ಬದಿಯಡ್ಕ: ಬದಿಯಡ್ಕ ವಿಭಾಗೀಯ ಅಬಕಾರಿ ರೇಂಜ್ ಆಫೀಸ್ ಕಟ್ಟಡದ ಉದ್ಘಾಟನೆ ನಾಳೆ(ಅ.13ರಂದು) ನಡೆಯಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬೆಳಗ್ಗೆ 11 ಗಂಟೆಗೆ ಕಟ್ಟಡವನ್ನು ಉದ್ಘಾಟಿಸುವರು.
ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುವ ಸಮಾರಂಭದಲ್ಲಿ ಅಬಕಾರಿ ಸಚಿವ ಟಿ.ಪಿ.ರಾಮಕೃಷ್ಣನ್ ಅಧ್ಯಕ್ಷತೆ ವಹಿಸುವರು.ಕಂದಾಯ ಸಚಿವ ಇ.ಚಂದ್ರಶೇಖರನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು.ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕ ಎನ್.ಎ.ನೆಲ್ಲಿಕುನ್ನು, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಜಿಸಿ ಬಶೀರ್, ಜಿಲ್ಲಾಧಿಕಾರಿ ಡಾ.ಡಿ.ಸಜೀತ್ ಬಾಬು ಮತ್ತು ಅಬಕಾರಿ ಆಯುಕ್ತ ಎಸ್.ಆನಂದ ಕೃಷ್ಣನ್ ಮಾತನಾಡುವರು.