ತಿರುವನಂತಪುರ: ಕೋವಿಡ್ ನಿಯಂತ್ರಣಗಳ ಬಳಿಕ ನಿಧಾನವಾಗಿ ಆರಂಭಗೊಂಡಿರುವ ಸಂಚಾರ ಅನುಮತಿಯ ಮಧ್ಯೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ (ಕೆ.ಎಸ್.ಆರ್.ಟಿ.ಸಿ) ಪ್ರಯಾಣಿಕರ ಕೊರತೆಯನ್ನು ಎದುರಿಸುತ್ತಿದೆ ಎಂದು ವಿಶ್ಲೇಶಿಸಲಾಗಿದ್ದು ಇದಕ್ಕಾಗಿ ಬಸ್ ಟಿಕೆಟ್ ದರವನ್ನು ಕಡಿತಗೊಳಿಸುವ ಚಿಂತನೆ ನಡೆದಿದೆ ಎಂದು ತಿಳಿದುಬಂದಿದೆ.
ಸೂಪರ್‍ಫಾಸ್ಟ್-ಅಪ್ ಸೇವೆಗಳನ್ನು ಮಂಗಳವಾರ, ಬುಧವಾರ ಮತ್ತು ಗುರುವಾರ ಕೋವಿಡ್ ಪೂರ್ವ ದರಗಳಿಗೆ ಇಳಿಸಲಾಗುತ್ತದೆ. ಇದನ್ನು ಕೆಎಸ್‍ಆರ್‍ಟಿಸಿಯ ನಿರ್ದೇಶಕರ ಮಂಡಳಿ ಅನುಮೋದಿಸಿದೆ.
ಪ್ರಯಾಣಿಕರ ಸಂಖ್ಯೆ ಹೆಚ್ಚಾದಂತೆ ಹಳೆಯ ದರಗಳಲ್ಲಿ ಸೇವೆ ನೀಡಲು ನಿರ್ಧರಿಸಲಾಗಿದೆ. ಸೂಪರ್ ಕ್ಲಾಸ್ ಬಸ್‍ಗಳಲ್ಲಿ ಕೋವಿಡ್ ಕನಿಷ್ಠ ಶುಲ್ಕ ಮತ್ತು ಕಿ.ಮೀ ಶುಲ್ಕದಲ್ಲಿ 25-30 ಶೇ.ಹೆಚ್ಚಳ ಮಾಡಲಾಗಿತ್ತು. ಈ ವಿಭಾಗದಲ್ಲಿ ಸೂಪರ್ ಎಕ್ಸ್‍ಪ್ರೆಸ್, ಸೂಪರ್ ಏರ್ ಎಕ್ಸ್‍ಪ್ರೆಸ್, ಸ್ಕ್ಯಾನಿಯಾ, ಎಸಿ, ಹೈಟೆಕ್, ಸೂಪರ್ ಡಿಲಕ್ಸ್, ವೋಲ್ವೋ ಮತ್ತು ಲೋ ಫೆÇ್ಲೀರ್ ಬಸ್‍ಗಳಿವೆ.
ಇತರ ಸೇವೆಗಳಿಗೆ, ಕನಿಷ್ಠ 8 ರೂ.ಗಳ ಶುಲ್ಕವನ್ನು 5 ಕಿ.ಮೀ.ನಿಂದ 2.5 ಕಿ.ಮೀ ಮತ್ತು 5 ಕಿ.ಮೀ.ಗೆ 8 ರಿಂದ 10 ರೂ.ಗೆ ಇಳಿಸಲಾಗಿದೆ. ಕೋವಿಡ್ ವಿಸ್ತರಣೆಯ ನಂತರ ಕೆಎಸ್‍ಆರ್‍ಟಿಸಿ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ. ದೂರದ ಪ್ರಯಾಣದ ಬಸ್ಸುಗಳು ಓಡುತ್ತಿವೆ ಆದರೆ ಸಾಕಷ್ಟು ಪ್ರಯಾಣಿಕರು ಇಲ್ಲ ಎನ್ನುವುದು ಅಧಿಕಾರಿಗಳ ಅಳಲು.
ಸಮಾನಾಂತರ ಖಾಸಗಿ ಬಸ್ ಸೇವೆಗಳು ಸುಗಮವಾಗಿ ನಡೆಯುತ್ತಿವೆ. ಮಂಗಳವಾರ, ಬುಧವಾರ ಮತ್ತು ಗುರುವಾರ, ಬಸ್ಸುಗಳಲ್ಲಿ ಅರ್ಧದಷ್ಟು ಪ್ರಯಾಣಿಕರೂ ಇರುವುದಿಲ್ಲ ಎಂದು ವರದಿಯಾಗಿದೆ.