ನವದೆಹಲಿ: ಪ್ರಾದೇಶಿಕ ಮತ್ತು ಸೈದ್ಧಾಂತಿಕ ಸಂಕುಚಿತತೆಗನ್ನು ಮೀರಿ ನಮ್ಮ ಭಾಷೆ ಮತ್ತು ನಮ್ಮ ಗುರುತನ್ನು ಪ್ರತಿಷ್ಠಾಪಿಸಿದರೆ ದೇಶ ಮುಂದೆ ಪ್ರಗತಿ ಹೊಂದುವುದನ್ನು ಯಾರೊಬ್ಬರೂ ತಡೆಯಲು ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಸೋಮವಾರ ಹೇಳಿದ್ದಾರೆ.
ಹೈದರಾಬಾದ್ ನ ಕೇಂದ್ರೀಯ ಹಿಂದೀ ಸಂಸ್ಥೆಯ ಕಟ್ಟಡವನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿ ಮಾತನಾಡಿದ ಡಾ. ರಮೇಶ್ ಪೋಖ್ರಿಯಾಲ್, ‘ನಾವು ನಮ್ಮ ಗುರುತು, ನಮ್ಮ ಭಾಷೆಯನ್ನು ಬಳಸಿದರೆ ಮತ್ತು ಪ್ರಾದೇಶಿಕ, ಸೈದ್ಧಾಂತಿಕ ಸಂಕುಚಿತತೆಗಿಂತ ಮೀರಿ ಹೊರಬಂದರೆ ದೇಶ ಮುಂದೆ ಸಾಗುವುದನ್ನು ಯಾವುದೇ ಶಕ್ತಿ ತಡೆಯಲು ಸಾಧ್ಯವಿಲ್ಲ ಎಂದರು.
ತಮ್ಮದೇ ಭಾಷೆಯಿಲ್ಲದೆ ಮುಂದುವರೆಯಲು ಸಾಧ್ಯವಿಲ್ಲ ಎಂಬುದಕ್ಕೆ ಜರ್ಮನಿ, ಫ್ರಾನ್ಸ್, ಇಸ್ರೇಲ್ ಮತ್ತು ಜಪಾನ್‌ನಂತಹ ವಿಶ್ವದ ಶ್ರೀಮಂತ ಮತ್ತು ಅಭಿವೃದ್ಧಿ ಹೊಂದಿದ ದೇಶಗಳು ಉದಾಹರಣೆಯಾಗಿವೆ ಎಂದು ಅವರು ಹೇಳಿದ್ದಾರೆ.