ಆಲಪ್ಪುಳ: ಕಾಯಂಕುಳಂನ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದ ಬಾಲಕಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಪೆರಿಂಗಲ ಮೂಲದ ಅಕ್ಷಯ ಆರ್ ಮಧು ಅವರ ಕೊಳೆತ ಶವವು ಕಟಾನಂನ ಸೇಂಟ್ ಥಾಮಸ್ ಮಿಷನ್ ಆಸ್ಪತ್ರೆಯ ಶವಾಗಾರದಲ್ಲಿ ಪತ್ತೆಯಾಗಿದೆ. ಘಟನೆಯಲ್ಲಿ ವಲ್ಲಿಕುನ್ನಂ ಪೆÇಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಾಯಂಕುಳಂನ ಪೆರಿಂಗಲಾ ಮೂಲದ ಅಕ್ಷಯಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ಮೊದಲು ಕೋವಿಡ್ ಪರೀಕ್ಷಾ ಫಲಿತಾಂಶವನ್ನು ಪಡೆಯಲು ವಿಳಂಬವಾದ ಕಾರಣ ಕಟ್ಟನಂನ ಸೇಂಟ್ ಥಾಮಸ್ ಮಿಷನ್ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿತ್ತು. ನಿನ್ನೆ ಸಂಜೆ ಕೋವಿಡ್ ಪರೀಕ್ಷೆಯ ಫಲಿತಾಂಶವನ್ನು ಪಡೆದ ಬಳಿಕ ಶವವನ್ನು ಪೆÇೀಸ್ಟ್ ಮಾರ್ಟಮ್ ಗಾಗಿ ಸಂಗ್ರಹಿಸಲು ಬಂದ ಸಂಬಂಧಿಕರು ಶವ ಕೊಳೆತ ಸ್ಥಿತಿಯಲ್ಲಿರುವುದು ಕಂಡುಬಂದಿದೆ.
ಶವ ಕೊಳೆಯುತ್ತಿರುವ ಸ್ಥಿತಿಯಲ್ಲಿ ಕಂಡು ಶವಾಗಾರದ ನೌಕರ ಶವವನ್ನು ವಿಲೇವಾರಿಗೆ ಶ್ರಮಿಸಿದ್ದ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಪೆÇಲೀಸರು ಬರುವ ತನಕ ಶವವನ್ನು ಮೂರು ಗಂಟೆಗಳ ಕಾಲ ನೆಲದ ಮೇಲೆ ಇಡಲಾಗಿತ್ತು. ಶವಾಗಾರದ ರೆಫ್ರಿಜರೇಟರ್‍ನಲ್ಲಿನ ವ್ಯವಸ್ಥೆಗಳು ದುಸ್ಥಿತಿಯಲ್ಲಿದ್ದವು ಮತ್ತು ಅಸುರಕ್ಷಿತ ಎಂದು ಸಂಬಂಧಿಕರು ಹೇಳುತ್ತಾರೆ.
ಆದರೆ ಕಟಾನಂ ಸೇಂಟ್ ಥಾಮಸ್ ಮಿಷನ್ ಆಸ್ಪತ್ರೆಯ ಅಧಿಕಾರಿಗಳು ವಿವರಣೆ ನೀಡಲು ಸಿದ್ಧರಿಲ್ಲ ಎಂದು ಸಂಬಂಧಿಕರು ಹೇಳಿದ್ದಾರೆ.