ಕಾಸರಗೋಡು: ರಾಜ್ಯ ಸರಕಾರದ ಸುಭಿಕ್ಷ ಕೇರಳಂ ಯೋಜನೆ ಪ್ರಕಾರ, ಬ್ರಹ್ಮಗಿರಿ ಸೊಸೈಟಿಯ ಸಹಾಯದೊಂದಿಗೆ ಕೋಳಿ ಫಾರಂ ನಲ್ಲಿ ಯಶಸ್ಸು ಕಂಡ ಸಾಧಕ, ಚೆಂಗಳ ಗ್ರಾಮ ಪಂಚಾಯತ್ ನ ಪಿಲಿಕೂಡ್ಲು ನಿವಾಸಿ, ಶ್ರೀ ಕುಮಾರನ್ ನಾಯರ್ ಅವರಿಗೆ ನಗದು ಬಹುಮಾನ ವಿತರಣೆ ನಡೆಯಿತು.
ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು 88,539 ರೂ.ನ ಚೆಕ್ ಹಸ್ತಾಂತರಿಸಿದರು. ಸುಭಿಕ್ಷ ಕೇರಳಂ ಜಿಲ್ಲಾ ಕೋರ್ ಸಮಿತಿ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್, ಬ್ರಹ್ಮಗಿರಿ ಸೊಸೈಟಿ ಆಡಳಿತಾಧಿಕಾರಿ ಎಂ.ವಿ.ಸಂತೋಷ್, ಕೇರಳ ಚಿಕ್ಕನ್ ಕಾಸರಗೋಡು ಸಮಿತಿ ಸಂಚಾಲಕ ಮುಹಮ್ಮದ್ ಷಾಕೀರ್ ಮೊದಲಾದವರು ಉಪಸ್ಥಿತರಿದ್ದರು.