HEALTH TIPS

ಹಸಿರುಮನೆ ಯೋಜನಾನುಷ್ಠಾನ-ವಿವಿಧ ಪಂಚಾಯತಿಗಳಿಗೆ ಪ್ರಮಾಣ ಪತ್ರ ಹಸ್ತಾಂತರ

       ಕಾಸರಗೋಡು: ಸಾರ್ವಜನಿಕ ಸ್ಥಳಗಳು, ಖಾಸಗೀ ಬಂಜರು ಜಮೀನುಗಳು ಮತ್ತು ಸಾರ್ವಜನಿಕ ಶಾಲೆಗಳು ಸೇರಿದಂತೆ ನಗರದ ಬಂಜರು ಪ್ರದೇಶಗಳನ್ನು ಗುರುತಿಸುವ ಮೂಲಕ ವಿಶಿಷ್ಟ  ಮರಗಳು ಮತ್ತು ಸ್ಥಳೀಯ ಸಸ್ಯಗಳು ಸೇರಿದಂತೆ ನೈಸರ್ಗಿಕ ಜೀವವೈವಿಧ್ಯ ಹಸಿರು ಮನೆಗಳನ್ನು ನಿರ್ಮಿಸಲು ಯೋಜನೆ ಲಕ್ಷ್ಯವಿರಿಸಿದೆ. ಉದ್ಯೋಗ ಖಾತರಿ ಯೋಜನೆಯಡಿ ಹಸಿರುಮನೆಯ ಮೂರು ವರ್ಷಗಳ ನಿರಂತರ ನಿರ್ವಹಣೆಯನ್ನು ಖಚಿತಪಡಿಸಲಾಗುತ್ತಿದೆ.

         ಕಾಸರಗೋಡು ನಗರ ಸಭೆಯ ಅಧ್ಯಕ್ಷ ವಿ.ವಿ.ರಮೇಶನ್ ಮಾತನಾಡಿ, ರಾಜ್ಯ ಐಟಿ ಮಿಷನ್‍ನ ಸಹಾಯದಿಂದ, ಪ್ರತಿ ಹಸಿರುಮನೆ ಇರುವ ಸ್ಥಳ, ವಿಸ್ತೀರ್ಣ ಮತ್ತು ಮೊಳಕೆಗಳ ಸಂಖ್ಯೆಯನ್ನು ನಕ್ಷೆ ಮಾಡಲು ಉಪಗ್ರಹ ಮ್ಯಾಪಿಂಗ್ ವ್ಯವಸ್ಥೆಯನ್ನು ಸ್ಥಾಪಿಸಲಾಗುತ್ತಿದೆ ಎಂದರು.

     ಚೆಂಗಳ ಗ್ರಾಮ ಪಂಚಾಯಿತಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಜಿತ್ ಕೆ ರಾಮನ್ ಅವರು ಹರಿತ ಕೇರಳ ಮಿಷನ್ ಪ್ರಮಾಣಪತ್ರವನ್ನು ಪಂಚಾಯತ್ ಅಧ್ಯಕ್ಷ ಶಾಹಿನಾ ಸಲೀಮ್ ಅವರಿಗೆ ಹಸ್ತಾಂತರಿಸಿದರು. ಬಳಿಕ ಚೆಂಗಳ ಸರ್ಕಾರಿ ಯುಪಿ ಶಾಲೆಯಲ್ಲಿ ಹಸಿರು ಬಣ್ಣದಲ್ಲಿ ಪ್ರಕೃತಿ ಸಂರಕ್ಷಣೆಗಾಗಿ ಪ್ರತಿಜ್ಞೆ ಮಾಡಲಾಯಿತು.  ಉಪಾಧ್ಯಕ್ಷ ವಿ.ಪಿ.ಶಾಂತಕುಮಾರಿ, ಪಂಚಾಯತ್ ಸದಸ್ಯರಾದ ಎ ಅಹ್ಮದ್ ಹಾಜಿ, ಮೊಹಮ್ಮದ್ ತಾಹಿರ್, ಎಂಸಿಎ ಫೈಸಲ್, ಸಲಾಮ್ ಪನೆಯಾಲ, ಎ.ಮಮ್ಮಿಂಞÂ , ಸಹಾಯಕ ಕಾರ್ಯದರ್ಶಿ ರಾಮಚಂದ್ರನ್ ಮತ್ತು ಉದ್ಯೋಗ ಖಾತರಿ ಎಂಜಿನಿಯರ್ ಅಬ್ಬಾಸ್ ನಿಕ್ತಾಸ್ ಉಪಸ್ಥಿತರಿದ್ದರು.

     ಕುಂಬಳೆಯಲ್ಲಿ ಪಂಚಾಯತ್ ಅಧ್ಯಕ್ಷ ಕೆ.ಎಲ್.ಪುಂಡರೀಕಾಕ್ಷ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಫರಿದಾ ಝಕೀರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಚೇರಿ ಆವರಣದಲ್ಲಿ ಸಸ್ಯವನ್ನು ನೆಡಲಾಯಿತು. ಸ್ಥಾಯಿ ಸಮಿತಿಯ ಅಧ್ಯಕ್ಷ ಎ.ಕೆ.ಆರಿಫ್, ಪಂಚಾಯತ್ ಸದಸ್ಯ ಸುಕೇಶ್ ಭಂಡಾರಿ ಮತ್ತು ಸಹಾಯಕ ಕಾರ್ಯದರ್ಶಿ ದೀಪೇಶ್ ಉಪಸ್ಥಿತರಿದ್ದರು.

     ಪುತ್ತಿಗೆ ಪಂಚಾಯತ್ ಹಸಿರುಮನೆ ಯೋಜನೆಯ ಪ್ರಮಾಣಪತ್ರವನ್ನು ಪಂಚಾಯತ್ ಅಧ್ಯಕ್ಷೆ ಜೆ ಅರುಣಾ ಅವರು ಗ್ರಂಥಾಲಯ ಕೌನ್ಸಿಲ್ ಸದಸ್ಯ ಮತ್ತು ಸಾರ್ವಜನಿಕ ಕಾರ್ಯಕರ್ತ ಹುಸೇನ್ ಮಾಸ್ತರ್ ಪಿ.ಕೆ. ಅವರಿಂದ ಸ್ವೀಕರಿಸಿದರು. ಉಪಾಧ್ಯಕ್ಷ ಪಿ.ಬಿ. ಮೊಹಮ್ಮದ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಜಯಂತಿ ಮತ್ತು ಚನಿಯ ಪಾಡಿ, ಪಂಚಾಯತ್ ಸದಸ್ಯರಾದ ಅಬ್ದುಲ್ಲಾ ಮುಗು, ಕೃಷಿ ಅಧಿಕಾರಿ ಅಮ್ಸಿನಾ, ಸಹಾಯಕ ಕಾರ್ಯದರ್ಶಿ ವಿ.ಪಿ ಥಾಮಸ್ ಮತ್ತು ಉದ್ಯೋಗ ಖಾತರಿ ಯೋಜನೆ ಎಂಜಿನಿಯರ್ ಶಫಿ ಉಪಸ್ಥಿತರಿದ್ದರು.

      ಮೀಂಜ ಪಂಚಾಯತ್ ನ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷದ್ ವರ್ಕಾಡಿ ಅವರು ಅರ್ಹತಾ ಪ್ರಮಾಣಪತ್ರವನ್ನು ಮೀಂಜ ಪಂಚಾಯತ್ ಅಧ್ಯಕ್ಷೆ ಶಂಶಾದ್ ಶುಕೂರ್ ಅವರಿಗೆ ಹಸ್ತಾಂತರಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೃಷ್ಣ ಕೊಮ್ಮಂಗಳ, ಎಸ್.ಶೋಭಾ, ಪಂಚಾಯತ್ ಸದಸ್ಯರಾದ ಕುಸುಮಾ ಮೋಹನ್, ಸುಂದರಿ ಆರ್.ಶೆಟ್ಟಿ, ವಿ.ಪಿ.ಚಂದ್ರಾವತಿ, ಶಾಲಿನಿ ಶೆಟ್ಟಿ, ಚಂದ್ರಶೇಖರ, ಶಾಂತಾರಾಮ್, ಕೃಷಿ ಅಧಿಕಾರಿ ಮೊದಲಾದವರಿದ್ದರು.

        ಶಾಸಕ ಎನ್‍ಎ ನೆಲ್ಲಿಕುನ್ನು ಕಾಸರಗೋಡು ಪುರಸಭೆಯಲ್ಲಿ ಮುಖ್ಯ ಅತಿಥಿಯಾಗಿದ್ದರು. ಮೆಚ್ಚುಗೆಯ ಪತ್ರವನ್ನು ಶಾಸಕರು ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷ ಬೀಫಾತಿಮಾ ಇಬ್ರಾಹಿಂ ಅವರಿಗೆ ಹಸ್ತಾಂತರಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಎಂ.ನೈಮುನ್ನಿಸಾ, ಕಾರ್ಯದರ್ಶಿ ಜೆ ಮುಹಮ್ಮದ್ ಶಫಿ ಮತ್ತು ಉದ್ಯೋಗ ಖಾತರಿ ಯೋಜನೆಯ ಮೇಲ್ವಿಚಾರಕ ಸತೀಶನ್ ಉಪಸ್ಥಿತರಿದ್ದರು.  ಶಾಸಕರು ಜಿ.ಯು.ಪಿ ಶಾಲೆಯ ಆವರಣದಲ್ಲಿ ಹಸಿರು ಮರವೊಂದನ್ನು ನೆಟ್ಟರು.

       ಸಿ ಪಿ ಸಿ ಆರ್ ಐ  ವಿಜ್ಞಾನಿ ಸಿ ತಂಬಾನ್ ಅವರು ಅರ್ಹತಾ ಪ್ರಮಾಣಪತ್ರವನ್ನು ಮೊಗ್ರಾಲ್ ಪುತೂರಿನಲ್ಲಿ ಪಂಚಾಯತ್ ಅಧ್ಯಕ್ಷ ಎ.ಎ.ಜಲೀಲ್ ಅವರಿಗೆ ಹಸ್ತಾಂತರಿಸಿದರು. ಪಂಚಾಯತ್ ಉಪಾಧ್ಯಕ್ಷೆ ನ್ಯಾಯವಾದಿ. ಸಮೀರಾ ಫೈಸಲ್, ಸ್ಥಾಯಿ ಸಮಿತಿ ಅಧ್ಯಕ್ಷ ಮುಜೀಬ್ ಕಂಬಾರ್, ಪಂಚಾಯತ್ ಸದಸ್ಯರಾದ ಅಬ್ದುಲ್ಲಕುಂಞÂ, ಪ್ರಮೀಲಾ, ಕೆ ಲೀಲಾ, ಹಮೀದ್, ಐಷತ್ ಫೌಜಾನಾ, ಜಯಂತಿ, ಸುಹರಾ ಕರೀಮ್, ಆನಂದ, ಐಷತ್ ಫೌಜಿಯಾ, ಕಾರ್ಯದರ್ಶಿ,  ಉದ್ಯೋಗ ಖಾತರಿ ಯೋಜನೆ ಪಂಚಾಯತ್ ಯೋಜನಾಧಿಕಾರಿ ಉಪಸ್ಥಿತರಿದ್ದರು. 

   ಬದಿಯಡ್ಕ ಪಂಚಾಯತಿಯ ಪರಿಸರ ಕಾರ್ಯಕರ್ತ ಎಂ.ಎಚ್. ಜನಾರ್ಧನ ಅವರು ಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅವರಿಗೆ ಪ್ರಮನಾಣ ಪತ್ರ ಹಸ್ತಾಂತರಿಸಿದರು.  ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಪ್ರೇಮಾ, ಉದ್ಯೋಗ ಖಾತರಿ ಎಂಜಿನಿಯರ್ ಅಶ್ವತಿ ಮತ್ತು ಮೇಲ್ವಿಚಾರಕ ಸಜಿತಾ ಉಪಸ್ಥಿತರಿದ್ದರು.

      ಮಧೂರಿನಲ್ಲಿ ಹಿರಿಯ ವೈದಿಕ ವಿದ್ವಾಂಸ ಉಳಿಯ ವಿಷ್ಣು ಆಸ್ರ  ಅವರಿಂದ ಪಂಚಾಯತ್ ಅಧ್ಯಕ್ಷೆ ಮಾಲತಿ ಸುರೇಶ್ ಪ್ರಮಾಣಪತ್ರವನ್ನು ಪಡೆದರು. ಉಪಾಧ್ಯಕ್ಷ ದಿವಾಕರ, ವಾರ್ಡ್ ಸದಸ್ಯ ಮೈಮೂನಾ ಮತ್ತು ಉದ್ಯೋಗ ಖಾತರಿ ಎಂಜಿನಿಯರ್ ಮಂಜುಷಾ ಉಪಸ್ಥಿತರಿದ್ದರು.

    ಹಸಿರು ಕೇರಳ ಮಿಷನ್ ಬ್ಲಾಕ್ ಸಂಯೋಜಕ ಎನ್ ಇಬ್ರಾಹಿಂ ಅವರು ವರ್ಕಾಡಿಯಲ್ಲಿ ಪಂಚಾಯತ್ ಅಧ್ಯಕ್ಷ ಅಬ್ದುಲ್ ಮಜೀದ್ ಅವರಿಗೆ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು. ಉಪಾಧ್ಯಕ್ಷ ಸುನೀತಾ ಡಿಸೋಜ, ಪಂಚಾಯತ್ ಸದಸ್ಯರಾದ ಜಸಿಂತಾ ಡಿಸೋಜ, ರಹಮತ್ ರಜಾಕ್, ತುಳಸಿ ಕುಮಾರಿ, ಪೂರ್ಣಿಮಾ, ವಸಂತ, ಗೀತಾ ಸಾಮಾನಿ, ಇಂದಿರಾ, ಸೀನ, ಭಾರತಿ, ಗೋಪಾಲಕೃಷ್ಣ ಪಜ್ವಾ, ಸದಾಶಿವ ನಾಯಕ್, ಆನಂದ, ಕಾರ್ಯದರ್ಶಿ ರಾಜೇಶ್ವರಿ ಮೊದಲಾದವರಿದ್ದರು.

       ಪೈವಳಿಕೆಯಲ್ಲಿ ಸಾಮಾಜಿಕ ಕಾರ್ಯಕರ್ತ ಅಬ್ದುಲ್ಲಾ ಪಂಚಾಯತ್ ಅಧ್ಯಕ್ಷೆ ಭಾರತಿ ಜೆ.ಶೆಟ್ಟಿ ಅವರಿಗೆ ಮೆಚ್ಚುಗೆಯ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು. ಸ್ಥಾಯಿ ಸಮಿತಿಯ ಅಧ್ಯಕ್ಷ ಎಂ.ಕೆ.ಅಮೀರ್, ಹರೀಶ್, ಪಂಚಾಯತ್ ಸದಸ್ಯರು, ಸಿಡಿಎಸ್ ಅಧ್ಯಕ್ಷರು, ಪಂಚಾಯತ್ ಕಾರ್ಯದರ್ಶಿ ಮತ್ತು ಸಿಬ್ಬಂದಿಗಳಿದ್ದರು.

       ಮಂಜೇಶ್ವರ ಪಂಚಾಯತಿ ಉಪಾಧ್ಯಕ್ಷೆ ಶಶಿಕಲಾ ಅವರಿಗೆ ಜಿಲ್ಲಾ ಪಂಚಾಯತ್ ಸದಸ್ಯೆ ಮುಮ್ತಾಜ್ ಸಮೀರಾ ಅವರು ಪ್ರಮಾಣಪತ್ರವನ್ನು ಹಸ್ತಾಂತರಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷರು ಉಪಸ್ಥಿತರಿದ್ದರು.

       ಮಂಗಲ್ಪಾಡಿ ಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎಕೆಎಂ ಅಶ್ರಫ್ ಅವರು ಪ್ರಮಾಣಪತ್ರವನ್ನು ಪಂಚಾಯತ್ ಅಧ್ಯಕ್ಷ ಶಾಹುಲ್ ಹಮೀದ್ ಬಂದ್ಯೋಡು ಅವರಿಗೆ ಹಸ್ತಾಂತರಿಸಿದರು. ಕಾರ್ಯದರ್ಶಿ ಧನೇಶ್, ಉದ್ಯೋಗ ಖಾತರಿ ಯೋಜನೆ ಎಂಜಿನಿಯರ್ ಇರ್ಷಾದ್, ಉದ್ಯೋಗ ಖಾತರಿ ಯೋಜನೆ ಮೇಲ್ವಿಚಾರಕ ಹನೀಫಾ ಮತ್ತು ಸಿಬ್ಬಂದಿಗಳಿದ್ದರು.

   


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries