ಮಂಜೇಶ್ವರ: ಬಿಜೆಪಿ ವರ್ಕಾಡಿ ಪಂಚಾಯತಿ ಸಮಿತಿ ನೇತೃತ್ವದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ವಿದ್ಯಾಭ್ಯಾಸ ಮಂತ್ರಿ ಕೆ.ಟಿ.ಜಲೀಲ್, ಮಂಜೇಶ್ವರ ಶಾಸಕ ಕಮರುದ್ದೀನ್ ರಾಜೀನಾಮೆ ಆಗ್ರಹಿಸಿ ವರ್ಕಾಡಿ ಬೇಕರಿ ಜಂಕ್ಷನ್ ಬಳಿ ಶುಕ್ರವಾರ ನಿಂತು ಪ್ರತಿಭಟನೆ ನಡೆಯಿತು. ಕಾರ್ಯಕ್ರಮ ವನ್ನು ಮಂಜೇಶ್ವರ ಮಂಡಲ ಸಮಿತಿ ಅಧ್ಯಕ್ಷ ಮಣಿಕಂಠ ರೈ ಉದ್ಘಾಟಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಬ್ಲಾಕ್ ಪಂಚಾಯತಿ ಸದಸ್ಯ ಸದಾಶಿವ. ಯು ಮಾತನಾಡಿದರು.
ಸಭೆಯಲ್ಲಿ ಗ್ರಾಮ ಪಂಚಾಯತಿಯ ಬಿಜೆಪಿ ಜನ ಪ್ರತಿನಿಧಿಗಳಾದ ವಸಂತ ಎಸ್, ಸದಾಶಿವ ನಾಯ್ಕ್ ಮಂಟಮೆ ಮತ್ತು ವಿಜಯ, ವಿವೇಕಾನಂದ ಶೆಟ್ಟಿ, ಯುವ ಮೋರ್ಚಾ ನೇತಾರ ಪ್ರಜ್ವಿತ್ ಸುಳ್ಯಮೆ ಮೊದಲಾದವರು ಉಪಸ್ಥಿತರಿದ್ದರು. ಜೀವನ್ ವರ್ಕಾಡಿ ಸ್ವಾಗತಿಸಿ, ವಂದಿಸಿದರು.