯ ಕಡಂಬಾರ್, ಮನೋಹರ್ ಕಳಾಯಿ, ನಾಯಕ ನಟ ಪ್ರಣಮ್ ರೈ ಕೋಡಿಬೈಲ್, ನಟಿ ಸಂಜಿತಾ ಶೆಟ್ಟಿಗಾರ್, ನಯನ್ ಕಾಸರಗೋಡು, ವಸಂತ್ ಕಾಯತ್ರ್ತೋಡಿ, ಚರಣ್ ಮೂರ್ನಾಡ್, ಪ್ರವೀಣ್ ಬಂದ್ಯೋಡ್, ಹರೀಶ್ ತಚ್ಚಣಿ ಮುಂತಾದವರು ಉಪಸ್ಥಿತರಿದ್ದರು.