ಕಾಸರಗೋಡು: ಜಿಲ್ಲಾ ಮಟ್ಟದ ಕರೋನಾ ಸಮಿತಿ ಸಬೆಯಲ್ಲಿ ಮಾಸ್ಟರ್ ಯೋಜನೆಯ ಲಾಂಛನವನ್ನು ಜಿಲ್ಲಧಿಕಾರಿಡಾ.ಡಿ.ಸಜಿತ್ ಬಾಬು ಅವರು ಬಿಡುಗಡೆಗೊಳಿಸಿದರು. ಲಾಂಛನ ಸಿದ್ಧಪಡಿಸಿದ ಕುಟ್ಟಮತ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಶಿಕ್ಷಕ ಸುಜಿತ್ ಬಿ. ಅವರಿಗೆ ಅರ್ಹತಾಪತ್ರ, ನಗದು ಬಹುಮಾನವನ್ನು ಜಿಲ್ಲಧಿಕಾರಿ ವಿತರಿಸಿದರು.
ಕರಪತ್ರ ಬಿಡುಗಡೆ:
ಇತರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವ ವಾಹನಗಳ ಚಾಲಕರಿಗೆ ಮತ್ತು ಸಿಬ್ಬಂದಿಗೆ ವಿತರಿಸಲು ಐ.ಇ.ಸಿ. ಸಂಚಲನ ಸಮಿತಿ ಸಿದ್ಧಪಡಿಸಿರುವ ಜನಜಾಗೃತಿ ಕರಪತ್ರವನ್ನು ಜಿಲ್ಲಾಧಿಕಾರಿಡಾ.ಡಿ.ಸಜಿತ್ ಬಾಬು ಅವರು ಬಿಡುಗಡೆಗೊಳಿಸಿದರು. ಐ.ಇ.ಸಿ. ಸಂಚಲನ ಸಮಿತಿ ಸಂಚಾಲಕ, ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ. ಅವರು ಕರಪತ್ರ ಪಡೆದುಕೊಂಡರು. ಕರೋನಾ ಕೋರ್ ಸಮಿತಿಸಭೆಯಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾ, ಹೆಚ್ಚುವರಿ ದಂಡನಾಧಿಕಾರಿಎನ್.ದೇವಿದಾಸ್, ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್, ಉಪ ಜಿಲ್ಲಾಧಿಕಾರಿ ಡಿ. ಆರ್.ಮೇಘಶ್ರೀ, ವಲಯ ಕಂದಾಯಾಧಿಕಾರಿ ಶಂಸುದ್ದೀನ್. ಹಣಕಾಸು ಅಧಿಕಾರಿ ಕೆ.ಸತೀಶನ್ , ಕರೋನಾ ಕೋರ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.