ತಿರುವನಂತಪುರ: ಸ್ವಪ್ನಾ ಸುರೇಶ್ ಳ ನೇಮಕಾತಿ ಬಗ್ಗೆ ತಮಗೆ ತಿಳಿದಿರಲಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಅವರ ನೇಮಕ ಮುಖ್ಯಮಂತ್ರಿಯವರ ಅರಿವಿನಿಂದ ಕೂಡಿದ್ದಾಗಿತ್ತು ಎಂಬ ವದಂತಿಯ ಹಿನ್ನೆಲೆಯಲ್ಲಿ ನಿನ್ನೆ ಮಾಧ್ಯಮಗಳ ಪ್ರಶ್ನೆಗೆ ಮುಖ್ಯಮಂತ್ರಿ ಉತ್ತರಿಸುತ್ತಿದ್ದರು.
ಈ ಮಾಹಿತಿ ಹೊರಬಂದ ಬಳಿಕವಷ್ಟೇ ತನಗದು ಅರಿವಿಗೆ ಬಂದಿರುವುದು. ಅಂತಹ ನೇಮಕಾತಿಗೆ ಸಾಮಾನ್ಯವಾಗಿ ಮುಖ್ಯಮಂತ್ರಿಯ ಅರಿವಿಗೆ ಬರಬೇಕೆಂದಿಲ್ಲ. ವಿವಾದವೆದ್ದಾಗ ಮಾತ್ರ ಅಂತಹ ನೇಮಕಾತಿಯ ಬಗ್ಗೆ ತಿಳಿಸಲಾಗಿದೆ ಎಂದು ಈಗಾಗಲೇ ಸ್ಪಷ್ಟಪಡಿಸಲಾಗಿದೆ ಎಂದರು.
ಈ ಹೇಳಿಕೆಯಲ್ಲಿ ವಿಷಯಗಳು ಸ್ಪಷ್ಟವಾಗಿವೆ ಎಂದು ತೋರುತ್ತದೆ. ತನ್ನ ಅರಿವಿಗೆ ಬಂದು ನೇಮಕಾತಿ ನಡೆದಿದೆ ಎನ್ನುವುದನ್ನು ಈವರೆಗೆ ಎಲ್ಲೂ ಖಾತರಿಪಡಿಸಲಾಗಿಲ್ಲ. ಮುಖ್ಯಮಂತ್ರಿಗೆ ತಿಳಿಸುವುದಾಗಿ ತಿಳಿಸಿದ್ದೇನೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಆ ಭಾಗವನ್ನು ಮರೆಯಬಾರದು. ಎಂದು ಮುಖ್ಯಮಂತ್ರಿ ಹೇಳಿದರು.
ಏತನ್ಮಧ್ಯೆ, ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ವಿರುದ್ಧ ಕೊಫೆಪೆÇೀಸಾ ಆರೋಪ ಹೊರಿಸಲಾಗಿದೆ. ಕೋಫೆಪೆÇಸಾ ಕಾನೂನಿನ ಅನ್ವಯ ಅಪರಾಧಿಯನ್ನು ವಿಚಾರಣೆಯಿಲ್ಲದೆ ಒಂದು ವರ್ಷದವರೆಗೆ ಬಂಧಿಸಬಹುದು ಎಂದಿದೆ.
ಇದಕ್ಕೂ ಮೊದಲು ಸ್ವಪ್ನಾ ಸುರೇಶ್ ಅವರಿಗೆ ಚಿನ್ನ ಕಳ್ಳಸಾಗಣೆಗೆ ಸಂಬಂಧಿಸಿದಂತೆ ಕಸ್ಟಮ್ಸ್ ದಾಖಲಿಸಿದ ಪ್ರಕರಣದಲ್ಲಿ ಜಾಮೀನು ನೀಡಲಾಗಿತ್ತು. ಆದರೆ, ಇಡಿ ದಾಖಲಿಸಿದ ಪ್ರಕರಣ ಮತ್ತು ಎನ್‍ಐಎ ದಾಖಲಿಸಿರುವ ಪ್ರಕರಣದಲ್ಲಿ ಆಕೆಗಿನ್ನೂ ಜಾಮೀನು ನೀಡಿಲ್ಲ.