ಬೆಂಗಳೂರು: ದೇಶದಲ್ಲಿ ನಡೆಯುತ್ತಿರುವ ಹಬ್ಬ ಪರ್ವದಲ್ಲಿ, ಇಂಡಿಯನ್ ಆಯಿಲ್ ಗ್ರಾಹಕರ ಅನುಕೂಲಕ್ಕಾಗಿ ಮತ್ತೊಂದು ಅನುಕೂಲ ಮಾಡಿಕೊಡಲಾಗಿದೆ. ಇದು ದೇಶಾದ್ಯಂತ ಇಂಡೇನ್ ಎಲ್ಪಿಜಿ ಮರುಪೂರಣದ ಸಿಲಿಂಡರ್ ಬುಕಿಂಗ್ ಗಾಗಿ ಒಂದೇ ಸಂಖ್ಯೆಯ ಸೇವೆಯನ್ನು ಪ್ರಾರಂಭಿಸಿದೆ. ಸಿಲಿಂಡರ್ ಬುಕಿಂಗ್ ಗೆ 7718955555 ಆಗಿದ್ದು,ಗ್ರಾಹಕರಿಗೆ ಈ ಸೇವೆ 24x7 ಲಭ್ಯವಿರುತ್ತದೆ.
ಅಖಿಲ ಭಾರತ ಮಟ್ಟದಲ್ಲಿ ಎಲ್.ಪಿ.ಜಿ. ಬುಕ್ಕಿಂಗ್ ನ್ನು ಒಂದೇ ಸಂಖ್ಯೆಯಲ್ಲಿ -ಎಸ್.ಎಂ.ಎಸ್. ಮತ್ತು ಐವಿಆರ್.ಎಸ್.- ಮೂಲಕ ಮಾಡಬಹುದಾಗಿದ್ದು, ಇದು ಇಂಡೇನ್ ಎಲ್.ಪಿ.ಜಿ. ಮರುಪೂರಣ ಸಿಲಿಂಡರ್ ಬುಕ್ ಮಾಡುವ ಗ್ರಾಹಕರಿಗೆ ಅನುಕೂಲತೆ ಹೆಚ್ಚಿಸುವ ಮಹತ್ವದ ಕ್ರಮವಾಗಿದೆ. ಇದರಿಂದಾಗಿ ಗ್ರಾಹಕರು ಒಂದು ದೂರಸಂಪರ್ಕ ವೃತ್ತದಿಂದ ಮತ್ತೊಂದಕ್ಕೆ, ಅಥವಾ ಯಾವುದೇ ರಾಜ್ಯಕ್ಕೆ ಹೋದರೂ, ಅವರ ಇಂಡೇನ್ ಮರುಪೂರಣ ಸಿಲಿಂಡರ್ ಬುಕಿಂಗ್ ಸಂಖ್ಯೆ ಒಂದೇ ಆಗಿರುತ್ತದೆ.
ಪ್ರಸ್ತುತ ವ್ಯವಸ್ಥೆಯಲ್ಲಿ ಇಂಡೇನ್ ಎಲ್.ಪಿ.ಜಿ. ಸಿಲಿಂಡರ್ ಬುಕ್ಕಿಂಗ್ ನ ದೂರವಾಣಿ ಸಂಖ್ಯೆ ದೂರಸಂಪರ್ಕ ವೃತ್ತ ನಿರ್ದಿಷ್ಟವಾಗಿದ್ದು, ಇದು 31.10.2020ರ ಮಧ್ಯರಾತ್ರಿಯಿಂದ ನಿಷ್ಕ್ರಿಯವಾಗಲಿದೆ ಮತ್ತು ಎಲ್.ಪಿ.ಜಿ. ಸಿಲಿಂಡರ್ ಬುಕ್ಕಿಂಗ್ ನ ಸಮಾನ ಸಂಖ್ಯೆ ಅಂದರೆ 7718955555, ಜಾರಿಗೆ ಬರುತ್ತದೆ.
ದಯವಿಟ್ಟು ಗಮನಿಸಿ ಇಂಡೇನ್ ಎಲ್.ಪಿಜಿ. ಸಿಲಿಂಡರ್ ಬುಕ್ಕಿಂಗ್ ಅನ್ನು ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮಾತ್ರವೇ ಮಾಡಬಹುದು. ಎಲ್.ಪಿ.ಜಿ. ಸಿಲಿಂಡರ್ ಬುಕ್ಕಿಂಗ್ ನ ಪರಿಷ್ಕೃತ ಪ್ರಕ್ರಿಯೆ ಮತ್ತು ಮೊಬೈಲ್ ಸಂಖ್ಯೆ ನೋಂದಣಿ ಹೀಗಿದೆ.
ಗ್ರಾಹಕರ ದೂರವಾಣಿ ಸಂಖ್ಯೆ ಈಗಾಗಲೇ ಇಂಡೇನ್ ದಾಖಲೆಗಳಲ್ಲಿ ನೋಂದಣಿಯಾಗಿದ್ದರೆ, ಐವಿಆರ್.ಎಸ್. 16 ಅಂಕಿಗಳ ಗ್ರಾಹಕರ ಐಡಿಯನ್ನು ಕೇಳುತ್ತದೆ. ಈ 16 ಅಂಕಿಗಳ ಗ್ರಾಹಕರ ಐಡಿ ಇಂಡೇನ್ ಎಲ್.ಪಿಜಿ. ಗ್ರಾಹಕರ ಇನ್ ವಾಯ್ಸ್/ನಗದು ಮೆಮೋ/ಚಂದಾ ವೋಚರ್ ನಲ್ಲಿ ನಮೂದಾಗಿರುತ್ತದೆ. ಗ್ರಾಹಕರ ದೃಢೀಕರಣದ ತರುವಾಯ ಮರುಪೂರಣ ಸಿಲಿಂಡರ್ ಬುಕ್ಕಿಂಗ್ ಅಂಗೀಕಾರವಾಗುತ್ತದೆ.
ಒಂದೊಮ್ಮೆ ಗ್ರಾಹಕರ ಮೊಬೈಲ್ ಸಂಖ್ಯೆ ಇಂಡೇನ್ ದಾಖಲೆಗಳಲ್ಲಿ ಲಭ್ಯವಿಲ್ಲದಿದ್ದಲ್ಲಿ, ಆಗ ಒಂದು ಬಾರಿಯ ಮೊಬೈಲ್ ನಂಬರ್ ನೋಂದಣಿಯನ್ನು ಗ್ರಾಹಕರು ಸಂಖ್ಯೆ 7 ರಿಂದ ಆರಂಭವಾಗುವ ಅವರ 16 ಅಂಕಿಗಳ ಗ್ರಾಹಕರ ಐಡಿಯನ್ನು ಟೈಪ್ ಮಾಡುವ ಮೂಲಕ ಮಾಡಬಹುದಾಗಿದೆ. ಅದೇ ಐವಿಆರ್. ಎಸ್ಕರೆಯಲ್ಲಿ ದೃಢೀಕರಣದ ನಂತರ ಇದನ್ನು ಅನುಸರಿಸಬೇಕು. ದೃಢೀಕರಣದನಂತರ, ಗ್ರಾಹಕರ ಮೊಬೈಲ್ ಸಂಖ್ಯೆ ನೋಂದಣಿಯಾಗುತ್ತದೆ ಮತ್ತು ಎಲ್ಪಿಜಿ ಮರು ಪೂರಣ ಬುಕಿಂಗ್ ಅನ್ನು ಸ್ವೀಕರಿಸಲಾಗುತ್ತದೆ. ಗ್ರಾಹಕರಈ 16-ಅಂಕಿಯ ಗ್ರಾಹಕ ಐಡಿಯನ್ನು ಇಂಡೇನ್ ಎಲ್ಪಿಜಿಇ ನ್ವಾಯ್ಸ್ / ನಗದುಮೆಮೋ / ಚಂದಾದಾರಿಕೆಚೀಟಿಯಲ್ಲಿಉಲ್ಲೇಖಿಸಲಾಗಿರುತ್ತದೆ.
ನಿಮ್ಮ ನೆಚ್ಚಿನ ಇಂಡೇನ್ ಎಲ್.ಪಿ.ಜಿ.ಯ ಹೆಚ್ಚಿನ ನವೀಕರಣಗಳಿಗಾಗಿ ನಮ್ಮ ಅಂತರ್ಜಾಲ ತಾಣhttps://cx.indianoil.in ಲಾಗ್ ಇನ್ ಮಾಡಿ ಅಥವಾ ಇಂಡಿಯನ್ ಆಯಿಲ್ ಒನ್ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ ಎಂದು ಸೂಚಿಸಲಾಗಿದೆ.
ಸಮರಸ ಸುದ್ದಿಯ ನವೀನ ಮಾದರಿಯ ಯೂಟ್ಯೂಬ್ ಚಾನೆಲ್ ಗೆ ಓದುಗರ ಪ್ರತಿಕ್ರಿಯೆ ಮಹತ್ವಪೂರ್ಣದ್ದಾಗಿದ್ದು ಚಾನೆಲ್ ಚಂದಾದಾರರಾಗಿ (SUBSCRIBE) ಬೆಲ್ ಬಟನ್ ಅನುಮೋದಿಸುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಬೇಕೆಂದು ವಿನಂತಿ. ಸಮರಸ ಸುದ್ದಿ ಬಳಗ